Rape Case: ಟಿವಿ ನಿರೂಪಕಿ ಮೇಲೆ ಅರ್ಚಕನಿಗೆ ಕಣ್ಣು- ದೇವಸ್ಥಾನಕ್ಕೆ ಬಂದಾಗ ತೀರ್ಥದಲ್ಲಿ ನಿದ್ರೆ ಮಾತ್ರೆ ಹಾಕಿ ಮಾಡೇಬಿಟ್ಟ ರೇಪ್ !!

Share the Article

Rape Case: ಟಿವಿ ನಿರೂಪಕಿಯೊಬ್ಬರು(TV Anchor) ದೇವಾಲಯದ ಚೆನ್ನೈ ನ ಪ್ರಸಿದ್ಧ ದೇವಾಲಯದ ಅರ್ಚಕರಾದ ಕಾರ್ತಿಕ್ ಮುನುಸ್ವಾಮಿ(Karthik Manuswamy) ತನಗೆ ನಿದ್ರೆ ಮಾತ್ರೆ ಹಾಕಿ ಅತ್ಯಾಚಾರ ಮಾಡಿದ್ದಾನೆಂದು ಪೋಲೀಸರಿಗೆ ದೂರು ನೀಡಿದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Wife Swapping: ಸ್ನೇಹಿತನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ! ತಿರಸ್ಕರಿಸಿದ ಪತ್ನಿಗೆ ಮಾಡಿದ್ದೇನು ಗೊತ್ತಾ?

ಹೌದು, ಚೆನ್ನೈನ(Chennai) ಪಾರಿಸ್ ಕಾರ್ನ‌್ರನಲ್ಲಿರುವ ಜನಪ್ರಿಯ ದೇವಸ್ಥಾನದ ಅರ್ಚಕರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದ್ದು ಟಿವಿ ನಿರೂಪಕಿಯೊಬ್ಬರು ‘ನಿದ್ರೆ ಬರುವ ಮಾತ್ರೆಯನ್ನ ತೀರ್ಥದಲ್ಲಿ ಬೆರೆಸಿದ್ದ ಅರ್ಚಕ ಅದನ್ನು ನನಗೆ ನೀಡಿದ್ದ ಆ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ವಿರುಗಂಬಾಕ್ಕಂ (Virugambakkam) ಪೊಲೀಸರಿಗೆ ದೂರು ನೀಡಿದ್ದಾರೆ ಹಿನ್ನೆಲೆಯಲ್ಲಿ ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Weight Loss Tips: ದೇಹದ ಆಕಾರ ಸುಂದರಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ! ಆಮೇಲೆ ಸೊಂಟದ ಬೊಜ್ಜಿನ ಚಿಂತೆ ಇರಲ್ಲ!

ಏನಿದು ಘಟನೆ?

30 ವರ್ಷದ ಟಿವಿ ನಿರೂಪಕಿ ಸಾಲಿಗ್ರಾಮಮ್‌ ಮೂಲದವರಾಗಿದ್ದು, ಆಧ್ಯಾತ್ಮಿಕ ವಿಚಾರಗಳ ಕುರಿತು ಒಲವು ಹೊಂದಿದ್ದಾರೆ. ಹೀಗಾಗಿ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅಂತೆಯೇ ಚೆನ್ನೈನ ಪರ್ಯಾಸ್‌ ಪ್ರದೇಶದಲ್ಲಿರುವ ಪ್ರಸಿದ್ಧ ಕಾಳಿಕಾಂಪಲ್ ದೇವಸ್ಥಾನಕ್ಕೆ ಸಾಮಾನ್ಯವಾಗಿ ಭೇಟಿ ನೀಡುತ್ತಿರುತ್ತಾರೆ. ಈ ವೇಳೆ ಇದೇ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ಜೊತೆ ಅವರಿಗೆ ಸ್ನೇಹ ಸಂಬಂಧ ಬೆಳೆದಿತ್ತು.

