Virat Kohli : ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ !!

Virat Kohli: ಕ್ರಿಕೆಟ್ ದಿಗ್ಗಜ, ಕೋಟ್ಯಾಂತ ಅಭಿಮಾನಿಗಳ ನಾಯಕ, ಟೀಮ್ ಇಂಡಿಯಾದ ಸ್ಟಾರ್, RCBಯ ನೇತಾರ ವಿರಾಟ್ ಕೊಹ್ಲಿ(Virat Kohli) ಇದ್ದಕ್ಕಿದ್ದಂತೆ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದು, ಕ್ರಿಕೆಟ್(Cricket) ಲೋಕಕ್ಕೆ ವಿದಾಯ ಹೇಳುವ ಸುಳಿವು ನೀಡಿದರಾ? ಎಂಬ ಅನುಮಾನ ಎದುರಾಗಿದೆ.

ಇದನ್ನೂ ಓದಿ: Bangalore: ವಿಡಿಯೋ ಕಾಲ್ ನಲ್ಲಿ ಪತಿಯ ಸುಸೈಡ್ ನಾಟಕ! ಜಿಮ್ ಟ್ರೈನ‌ರ್ ಉರುಳು ಬಿಗಿದುಕೊಂಡು ಮೃತ್ಯು!

ಹೌದು, ಕ್ರಿಕೆಟ್ನೊಂದಿಗೆ ಎಲ್ಲವನ್ನೂ ಮುಗಿಸಿ ನಾನು ಒಮ್ಮೆ ಹೋದರೆ, ನೀವು ನನ್ನನ್ನು ಮತ್ತೆ ನೋಡಲು ಸಾಧ್ಯವಾಗಿಲ್ಲ ಎಂದು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ವಿಡಿಯೋ ಕೂಡ ವೈರಲ್ ಆಗಿದೆ. ಆರ್‌ಸಿಬಿಯ ಅಧಿಕೃತ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, ಅದರಲ್ಲಿ ವಿರಾಟ್‌ ಕೊಹ್ಲಿ ತಮ್ಮ ನಿವೃತ್ತಿ(Retirement)ನಂತರದ ದಿನಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: T20 World Cup: ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು! : ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್? : ಇಲ್ಲಿ ನೋಡಿ

ಸಿಬಿ ಕಾರ್ಯಕ್ರಮದಲ್ಲಿ ನಿರೂಪಕ ಒಂದು ಪ್ರಶ್ನೆ ಕೇಳಿದ್ದಾರೆ. ನೀವು ಯಶಸ್ಸಿನ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಾ ಇದೀರಿ ವಿರಾಟ್? ಇದರ ಹಿಂದಿರುವ ಗುಟ್ಟೇನು ಎಂಬ ಪ್ರಶ್ನೆಗೆ ಕೊಹ್ಲಿ ಅಚ್ಚರಿ ಉತ್ತರ ನೀಡಿದ್ದಾರೆ. ಅದೇನೆಂದರೆ ಏನಿಲ್ಲ, ಇದು ತುಂಬಾ ಸರಳವಾದದ್ದು. ಯಾವುದೇ ಕ್ರೀಡಾಪಟು, ಇವತ್ತಲ್ಲ, ನಾಳೆ ತಮ್ಮ ಕರಿಯರ್ನ ಅಂತ್ಯದ ದಿನಾಂಕವನ್ನು ನೋಡಲೇಬೇಕು. ಹಾಗಾಗಿ, ನಾನು ಹೆಚ್ಚು ಶ್ರಮ ಹಾಕುತ್ತಿದ್ದೇನೆ. ಮಿತಿ ಮೀರಿದ ಕಾರ್ಯನಿರ್ವಹಿಸುತ್ತಿದ್ದೇನೆ. ಅಯ್ಯೋ ಇದನ್ನು ಅವತ್ತು ಮಾಡಬೇಕಿತ್ತು ಎಂದು ವೃತ್ತಿಜೀವನದ ಮುಕ್ತಾಯದ ನಂತರ ಚಿಂತಿಸುತ್ತಾ ಕೂರಬಾರದು. ಅಂತಹ ಸಂದರ್ಭ ಬರಬಾರದೆಂದೇ ಈಗ ಉತ್ತಮ ಆಟವಾಡಲು ಯತ್ನಿಸುತ್ತಿದ್ದೇನೆ. ಆದರೆ, ಒಮ್ಮೆ ಕ್ರಿಕೆಟ್‌ ಆಟ ಆಡೋದನ್ನ ನಿಲ್ಲಿಸಿದರೆ, ನಾನು ಇಲ್ಲೆಂದೂ ಕಾಣೋದಿಲ್ಲ. ಖಂಡಿತವಾಗಿ ಕೆಲವೊಂದು ವರ್ಷಗಳ ಕಾಲ ನೀವು ನನ್ನ ಕಾಣೋಕೆ ಸಾಧ್ಯವಿಲ್ಲ. ಹಾಗಾಗಿ ನನ್ನ ಆಡುವ ದಿನಗಳಲ್ಲಿ ಏನು ಸಾಧ್ಯವೋ ಎಲ್ಲವನ್ನೂ ನಾನು ನೀಡುತ್ತೇನೆ. ಅದೇ ಈಗ ನನ್ನ ಆಟಕ್ಕೆ ಸ್ಫೂರ್ತಿಯಾಗಿ ನಿಂತಿದೆ’ ಎಂದು ಅಚ್ಚರಿ ಮೂಡಿಸಿ, ಗೊಂದಲ ಉಂಟುಮಾಡಿದ್ದಾರೆ.

ಅಂದಹಾಗೆ ಕೊಹ್ಲಿ ವಯಸ್ಸು ಪ್ರಸ್ತುತ 35 ವರ್ಷ. ಅದಾಗಲೇ ಅವರ ನಿವೃತ್ತಿಯ ಕುರಿತು ಚರ್ಚೆಗಳು ಹುಟ್ಟುಹಾಕಿವೆ. 2023ರ ಏಕದಿನ ವಿಶ್ವಕಪ್ ನಂತರ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿಯೇ ಬಿಡುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ತದ ನಂತರ ಅವರ ಟಿ20 ಕರಿಯರ್ ಮುಗಿಯಿತು ಎನ್ನಲಾಯಿತು. ಆದರೀಗ ಈ ಕುರಿತಂತೆ ಕೊಹ್ಲಿಯೇ ಮಾತನಾಡಿದ್ದು ಎಲ್ಲರಿಗೂ ಶಾಕ್ ನೀಡಿದೆ.

Leave A Reply

Your email address will not be published.