Home News Belthangady: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್‌ ಬಂದಾಗ ವ್ಯಕ್ತಿಯೊಬ್ಬರ ಬೈಕ್‌ ಕಳ್ಳತನ

Belthangady: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್‌ ಬಂದಾಗ ವ್ಯಕ್ತಿಯೊಬ್ಬರ ಬೈಕ್‌ ಕಳ್ಳತನ

Belthangady

Hindu neighbor gifts plot of land

Hindu neighbour gifts land to Muslim journalist

Belthangady: ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಬಂದವರ ಬೈಕನ್ನು ಕಳ್ಳರು ಕಳ್ಳತನ ಮಾಡಿದ ಘಟನೆಯೊಂದು ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: How To Clean Bathroom: ಈ ಆಹಾರ ಪದಾರ್ಥಗಳು ಬಾತ್ರೂಮ್ ಅನ್ನು ಫಳಫಳ ಬೆಳಗಿಸುವಲ್ಲಿ ಸಹಾಯಕಾರಿ; ನೀವು ಆಶ್ಚರ್ಯಗೊಳ್ಳುವುದು ಖಂಡಿತ

ಮೇ.24 ರಂದು ತನ್ನ ಮೋಟಾರ್‌ ಸೈಕಲ್‌ನಲ್ಲಿ ತಮ್ಮ ಮಗ ದಿನೇಶ್‌ ಅವರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದ ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಅವರು ತಮ್ಮ ಬೈಕನ್ನು ನಿಲ್ಲಿಸಿ ದೇವರ ದರ್ಶನಕ್ಕೆಂದು ಹೋಗಿದ್ದಾರೆ. ಇವರ ಜೊತೆ ಇನ್ನೂ ಹಲವು ಮಂದಿ ಬೈಕ್‌ನಲ್ಲಿ ಬಂದಿದ್ದು, ಮುತ್ತಯ್ಯ ಆಚಾರಿ ಅವರು ದೇವರ ದರ್ಶನ ಮುಗಿಸಿ ವಾಪಾಸು ಬಂದಾಗ ಇವರ ಬೈಕ್‌ ಮಾತ್ರ ಕಾಣದೇ ಹೋಗಿದೆ.

ಎಷ್ಟೇ ಹುಡುಕಾಟ ನಡೆಸಿದರೂ ಬೈಕ್‌ ಸಿಗದ ಕಾಋಣ ಬೈಕ್‌ ಕಳ್ಳತನವಾಗಿರುವ ಕುರಿತು ಧರ್ಮಸ್ಥಳ ಪೊಲೀಸರಿಗೆ ದೂರನ್ನು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ತಂಗಿದ್ದ ಮೈಸೂರು ಹೋಟೆಲ್‌ ಬಿಲ್‌ 80 ಲಕ್ಷ ಬಾಕಿ