Rahul Gandhi: ಮೋದಿ ಚರ್ಚೆಗೆ ಬಂದ್ರೆ, ರಾಹುಲ್ ಕೇಳೋ ಮೊದಲನೆ ಪ್ರಶ್ನೆಯೇ ಇದಂತೆ !!

Share the Article

Rahul Gandhi: ಲೋಕಸಭಾ ಚುನಾವಣೆ ಕಾವು ಜೋರಾಗಿದೆ. 5 ನೇ ಹಂತದ ಚುನಾವಣೆಗೆ ಅಖಾಡ ಸಿದ್ದವಾದರೂ ಆರೋಪ, ಪ್ರತ್ಯಾರೋಪಗಳು ಜೋರಾಗಿಯೇ ಇವೆ. ಇದರ ನಡುವೆ ಚರ್ಚೆಗೆ ಬನ್ನಿ, ಚರ್ಚೆಗೆ ಬನ್ನಿ ಎಂದು ಪಕ್ಷಗಳು, ಪ್ರತಿಪಕ್ಷಗಳು ಬೊಬ್ಬಿಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಮೋದಿ(PM Modi) ಏನಾದರೂ ಚರ್ಚೆಗೆ ಬಂದರೆ, ಕೇಳಲು ಪ್ರಶ್ನೆಗಳನ್ನು ರೆಡಿ ಮಾಡಿ ಇಟ್ಟಿದ್ದಾರೆ. ಅದೂ ಕೂಡ ಮೊದಲೈ ಕೇಳುವ ಪ್ರಶ್ನೆಯೇ ಇದಂತೆ!!

ಇದನ್ನೂ ಓದಿ: High Court: ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು- ಹೈಕೋರ್ಟ್ ಆದೇಶ

ಹೌದು, ಸಂಸದ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಚರ್ಚೆಗೆ ಬರುವಂತೆ ಹೊಸ ಸವಾಲು ಹಾಕಿದ್ದಾರೆ. ನಾನು ಚರ್ಚೆಗೆ ಸಿದ್ಧ, ಪ್ರಧಾನಿ ಮೋದಿ ಬರ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೊದಲು ಕೇಳುವ ಪ್ರಶ್ನೆ ಯಾವುದೆಂದೂ ಅವರು ಹೇಳಿದ್ದಾರೆ.

ಮೋದಿಗೆ ರಾಹುಲ್ ಗಾಂಧಿ ಕೇಳುವ ಮೊದಲ ಪ್ರಶ್ನೆ ಏನು?

ಒಂದು ವೇಳೆ ಮೋದಿ ಚರ್ಚಗೆ ಬಂದ್ರೆ ಅದಾನಿಗೂ(Adani) ನಿಮಗೂ ಏನು ಸಂಬಂಧ ಅನ್ನೋದು ನನ್ನ ಮೊದಲ ಪ್ರಶ್ನೆ ಆಗಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Iran Helicopter Crash : ಇರಾನ್ ಅಧ್ಯಕ್ಷ , ಸಚಿವ ಮೃತ್ಯು

ಉಳಿದ ಪ್ರಶ್ನೆಗಳ ಬಗ್ಗೆ ರಾಹುಲ್ ಹೇಳಿದ್ದೇನು?

ಚುನಾವಣಾ ಬಾಂಡ್(Election Bond)ಕುರಿತ ಪ್ರಶ್ನೆ ಕೇಳುತ್ತೇನೆ. ಬಳಿಕ ಕೊರೊನಾ(Corona)ದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವಂತೆ ಹೇಳಿದ್ದು ಯಾಕೆ? ಚೀನಾದ ಅತಿಕ್ರಮಣ, ಅಗ್ನಿಫಥ್ ಯೋಜನೆಗಳ ಬಗ್ಗೆ ನಾನು ಪ್ರಧಾನಿ ಮೋದಿ ಅವರನ್ನು ಕೇಳುತ್ತೇನೆ. ಮೋದಿ ಉತ್ತರಿಸಲಾಗದ ಹಲವು ಪ್ರಶ್ನೆಗಳು ನನ್ನ ಬಳಿಯಲ್ಲಿವೆ ಎಂದು ರಾಹುಲ್ ಹೇಳಿದ್ದಾರೆ.

Leave A Reply

Your email address will not be published.