Madhu bangarappa: ಮೋದಿಗೆ ಕನ್ನಡ ಬರುತ್ತಾ? ಎಂದ ಮಧು ಬಂಗಾರಪ್ಪ, ಕನ್ನಡಿಗನಾದ ನಿಮಗೇ ಗೊತ್ತಿಲ್ಲ ಕನ್ನಡ, ಇನ್ನು ಗುಜರಾತಿನ ಮೋದಿಗೇಕೆ? ಎಂದ ನೆಟಿಜನ್ಸ್
Madhu Bangarappa: ನಮ್ಮ ರಾಜ್ಯದ ಶಿಕ್ಷಣ ಸಚಿವರಾದ ಶ್ರೀಮಾನ್ ಮಧು ಬಂಗಾರಪ್ಪ(Madhu Bangarappa) ನವರು ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದು ಟ್ರೋಲ್ ಮುಖಾಂತರ, ಅದೂ ಕೂಡ ‘ಕನ್ನಡ ಗೊತ್ತಿಲ್ಲದ ಶಿಕ್ಷಣ ಸಚಿವ(Education Minister) ‘ ಎಂಬ ಶೀರ್ಷಿಕೆಯ ಮೂಲಕ. ನಾಲ್ಕೈದು ದಿನಗಳಿಂದ ಇದೇ ವಿಚಾರವನ್ನು ಟ್ರೋಲಿಗರು ಹಾಕಿ ಜಾಡಿಸುತ್ತಿರುವ ಕಾರಣ, ಸಿಟ್ಟು ತಾಳಲಾರದೆಯೋ ಅಥವಾ ಅವಮಾನ ಸಹಿಸದೆಯೋ ಪಾಪ ನಮ್ಮ ಶಿಕ್ಷಣ ಮಂತ್ರಿಗಳು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅಬ್ಬರದಲ್ಲಿ ಒಂದು ಪ್ರಶ್ನೆಯನ್ನು ಕೇಳಿಬಿಟ್ಟಿದ್ದಾರೆ. ಆ ಪ್ರಶ್ನೆ ಎಷ್ಟರ ಮಟ್ಟಿಗೆ ಸರಿ, ನಾನು ಕೇಳಿದರೆ ಅದು ಸರಿಯಾಗುತ್ತಾ? ಅಥವಾ ಅದಕ್ಕೆ ಅರ್ಥ ಉಂಟಾ ಎಂಬ ಸಾಮಾನ್ಯ ಪರಿಜ್ಞಾನನವೂ ನಮ್ಮ ‘ಶಿಕ್ಷಣ’ ಮಂತ್ರಿಗಳಿಗೆ ಆಗ ತೋರಲಿಲ್ಲ ಅನಿಸುತ್ತದೆ. ಮೊದಲೇ ಕೆರಳಿದ್ದ ಟ್ರೋಲಿಗರೂ ಸಿಕ್ಕಿದ್ದೇ ಚಾನ್ಸು ಅಂತಾ ಇದನ್ನೂ ಹಿಡಿದು ಜಮಾಯಿಸಿಬಿಟ್ಟಿದ್ದಾರೆ.
ಹೌದು, ಶಿಕ್ಷಣ ಸಚಿವರು ಬಹುಶಃ ವಾರಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ‘ನನಗೆ ಕನ್ನಡ (Kannada) ಓದಲು ಸ್ವಲ್ಪ ಕಷ್ಟ, ಓದಲು ಕಷ್ಟಪಡುತ್ತೇನೆ’ ಎಂದು ಹೇಳಿ ಭಾರೀ ಸುದ್ದಿಯಾಗಿದ್ದರು. ಇದನ್ನು ನಮ್ಮ ಟ್ರೋಲ್ ಸಹೋದರರು ಸುಮ್ಮನೆ ಬಿಡುತ್ತಾರಾ ಹೇಳಿ. ಶಿಕ್ಷಣ ಸಚಿವರನ್ನೇ ಟ್ರೋಲ್ ಮಾಡಿ ಅಯ್ಯೋ ಅನಿಸಿಬಿಟ್ಟರು. ಇದರಿಂದ ಕೆರಳಿದ ಸಚಿವರು ಚಿಕ್ಕಮಗಳೂರಿನಲ್ಲಿ(Chikkamagaluru) ಮಾಧ್ಯಮಗಳೊಂದಿಗೆ ಮಾತನಾಡುತ್ತಾ ‘ನಿಮ್ಮ ಮೋದಿಗೆ(PM Modi) ಕನ್ನಡ ಬರುತ್ತಾ? ಮೊದಲು ತಿಳ್ಕೊಳ್ಳಿ. ಇಲ್ಲಿ ಬಂದು ಕನ್ನಡದಲ್ಲಿ ಮಾತಾಡ್ತಾರೆ, ತಮಿಳನಾಡಿಗೆ ಹೋಗಿ ತಮಿಳು ಮಾತಾಡ್ತಾರೆ. ಅವರಿಗೆ ಯಾರೋ ಬರೆದುಕೊಟ್ಟಿರ್ತಾರೆ ಮಾತಾಡ್ತಾರೆ ಎನ್ನುವ ಮೂಲಕ ‘ಸಚಿವ ಮಧು ಬಂಗಾರಪ್ಪ’ಗೆ ಕನ್ನಡ ಬರೊಲ್ಲ, ಟ್ರೋಲ್ ಮೂಲಕ ನಿಮ್ಮ ಹೊಟ್ಟೆ ತುಂಬಲ್ಲಾ’ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದರು.
