Mangaluru: ಉಜಿರೆಯ ರುಡ್‌ ಸೆಟ್ ಸಂಸ್ಥೆಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Mangaluru: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸ್ವ- ಉದ್ಯೋಗ ಸಂಸ್ಥೆ ಉಜಿರೆಯ ರುಡ್‌ ಸೆಟ್ ಸಂಸ್ಥೆಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಉಚಿತ ಸ್ವ ಉದ್ಯೋಗ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: JEE advanced 2024 Hall ticket ಅಪ್‌ಡೇಟ್‌: ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

ಕಂಪ್ಯೂಟರ್ ಡಿ.ಟಿ.ಪಿ

27-05-2024 ರಿಂದ 10-07- 2024ರವರೆಗೆ 45 ದಿನಗಳು, ಮಹಿಳೆಯರಿಗೆ ವಸ್ತ್ರ ವಿನ್ಯಾಸ ( ಟೈಲರಿಂಗ್)

ದಿನಾಂಕ 30- 05-2024 ರಿಂದ 28-06-2024 30 ದಿನಗಳು

,ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ –

ದಿನಾಂಕ 11-06-2024 ರಿಂದ 10-07-2024 -30 ದಿನಗಳು

,ಕಂಪ್ಯೂಟರ್ ಟ್ಯಾಲಿ ( ಅಕೌಂಟಿಂಗ್) –

ದಿನಾಂಕ 11-07- 2024 ರಿಂದ 09-08-2024 – 30 ದಿನಗಳು

ಈ ಮೇಲ್ಕಂಡ ತರಬೇತಿಗಳು ಉಚಿತವಾಗಿವೆ. ಈ ತರಬೇತಿಗೆ ಆಯ್ಕೆಯಾದ ಅರ್ಹರಿಗೆ, ತರಬೇತಿಯ ಸಂದರ್ಭದಲ್ಲಿ ಊಟ ಮತ್ತು ವಸತಿ ಉಚಿತವಾಗಿರುತ್ತದೆ.

ಇದನ್ನೂ ಓದಿ: Puttur: ದೇವರಗದ್ದೆಯಲ್ಲಿದ್ದ ಹೋರಿ ನಾಪತ್ತೆ -ಬಲ್ನಾಡಿನ ಉಳ್ಳಾಲ್ತಿಯ ಮೊರೆ ಹೋದ ಭಕ್ತರು

ವಯೋಮಿತಿ

ಈ ಸ್ವ ಉದ್ಯೋಗ ತರಬೇತಿಗೆ 18 ರಿಂದ 45 ವರ್ಷಗಳ ಒಳಗಿನ ವಯೋಮಾನದವರಿಗೆ ಅರ್ಜಿಯನ್ನು ಸಲ್ಲಿಸಬಹುದು. ಕನ್ನಡ ಓದಲು, ಬರೆಯಲು ಬರುವುದು ಕಡ್ಡಾಯವಾಗಿದೆ.

ಸ್ವ ಉದ್ಯೋಗ ತರಬೇತಿ ನಿರೀಕ್ಷೆಯಲ್ಲಿರು ಅರ್ಹರು

ರುಡ್ ಸೆಟ್ ಸಂಸ್ಥೆಯ ಇ-ಮೇಲ್ ujirerudseti@gmail.com ಮೂಲಕವೂ ಸಲ್ಲಿಸಬಹುದು.

ಅಲ್ಲದೇ ವಾಟ್ಸ್ ಆಪ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ ಅರ್ಜಿ ವಾಟ್ಸ್ ಆಪ್ ಮಾಡಬಹುದಾದ ನಂಬರ್ – 6364561982

ನೀವು ಪತ್ರದ ಮೂಲಕ ಅರ್ಜಿ ಸಲ್ಲಿಸೋದಾದರೇ, ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ಇಲ್ಲಿಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ 08256-236404, 9591044014, 9448348569, 9980885900 ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.