Nuclear Bomb Test: ಭಾರತದ ಮೊದಲ ಪರಮಾಣು ಪರೀಕ್ಷೆಗೆ ‘ಸ್ಟೈಲಿಂಗ್ ಬುದ್ಧ’ ಎಂದು ಏಕೆ ಹೆಸರಿಡಲಾಯಿತು ಗೊತ್ತಾ? : 50 ವರ್ಷಗಳಾದರೂ ಕಾರ್ಯಾಚರಣೆ ನಿಗೂಢ
Nuclear Bomb Test: ಬುದ್ಧನ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ಆತನ ಶಾಂತಿಯ ಸಂದೇಶಗಳು, ಹಾಗಾದರೆ ಭಾರತದ ತನ್ನ ಮೊದಲ ಪರಮಾಣು ಪರೀಕ್ಷೆಗೆ(Nuclear Bomb Test) ‘ಆಪರೇಷನ್ ಸ್ಟೈಲಿಂಗ್ ಬುದ್ಧ’ ಎಂದು ಏಕೆ ಕರೆಯಿತು ಗೊತ್ತಾ?. ವಾಸ್ತವವಾಗಿ, ಇಂದಿರಾಗಾಂಧಿ(Indira Gandhi) ಸರ್ಕಾರದ ಅವಧಿಯಲ್ಲಿ ನಡೆಸಿದ ಈ ಪರೀಕ್ಷೆ ಇದೀಗ 50 ವರ್ಷಗಳನ್ನು ಪೂರೈಸಿದೆ.
ಈ ಕಾರ್ಯಾಚರಣೆಯನ್ನು ‘ಬುದ್ದ ಪೂರ್ಣಿಮೆ’ಯ ದಿನದಂದು ನಡೆಸಿದ್ದರಿಂದ ಈ ಪರಮಾಣು ಪರೀಕ್ಷೆಗೆ “ಸ್ಟೈಲಿಂಗ್ ಬುದ್ದ”(Smiling Buddha) ಎಂದು ಹೆಸರಿಡಲಾಯಿತು. ವಾಸ್ತವವಾಗಿ, 1974 ರಲ್ಲಿ ಪರಮಾಣು ಪರೀಕ್ಷೆಯ ದಿನಾಂಕವನ್ನು ಮೇ 18 ರಂದು ನಿಗದಿಪಡಿಸಲಾಯಿತು. ಆ ಸಮಯದಲ್ಲಿ ಪ್ರಪಂಚದಾದ್ಯಂತದ ದೇಶಗಳು ಭಾರತದ ಪೋಕ್ರಾನ್(Pocron) ಮೇಲೆ ಬೇಹುಗಾರಿಕೆಯಲ್ಲಿ ತೊಡಗಿದ್ದವು. ಆಗ ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನು ಹೊರತುಪಡಿಸಿ, ವಿಶ್ವಸಂಸ್ಥೆಯಲ್ಲಿ ಯಾವುದೇ ದೇಶವು ಪರಮಾಣು ಪರೀಕ್ಷೆಯನ್ನು(Nuclear Bomb Test) ನಡೆಸುವಂತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಕಾರ್ಯಾಚರಣೆಯನ್ನು ರಹಸ್ಯವಾಗಿ ಮಾಡುವುದೇ ದೊಡ್ಡ ಸವಾಲಾಗಿತ್ತು.
ಭಾರತ 50 ವರ್ಷಗಳ ಹಿಂದೆ ಅಣ್ವಸ್ತ್ರ ಪರೀಕ್ಷೆ(Nuclear Bomb Test) ನಡೆಸಿ ಜಗತ್ತಿಗೇ ಭಾರತ ಏನು ಎಂಬುದನ್ನು ತಿಳಿಸಿತ್ತು. ಅಂದು ಭಾರತ ಶಾಂತಿ ಕಾಪಾಡಲು ಈ ಪರಮಾಣು ಪರೀಕ್ಷೆ (Nuclear Bomb Test) ನಡೆಸಲಾಗಿದೆ ಎಂದು ಹೇಳಿತ್ತು. ಆದ್ದರಿಂದಲೇ ಅದಕ್ಕೆ ಸ್ಟೈಲಿಂಗ್ ಬುದ್ಧ ಎಂಬ ಹೆಸರು ಇನ್ನಷ್ಟು ಪ್ರಸ್ತುತವಾಗುತ್ತದೆ. ಈ ಅಸ್ತ್ರ ಆತ್ಮರಕ್ಷಣೆಗಾಗಿ ಎಂದು ಭಾರತ ಹೇಳಿತ್ತು. ಭಾರತ ಎಂದಿಗೂ ತಾನಾಗಿ ಯಾವುದೇ ದೇಶದ ಮೇಲೆ ಪರಮಾಣು ದಾಳಿ ನಡೆಸುವುದಿಲ್ಲ ಎಂದು ಸಹ ವಾಗ್ದಾನ ನೀಡಿತ್ತು.
