Home Interesting Mangaluru To Lakshadweep Ship: ಕೆಲವೇ ಗಂಟೆಯಲ್ಲಿ 350 ರೂ ಗೆ ಲಕ್ಷದ್ವೀಪಕ್ಕೆ ಪ್ರಯಾಣಿಸಿ! ಬೇಸಿಗೆ...

Mangaluru To Lakshadweep Ship: ಕೆಲವೇ ಗಂಟೆಯಲ್ಲಿ 350 ರೂ ಗೆ ಲಕ್ಷದ್ವೀಪಕ್ಕೆ ಪ್ರಯಾಣಿಸಿ! ಬೇಸಿಗೆ ಟ್ರಿಪ್ ನಲ್ಲಿ ಸಮುದ್ರ ವಿಹಾರಕೆ ನೀವೂ ರೆಡಿಯಾಗಿ !

Mangaluru To Lakshadweep Ship

Hindu neighbor gifts plot of land

Hindu neighbour gifts land to Muslim journalist

Mangaluru To Lakshadweep Ship: ಸಾಮಾನ್ಯವಾಗಿ ಟ್ರಿಪ್ ಅಂದಾಗ ಬಸ್, ರೈಲು ಹಾಗೂ ವಿಮಾನ ಮುಂತಾದವಲ್ಲಿ ಟ್ರಾವೆಲ್ ಮಾಡುತ್ತೀರಿ. ಆದ್ರೆ ಈ ಬಾರಿ ಹಡಗಿನಲಿ ಹೊಸ ಅನುಭವ ಪಡೆಯಲು ರೆಡಿಯಾಗಿ. ಹೌದು, ಅಷ್ಟಕ್ಕೂ ಹಡಗಿನಲ್ಲಿ ಎಲ್ಲಿಗೆ ಹೋಗುವುದು ಅಂತ ಯೋಚನೆ ಬೇಡ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ (Mangaluru To Lakshadweep Ship) ಕಡಿಮೆ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ: Prices Of Medicines: ಬಿಪಿ, ಶುಗರ್, ಹೃದ್ರೋಗ ಸೇರಿ ಇತರೆ ಔಷಧಿಗಳ ದರ ಇಳಿಕೆ

ಮೊದಲೆಲ್ಲಾ ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನಲ್ಲಿ ಬರಲು ಸುಮಾರು 13 ಗಂಟೆ ಸಮಯ ಬೇಕಾಗುತ್ತಿತ್ತು. ಆದರೀಗ ಹೈಸ್ಪೀಡ್ ಹಡಗು ಕೇವಲ 7 ಗಂಟೆಯಲ್ಲಿ ಮಂಗಳೂರಿಗೆ ತಲುಪಲಿದೆ. ಸದ್ಯ ಹೈಸ್ಪೀಡ್ ಹಡಗು ಪ್ರಾರಂಭದ ನಂತರ ಲಕ್ಷದ್ವೀಪಕ್ಕೆ ತೆರಳಬೇಕು ಅಂದರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆಯಬೇಕು.

ಅಂದಹಾಗೆ ಈ ಹಡಗಿನ ಹೆಸರು ಪರೇಲಿ. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್ ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಪ್ರಯಾಣಿಸಬಹುದು. ಪ್ರತಿ ಪ್ರಯಾಣಿಕರಿಗೆ 350 ರೂಪಾಯಿ ಪ್ರಯಾಣ ದರ ಇದೆ. ನೀವು ಕೂಡ ಇದರಲ್ಲಿ ಪ್ರಯಾಣ ಮಾಡಬಹುದು.

ಇದನ್ನೂ ಓದಿ: Bengaluru: ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿ ಬಹಿರಂಗ ! ಐವರ ಸಾವಿಗೆ ಇದೇ ಕಾರಣ!

ಕೇರಳದ ಮಾಜಿ ಸಂಸದ ಹಮದುಲ್ಲಾ ಸಯ್ಯದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಇವರೆಲ್ಲರ ಪ್ರಯತ್ನದಿಂದ ಕಲ್ಕತ್ತಾಕ್ಕೆ ಹೋಗುವ ಹಡಗನ್ನು ಮಂಗಳೂರು ಮಾರ್ಗವಾಗಿ ಬರುವಂತೆ ಮಾಡಲಾಗಿದೆ. ಮಂಗಳೂರು ನಿಂದ ಪ್ರಯಾಣಿಕ ಹಡಗು ಸ್ಥಗಿತಗೊಂಡ ನಂತರ, ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸುತ್ತಿತ್ತು. ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ಬರಬೇಕಿತ್ತು. ಇನ್ನು ಹಾಗಲ್ಲ ಡೈರೆಕ್ಟ್ ಆಗಿ ಮಂಗಳೂರಿಗೆ ಹಡಗು ಬರುತ್ತೆ.

ಸದ್ಯ ಈ ಜಲಮಾರ್ಗ ಸೇವೆಯಿಂದ ಸ್ಥಳೀಯ ವ್ಯಾಪಾರ, ವಹಿವಾಟು ವೃದ್ಧಿಗೊಳ್ಳಲಿದೆ.