ಇಲ್ಲೇ ನಮ್ಮ ಸಚಿವರು ಎಡವಿದರು. ಅವರ ಆ ಒಂದು ಪ್ರಶ್ನೆಯಿಂದಲೇ ಅವರೆಷ್ಟು ರೊಚ್ಚಿಗೆದ್ದಿದ್ದರು ಎಂದು ತಿಳಿಯುತ್ತದೆ. ಯಾಕೆಂದರೆ ‘ಮೋದಿಗೆ ಕನ್ನಡ ಬರುತ್ತಾ? ನೋಡ್ಕೊಳ್ಳಿ’ ಎಂದು ಅಬ್ಬರಿಸಿದ್ದು. ಸಚಿವರ ತವೆ ಬುಡ ಇಲ್ಲದ ಈ ಪ್ರಶ್ನೆಯೇ ವಿಚಿತ್ರವಾಗಿದೆ. ಮೂಲತಃ ಗುಜರಾತಿನವರಾದ ಮೋದಿಗೆ ಕನ್ನಡ ಬರದಿರುವುದಕ್ಕೂ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕನ್ನಡ ಬರುವುದಕ್ಕೂ ಏನು ಸಂಬಂಧ ಮಾರ್ರೆ? ಎಂತ ಅವಿವೇಕಿತನದ ಪ್ರಶ್ನೆ ಇದು. ಒಂದು ಪ್ರಶ್ನೆ ಕೇಳುವಾಗಲೂ ಶಿಕ್ಷಣ ಸಚಿವರಿಗೆ ಸಾಮಾನ್ಯ ಜ್ಞಾನ ಬೇಡವೇ? ಅದೂ ಸಾರ್ವಜನಿಕವಾಗಿ. ಇದೇ ವಿಚಾರ ಇಟ್ಟುಕೊಂಡು ಮಧು ಬಂಗಾರಪ್ಪನವರು ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿ, ನೆಟ್ಟಿಗರಿಂದ ತರಹೆವಾರಿ ಟೀಕೆಗೆ ಗುರಿಯಾಗಿದ್ದಾರೆ.
ಹೌದು, ಮೂಲತಃ ಗುಜರಾತಿನವರಾದ ಮೋದಿಗೆ ಕನ್ನಡ ಏಕೆ ಬರಬೇಕು ಹೇಳಿ. ಅವರಿಗೆ ಅವರ ಮಾತೃಭಾಷೆ ಗುಜರಾತಿ ಬಂದರೆ ಸಾಕು. ಅದನ್ನು ಅವರು ಸ್ಪಷ್ಟವಾಗಿಯೇ ಮಾತನಾಡುತ್ತಾರೆ, ಮಾತನಾಡುವುದನ್ನು ಎಲ್ಲರೂ ನೋಡಿದ್ದಾರೆ. ಆದರೆ ಕನ್ನಡಿಗರಾದ ನಿಮಗೆ ಕನ್ನಡ ಬರದಿರುವುದು ಎಂತಾ ದೊಡ್ಡ ತಪ್ಪು? ಅದೂ ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ. ನಿಮ್ಮ ತಪ್ಪಿಗೆ ಪ್ರಧಾನಿಯವರನ್ನು ತಂದು ಎಳೆಯುವುದೇಕೆ? ಮೊದಲು ಮೋದಗೆ ಕನ್ನಡ ಬರುವುದಲ್ಲ, ನನಗೆ ಬರಬೇಕು ಎಂಬ ಒಂದು ಸಣ್ಣ ಜ್ಞಾನ ನಿಮಗಿರಲಿ ಸಚಿವರೆ.
ಅದೂ ಕೂಡ ಕನ್ನಡ ಬಾರದಿದ್ದರೂ ಮೋದಿ ಕರ್ನಾಟಕಕ್ಕೆ ಬಂದಾಗ ಬರೆಸಿಕೊಂಡಾದರೋ, ಕಲಿಸಿಕೊಂಡಾದರೋ ಕನ್ನಡ ಮಾತನಾಡುತ್ತಾರೆ. ಅದು ನಿಜವಾಗಿಯೂ ಹೆಮ್ಮೆ ಪಡುವ ವಿಚಾರ. ಅದು ಗ್ರೇಟ್. ಹೌದು, ಅವರು ತಮಿಳು ನಾಡಿಗೆ ಹೋದಾಗ ತಮಿಳು, ಆಂಧ್ರಕ್ಕೆ ಹೋದಾಗ ತೆಲುಗು, ಕೇರಳಕ್ಕೆ ಹೋದಾಗ ಮಲೆಯಾಳಂ ಮಾತನಾಡುತ್ತಾರೆ. ಇದು ಹೆಮ್ಮೆಯ ವಿಷಯ ಅಲ್ಲವೇ? ದೇಶದ ಪ್ರಧಾನಿಯಾಗಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಅವರು ಎಲ್ಲರ ಪ್ರಧಾನಿ. ಆಯಾ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆ ಮಾತನಾಡುತ್ತಾರೆ ಎಂದರೆ ಅದು ನಿಜಕ್ಕೂ ವಿಶೇಷ, ವಿಶಿಷ್ಟ. ನೀವು ರಾಜ್ಯದ ಮಂತ್ರಿ, ರಾಜ್ಯದ ಭಾಷೆ ತಿಳಿಯಲೇ ಬೇಕು. ಅದು ಬಿಟ್ಟು ನಿಮಗೆ ಕನ್ನಡ ಬಾರದಕ್ಕೆ ಮೋದಿಯನ್ನು ತಂದೆಳೆಯುವುದಲ್ಲ ಎಂದು ಕೆಲವರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Belthangady: ಅಕ್ರಮ ಕಲ್ಲುಗಾಣಿಗಾರಿಕೆ; ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ
[…] […]
[…] […]