ಇದನ್ನೂ ಓದಿ: ಬೆಳ್ತಂಗಡಿ: ಅಕ್ರಮ ಕಲ್ಲುಗಾಣಿಗಾರಿಕೆ ಆರೋಪ; ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ
ಮೇ 18, 1974 ರಂದು, BARC ನಿರ್ದೇಶಕ ಪ್ರಣಬ್ ದಸ್ತಿದಾರ್ ಅವರು ಬೆಳಿಗ್ಗೆ 8:05 ಕ್ಕೆ ಅಣುಬಾಂಬ್ ಸ್ಪೋಟಿಸಿದ್ದರು(Nuclear Bomb Test). ಈ ಪರೀಕ್ಷೆಗೆ ಪ್ರಧಾನಿ ಇಂದಿರಾಗಾಂಧಿ ಅನುಮತಿ ನೀಡಿದ್ದು, ಅಚ್ಚರಿ ಎಂದರೆ ಈ ವಿಚಾರ ಅಂದಿನ ರಕ್ಷಣಾ ಸಚಿವರಿಗೂ ಗೊತ್ತಿರಲಿಲ್ಲ ಎಂಬುದು.
ಈ ಪರೀಕ್ಷೆಯನ್ನು ಶಾಂತಿಯುತ ಪರಮಾಣು ಸ್ಪೋಟ(Nuclear Bomb Test) ಎಂದು ವಿವರಿಸಲಾಗಿದೆ. ವಾಸ್ತವವಾಗಿ ಪುಟೋನಿಯಂ ಅನ್ನು ಕೆನಡಾ ಮತ್ತು ಅಮೆರಿಕದಿಂದ ಸರಬರಾಜು ಮಾಡಲಾಯಿತು. ಪರೀಕ್ಷೆಯ ವಿಷಯ ತಿಳಿದ ಎರಡೂ ದೇಶಗಳು ಭಾರತದ ವಿರುದ್ಧ ತಿರುಗಿ ಬಿದ್ದಿದ್ದವು.
ಇಂದಿರಾಗಾಂಧಿ ದಿಟ್ಟತನದಿಂದ ಭಾರತ ಅಣ್ವಸ್ತ್ರ ರಾಷ್ಟ್ರವಾಯಿತು :
ಒಂದೆಡೆ ಪಂಡಿತ್ ನೆಹರೂ ಹಿಂದಿ-ಚೀನಿ ಭಾಯಿ-ಭಾಯ್ ಎಂಬ ಘೋಷಣೆಯನ್ನು ನೀಡಿದ್ದರು. ಆದರೆ ಇಂದಿರಾಗಾಂಧಿ(Indira Gandhi)ಅವರ ಅಭಿಪ್ರಾಯವೇ ಬೇರೆ. ಚೀನಾ ಪರಮಾಣು ಶಕ್ತಿಯಾಗಿದ್ದು ಅದು ಭಾರತಕ್ಕೆ ದೊಡ್ಡ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ(Indira Gandhi) ಪರಮಾಣು ಕಾರ್ಯಕ್ರಮವನ್ನು ಚುರುಕುಗೊಳಿಸಿದರು. 75 ವಿಜ್ಞಾನಿಗಳ ತಂಡವು ಪರಮಾಣು ಪರೀಕ್ಷೆಯನ್ನು(Nuclear Bomb Test) ಯಶಸ್ವಿಯಾಗಿ ನಡೆಸಿತು. ಈ ತಂಡದ ಕಮಾಂಡ್ ರಾಜಾ ರಾಮಣ್ಣನವರ ಕೈಯಲ್ಲಿತ್ತು. ಈ ಪರೀಕ್ಷೆಯ ನಂತರ ಪ್ರಪಂಚದಾದ್ಯಂತದ ದೇಶಗಳು ಭಾರತದ ಶಕ್ತಿಯನ್ನು ಗುರುತಿಸಿದವು.
[…] […]