ಬಳಿಕ ಕಾರ್ತಿಕ್ ಮುನುಸಾಮಿ ದೇವಸ್ಥಾನದಲ್ಲಿ ನಡೆಯುವ ಪ್ರವಚನ ಹಾಗೂ ಕಾರ್ಯಕ್ರಮಗಳ ಕುರಿತು ಮಹಿಳೆಗೆ ವಾಟ್ಸಾಪ್ ನಲ್ಲಿ ಕಾಲಕಾಲಕ್ಕೆ ಸಂದೇಶ ಕಳುಹಿಸುತ್ತಿದ್ದ. ಇಬ್ಬರ ನಡುವೆ ಸ್ನೇಹ ಮೂಡಿದ್ದರಿಂದ ಆ ಮಹಿಳೆ ದೇವಸ್ಥಾನಕ್ಕೆ ಬಂದಾಗಲೆಲ್ಲ ಗರ್ಭಗುಡಿಗೆ ಕರೆದೊಯ್ದು ವಿಶೇಷ ದರ್ಶನ ನೀಡಲಾಗುತ್ತಿತ್ತು.

ದಿನಗಳು ಕಳೆದ ಹಾಗೆ, ಒಂದು ದಿನ ನಾನು ದೇವಸ್ಥಾನಕ್ಕೆ ಬಂದಾಗ ಆತ ತನ್ನ ಬೆಂಜ್‌ ಕಾರ್‌ಅನ್ನು ಹೊರತೆಗೆದಿದ್ದ. ನನ್ನ ಮನೆಯ ಕಡೆಯಿಂದಲೇ ಪಾಸ್‌ ಆಗುತ್ತೇನೆ. ಇದೇ ವೇಳೆ ಮನೆಗೆ ಬಿಟ್ಟು ಹೋಗುತ್ತೇನೆ ಎಂದು ತಿಳಿಸಿದ್ದ ಎಂದು ದಿವ್ಯಾ ಹೇಳಿದ್ದಾರೆ. ಕಾರಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುವ ವೇಳೆ ಆತ ನಿದ್ರೆ ಬರುವ ತೀರ್ಥವನ್ನು ನನಗೆ ನೀಡಿದ್ದ ಎಂದು ದಿವ್ಯಾ ಆರೋಪಿಸಿದ್ದಾರೆ. ಏಕೆಂದರೆ, ಇದನ್ನು ಕುಡಿದ ಬಳಿಕ, ನನಗೆ ಪ್ರಜ್ಞೆ ತಪ್ಪಿತ್ತು. ಆ ಬಳಿಕ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ್ದು ತಿಳಿದು ಬಂದಿದೆ. ಸದ್ಯ ಈ ಘಟನೆ ಎಲ್ಲದೂ ನಡೆದಿರುವುದು 2022ರಲ್ಲಿ.

ಬಳಿಕ ಈ ಬಗ್ಗೆ ಅವರೊಂದಿಗೆ ಜಗಳವಾಡಿದ ನಂತರ ಆತ ಮಹಿಳೆಗೆ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಒಟ್ಟಿಗೆ ಜೀವನ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾನೆ. ಆದರೆ, ಮದುವೆಯಾಗಬೇಕಾದರೆ ಅಬಾಷನ್ ಮಾಡುವಂತೆ ಒತ್ತಾಯಿಸಿ, ಗರ್ಭಪಾತ ಮಾಡಿಸಿದ್ದಾನೆ. ಜೊತೆಗೆ ಹಣಕ್ಕಾಗಿ ಇನ್ನೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಈಗ ಹಿಂಸೆ ನೀಡುತ್ತಿದ್ದಾನೆ ಎಂದು ಆ ಮಹಿಳೆ ದೂರು ನೀಡಿದ್ದಾರೆ.

ಅಲ್ಲದೆ ಅದಲ್ಲದೆ, ಟಿವಿ ನಿರೂಪಕಿಯ ಜೊತೆಗಿನ ಕೆಲವು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ಆತನ ಮೊಬೈಲ್‌ನಿಂದ ಪಡೆದುಕೊಂಡಿದ್ದಾರೆ. ಒಟ್ಟು ಆರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕಾರ್ತಿಕ್‌ ಮುನಿಸ್ವಾಮಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ತನ್ನ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಗಿದ ಬಳಿಕ ದಿವ್ಯಾ, ಚೆನ್ನೈ ಮೂಲದ ಚಾನೆಲ್‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Leave A Reply