Home Interesting Virgin Voter: “ವರ್ಜಿನ್ ವೋಟರ್” ಆಗಿ ಉಳಿಯಬೇಡಿ : ಮತದಾನ ಸಂದೇಶ ಸಾರುವ ವಿಚಿತ್ರ ಜಾಹೀರಾತು...

Virgin Voter: “ವರ್ಜಿನ್ ವೋಟರ್” ಆಗಿ ಉಳಿಯಬೇಡಿ : ಮತದಾನ ಸಂದೇಶ ಸಾರುವ ವಿಚಿತ್ರ ಜಾಹೀರಾತು ತಯಾರಿಸಿದ ಕಾಂಡಮ್ ಕಂಪನಿ

Virgin Voter

Hindu neighbor gifts plot of land

Hindu neighbour gifts land to Muslim journalist

Virgin Voter: ಮತದಾನದ ಸಂದೇಶವನ್ನು ನೀಡಬೇಕು, ಅದೇ ಸಮಯದಲ್ಲಿ ತಮ್ಮ ಉತ್ಪನ್ನಗಳ ಪ್ರಚಾರವನ್ನು ಮಾಡಬೇಕು. ಅಂತಹ ಅವಕಾಶವನ್ನು ಯಾವುದೇ ಗ್ರಾಹಕ ಉತ್ಪನ್ನ ಕಂಪನಿಗಳು ಬಿಟ್ಟುಕೊಡುವುದಿಲ್ಲ. ಅದೇ ರೀತಿಯಲ್ಲಿ ಮ್ಯಾನ್‌ಫೋರ್ಸ್ ಕಾಂಡಮ್ ಕಂಪನಿ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಆದರೆ ಕಾಂಡೋಮ್ ಕಂಪನಿಯ ಈ ಜಾಹೀರಾತು ಸ್ವಲ್ಪ ಗೊಂದಲವನ್ನುಂಟುಮಾಡುತ್ತಿ.

ಇದನ್ನೂ ಓದಿ: Anushka Shetty: ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್! ಅಷ್ಟಕ್ಕೂ ಆಕೆ ಕೈ ಹಿಡಿಯೋ ಹುಡುಗ ಕನ್ನಡ ನಿರ್ಮಾಪಕರಂತೆ!

ಮ್ಯಾನ್‌ಫೋರ್ಸ್‌ ಜಾಹೀರಾತು ಹೊಸ ಮತದಾರರನ್ನು ಸೆಳೆಯಲು ಹೊಸದಾಗಿ ಯೋಚಿಸಿದಂತಿದೆ. ಈ ಕಂಪನಿಯು ಮೊದಲ ಬಾರಿಗೆ ಮತದಾರರನ್ನು ಉದ್ದೇಶಿಸಿ ‘ವೋಟಿಂಗ್ ವರ್ಜಿನ್'(Voting Virgin) ಎಂಬ ಪದವನ್ನು ಬಳಸಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ(Loksaba Election) 1.82 ಕೋಟಿ ಮತದಾರರು ಪ್ರಥಮ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಮತದಾನ ಮಾಡಿದ ಅನುಭವ ಇಲ್ಲದ ಕಾರಣ ಅವರನ್ನು ‘ವೋಟಿಂಗ್ ವರ್ಜಿನ್’ ಎಂದು ಕರೆದಿದೆ.

ಇದನ್ನೂ ಓದಿ: Husband – wife: ಮದುವೆ ಸಂಭ್ರಮದಲ್ಲಿ ಮಗುವನ್ನು ಕಾರಿನಲ್ಲೇ ಮರೆತ ದಂಪತಿ: ಮುಂದಾಗಿದ್ದು ದೊಡ್ಡ ಅನಾಹುತ !

ಈ ಜಾಹೀರಾತು ಇನ್ಸ್ಟಾಗ್ರಾಮ್ (Instagram) ನಲ್ಲಿ ವೈರಲ್ ಆಗಿದ್ದು ನೆಟಿಜನ್‌ಗಳು ಇದನ್ನು ಬಾರಿ ಪ್ರಮಾಣದಲ್ಲಿ ಶೇರ್ ಮಾಡಿದ್ದಾರೆ. ಮೊದಲ ಬಾರಿಗೆ ಮತದಾರರಿಗೆ(First time voting) ಮತ ಹಾಕುವಂತೆ ಕರೆ ನೀಡಿದ್ದು, ‘ನಾನೂ ಕೂಡ ಮೊದಲ ಬಾರಿಗೆ ಮತ ಹಾಕಿದ್ದೇನೆ. ನೀವು ಸಹ ಮತ ಹಾಕಿ, ವೋಟಿಂಗ್ ವರ್ಜಿನ್ ಆಗಿ ಉಳಿಯಬೇಡಿ” ಎಂದು ಪೋಸ್ಟ್ ಮಾಡಲಾಗಿದೆ. “ನಿಮ್ಮ ಮತ ನಿಮ್ಮ ಹಕ್ಕು. ಅದನ್ನು ಬುದ್ದಿವಂತಿಕೆಯಿಂದ ಬಳಸಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಿಮ್ಮ ಧ್ವನಿಯನ್ನು ಕೇಳುವಂತೆ ಮಾಡಿ, “ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.