Live combustion: ಬಸ್ಸಿಗೆ ಬೆಂಕಿ ತಗುಲಿ 9 ಮಂದಿ ಸಜೀವ ದಹನ : 20 ಮಂದಿಗೆ ಗಂಭೀರ ಗಾಯ : ದೇವರ ದರ್ಶನಕ್ಕೆ ತೆರಳಿ ವಾಪಸ್ಸಾಗುವಾಗ ದುರ್ಘಟನೆ

Live combustion: ದೇವರ ದರ್ಶನಕ್ಕೆಂದು ತೆರಳಿ ವಾಪಾಸ್ಸಾಗುವ ವೇಳೆ 60 ಮಂದಿ ಪ್ರಯಾಣಿಕರಿದ್ದ(Travel) ಬಸ್‌ಗೆ ( Bus) ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಬಸ್ನಲ್ಲಿದ್ದ 60 ಮಂದಿ ಪೈಕಿ 9 ಮಂದಿ ಸಜೀವ ದಹನವಾಗಿದ್ದು(Live combustion) ಇನ್ನೂ 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ(Hariyana) ನುಹ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: Agra: ಆಗ್ರಾದಲ್ಲಿ ತಲೆ ಎತ್ತಿದೆ ಹೊಸ ಅಮೃತಶಿಲೆಯ ಕಟ್ಟಡ; ತಾಜ್ ಮಹಲ್‌ಗೆ ಪ್ರತಿಸ್ಪರ್ಧಿ?

ಶನಿವಾರ(Saturday) ಬೆಳಗ್ಗೆ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಳಗ್ಗೆ 2 ಗಂಟೆಗೆ ಕೆಎಂಪಿ ಹೆದ್ದಾರಿಯ ತೌರು ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬಸ್ಸಿನಲ್ಲಿದ್ದ 60 ಮಂದಿ ಪ್ರಯಾಣಿಕರು ಪರಸ್ಪರ ಸಂಬಂಧಿಕರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Business Tips: ಹೊಸ ಬ್ಯುಸಿನೆಸ್ ಆರಂಭಿಸಲು ಯೋಚನೆ ಮಾಡ್ತಾ ಇದ್ದೀರಾ? ಈ ಮೂಲಕ 50 ಲಕ್ಷ ಪಡೆಯಿರಿ!

ಇವರು ಪಂಜಾಬ್‌ನ(Punjab) ಹೊಸ್ಯಾಪುರ ಮೂಲದವರಾಗಿದ್ದು, ಮಥುರಾ-ವೃಂದಾವನ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬಸ್‌ಗೆ ಬೆಂಕಿ(Live combustion) ಹೊತ್ತಿಕೊಂಡಿದೆ. ಬಸ್ಸಿನಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದು, ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸ್ಸಿನಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡ ಸ್ಥಳೀಯರು ಚಾಲಕನಿಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆತ ಬಸ್ ನಿಲ್ಲಿಸಿದೆ ಹಾಗೆ ಮುಂದೆ ಸಾಗಿದ್ದು, ಬಳಿಕ ದ್ವಿಚಕ್ರವಾಹನದಲ್ಲಿ ಬಸ್ ಅನ್ನು ಹಿಂಬಾಲಿಸಿ, ಬೆಂಕಿಯ ಬಗ್ಗೆ ಚಾಲಕನಿಗೆ ತಿಳಿಸಲಾಯಿತು. ಆದರೆ ಅಷ್ಟರಲ್ಲಿ ಬಸ್‌ಗೆ ಬೆಂಕಿ ಹತ್ತಿಕೊಂಡಿತು.

ವಿಷಯ ತಿಳಿದ ಪೊಲೀಸರು(Police )ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಆ ವೇಳೆ 8 ಮಂದಿ ಸಜೀವ ದಹನವಾಗಿದ್ದರು(Live combustion) ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಮಹಿಳೆಯರು(Women and Men) ಮತ್ತು ಮೂವರು ಪುರುಷರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಇನ್ಸ್‌ ಪೆಕ್ಟ‌ರ್ ಜಿತೇಂದ್ರ ಕುಮಾ‌ರ್ ತಿಳಿಸಿದ್ದಾರೆ.

Leave A Reply

Your email address will not be published.