Majaa Talkies: ಅಭಿಮಾನಿಗಳಿಗೆ ‘ಮಜಾ ಟಾಕೀಸ್’ ಹೊಸ ಸೀಸನ್ ಅಪ್ಡೇಟ್ ನೀಡಿದ ಸೃಜನ್ ಲೋಕೇಶ್!

Majaa Talkies: ‘ಮಜಾ ಟಾಕೀಸ್’ ಹೊಸ ಸೀಸನ್ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆ ಗೆ ಸ್ವತಃ ಸೃಜನ್ ಲೋಕೇಶ್ ಅವರು ಉತ್ತರ ಅಚ್ಚರಿಯ ಉತ್ತರ ನೀಡಿದ್ದಾರೆ. ಹೌದು, ‘ನನ್ನಮ್ಮ ಸೂಪರ್ ಸ್ಟಾರ್ 3’ ಕಾರ್ಯಕ್ರಮದ ಸೆಟ್ನಲ್ಲಿ ಸೃಜನ್ ಲೋಕೇಶ್ ಅವರಲ್ಲಿ ‘ಮಜಾ ಟಾಕೀಸ್’ ಹೊಸ ಸೀಸನ್ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆ ಅವರಿಗೆ ಕೇಳಲಾಗಿದ್ದು, ಅದಕ್ಕೆ ಸೃಜನ್ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Hindu Muslim Converts: ಹಿಂದೂ ಧರ್ಮದ ಪ್ರೇಮಿಯನ್ನು ಸೇರಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ!

ಸದ್ಯ ‘ನನ್ನಮ್ಮ ಸೂಪರ್ ಸ್ಟಾರ್ 3’ (Nannamma Super Star 3) ಶೋನಲ್ಲಿ ಜಡ್ಜ್ ಆಗಿರುವ ಸೃಜನ್ ಲೋಕೇಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಈ ವೇಳೆ ‘ಮಜಾ ಟಾಕೀಸ್’ (Majaa Talkies) ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: SSLC Exam Brucely Banner: SSLC ಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಬ್ಯಾನರ್ ಹಾಕಿ ಸಂಭ್ರಮಿಸಿದ ಸ್ನೇಹಿತರು : ಹಾಸ್ಯದಿಂದ ಕೂಡಿರುವ ಬ್ಯಾನ‌ರ್ ಎಲ್ಲೆಡೆ ವೈರಲ್

‘ಮಜಾ ಟಾಕೀಸ್ ಬಗ್ಗೆ ಪ್ಲ್ಯಾನ್ ಇದೆ. ಆದರೆ ಯಾವಾಗ ಅನ್ನೋದು ಗೊತ್ತಿಲ್ಲ. ಎಲೆಕ್ಷನ್, ಐಪಿಎಲ್, ಟಿ20 ವಿಶ್ವಕಪ್ ಬರಲಿದೆ. ಅದಲ್ಲದೆ ಬಿಗ್ ಬಾಸ್ ಶೋ, ಅನುಬಂಧ ಅವಾರ್ಡ್ಸ್ ಈ ಎಲ್ಲವುಗಳ ನಡುವೆ ಯಾವ ಶೋ ಮೊದಲು ಮಾಡಬೇಕು ಎಂಬ ಬಗ್ಗೆ ವಾಹಿನಿಯವರು ಪ್ಲಾನ್ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ವಾಹಿನಿಯವರು ನಿರ್ಧಾರ ಮಾಡಬೇಕು’ ಎಂದು ಸೃಜನ್ ಲೋಕೇಶ್ (Srujan Lokesh) ಹೇಳಿದ್ದಾರೆ.

Leave A Reply

Your email address will not be published.