Udupiಯಲ್ಲಿ ಹೋಟೇಲಿಗೆ ಬೆಂಕಿ – ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ , ತುಂಬಿಸಿಕೊಂಡು ಬರುತ್ತೇವೆಂದು ಹೋದವರು ಪತ್ತೆ ಇಲ್ಲ !!

Share the Article

Udupi: ಹೋಟೇಲೊಂದಕ್ಕೆ ಬಿದ್ದ ಬೆಂಕಿ ಆರಿಸಲು ಅಗ್ನಿಶಾಮಕ ದಳದ ವಾಹನವು(Fire engine) ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ತಯಾರಿ ನಡೆಸಿ ಬೆಂಕಿ ನಂದಿಸಬೇಕು ಎನ್ನುವಾಗ ವಾಹನದಲ್ಲಿ ನೀರಿಲ್ಲ ಎಂಬ ಸತ್ಯ ಗೊತ್ತಾಗಿದೆ. ಇದರಿಂದಾಗಿ ಬೆಂಕಿ ಬಿದ್ದ ಕಟ್ಟಡ ಸುಟ್ಟು ಹೋದ ಘಟನೆ ಆದಿ ಉಡುಪಿ ಬಳಿ ನಡೆದಿದೆ.

ಹೌದು, ಆದಿ ಉಡುಪಿ(Udupi) ಬಳಿ ಬಳಿಯ ಹೋಟೆಲ್‌ವೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎನ್ನುವುದು ತಿಳಿದು ಬಂದಿದೆ. ತತ್ ಕ್ಷಣ ನೀರು ತುಂಬಿಕೊಂಡು ಬರುತ್ತೇವೆ ಎಂದು ಮಲ್ಪೆಯತ್ತ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಮರಳಿ ಬರಲೇ ಇಲ್ಲ. ಸದ್ಯ ಈ ವಿಚಾರ ವೈರಲ್‌ ಆಗಿದ್ದು, ಘಟನೆ ಬಗ್ಗೆ ತಿಳಿದ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಗೊಂಡಿದ್ದಾರೆ. ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: ಮೋದಿ ಪ್ರಧಾನಿ ಆದ್ರೆ 6 ತಿಂಗಳಲ್ಲಿ POK ಭಾರತದ ಭಾಗವಾಗುತ್ತೆ; ಹೊಸ ಘೋಷಣೆ 

ಅಂದಹಾಗೆ ವಾಹನ ನೀರು ತುಂಬಿಸಲು ಹೊರಡುವಾಗ ಅದೃಷ್ಟ ಎಂಬಂತೆ ಅಷ್ಟರಲ್ಲಿ ಮಳೆ ಬಂದಿದೆ. ಆಗ ಮಳೆ ನೀರು ಮತ್ತು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನೇ ಬಳಸಿಕೊಂಡು ಸ್ಥಳದಲ್ಲಿ ಉಳಿದಿದ್ದ ಅಗ್ನಿಶಾಮಕ ದಳದ ಕೆಲವು ಸಿಬಂದಿ ಬೆಂಕಿಯನ್ನು ಆರಿಸಿದ್ದಾರೆ. ಆದರೂ ಕೂಡ ಆಗ ಸಮಯ ಕೈ ಮೀರಿ ಹೋದ ಕಾರಣ ಸಾಕಷ್ಟು ಹಾನಿ ಸಂಭವಿಸಿದ್ದು, ಸರಿಯಾದ ಸಮಯಕ್ಕೆ ನೀರಿಲ್ಲದೆ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ.

ಈ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಟ್ರೋಲ್ ಕೂಡ ಆಗಿದೆ. ಉಡುಪಿ ಮರ್ಯಾದೆ ತೆಗೆಯಲೇ ಕೆಲವರು ಇದ್ದಾರೆ ಎನ್ನುವಂತಹ ಟ್ರೋಲ್‌ಗಳನ್ನು ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ.

ಇದನ್ನೂ ಓದಿ: Air India: ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ ನಲ್ಲಿ ಬೆಂಕಿ ; ತುರ್ತು ಭೂ ಸ್ಪರ್ಶ

Leave A Reply