Bengaluru: ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ವಿದ್ಯುತ್ ಬಿಲ್ : ಬಿಲ್ ನೋಡಿ ಶಾಕ್ ಆದ ಗ್ರಾಹಕ !

Share the Article

Bengaluru : ಮನೆಯೊಂದಕ್ಕೆ ಹೆಚ್ಚು ಕಮ್ಮಿ ಸಾವಿರಾರು ರೂ. ವಿದ್ಯುತ್‌ ಬಿಲ್‌ ಬರಬಹುದು. ಆದರೆ, ಇಲ್ಲೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಬಂದಿದೆ.ಈ ಬಿಲ್ ನೋಡಿ ಗ್ರಾಹಕ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Rain Alert: ಅಬ್ಬರಿಸಿದ ಮಳೆರಾಯ; ಸಿಡಿಲು ಬಡಿದು 12 ಜನರ ಸಾವು

ಬೆಂಗಳೂರಿನ ಜೆಬಿ ಕಾವಲ್‌ನ ಕೃಷ್ಣಾನಂದ ನಗರ ಪೊಲೀಸ್‌ ಕ್ವಾರ್ಟರ್ಸ್‌ ಮನೆಯೊಂದಕ್ಕೆ ಮೇ 5ರಂದು ವಿದ್ಯುತ್‌ ಬಿಲ್‌ ನೀಡಲಾಗಿತ್ತು. ಬಿಲ್‌ನಲ್ಲಿ ಒಟ್ಟು 17,15,75,596 ಎಂದು ನಮೂದಿಸಲಾಗಿದೆ. ಇದು ಬೆಸ್ಕಾಂ ಮೀಟರ್‌ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಬೇರೇನಾದರೂ ಸಮಸ್ಯೆ ಆಗಿದೆಯಾ ಎಂಬ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.

ಇದನ್ನೂ ಓದಿ: Operation Mistake: ನಾಲ್ಕು ವರ್ಷದ ಬಾಲಕಿಯ ಬೆರಳಿಗೆ ಚಿಕಿತ್ಸೆ ಮಾಡುವ ಬದಲು ನಾಲಗೆಗೆ ಅಪರೇಷನ್ ಮಾಡಿದ ವೈದ್ಯರು

ಕಾರ್ಖಾನೆಗಳಿಗೆ ಆದರೆ 1 ರಿಂದ 3 ಕೋಟಿ ರೂ. ವಿದ್ಯುತ್‌ ಬಿಲ್‌ ಬರುತ್ತದೆ. ಪೊಲೀಸ್‌ ಕ್ವಾರ್ಟರ್ಸ್‌ನ ಮನೆಯೊಂದಕ್ಕೆ 17 ಕೋಟಿ ರೂ. ಬಿಲ್‌ ನೀಡಿರುವ ಬೆಸ್ಕಾಂ ಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

17 ಕೋಟಿ ರೂ. ಕರೆಂಟ್‌ ಬಿಲ್‌ ಕಂಡು ಇಲ್ಲಿನ ನಿವಾಸಿಗಳು ದಂಗಾಗಿದ್ದಾರೆ.ಇಷ್ಟೊಂದು ವಿದ್ಯುತ್‌ ಬಿಲ್‌ ಬರುವುದಕ್ಕೆ ಸಾಧ್ಯವಿಲ್ಲ. ಅಷ್ಟು ವಿದ್ಯುತ್‌ ಬಳಸಿಯೇ ಇಲ್ಲ ಎಂದು ಇಲ್ಲಿನ ನಿವಾಸಿಗಳು ಅಚ್ಚರಿಗೊಂಡಿದ್ದಾರೆ.

Leave A Reply