Accident: ಪುತ್ತೂರು; ಬಸ್ ಮತ್ತು ಬೈಕ್‌ ನಡುವೆ ಭೀಕರ ಅಪಘಾತ! ಬೈಕ್ ಸವಾರ ಸ್ಥಳದಲ್ಲೇ ಮೃತ್ಯು!

Share the Article

Accident: ಬಸ್ ಮತ್ತು ಬೈಕ್‌ ನಡುವೆ ಭೀಕರ ಅಪಘಾತ (Accident) ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿರುವುದಾಗಿದೆ.

ಇದನ್ನೂ ಓದಿ: KCET 2024: CET ಗೆ 2nd ಪಿಯುಸಿ ಅಂಕಗಳನ್ನು ಅಪ್ಲೋಡ್ ಮಾಡಲು ಲಾಸ್ಟ್ ಡೇಟ್ ಫಿಕ್ಸ್ !!

ಮಾಹಿತಿ ಪ್ರಕಾರ, ಪುರುಷರಕಟ್ಟೆ ಯಲ್ಲಿರುವ ಬಿಂದು ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟ‌ರ್ ಆಗಿ ಕೆಲಸ ನಿರ್ವಹಿಸುವ ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್ ಎನ್ನುವವ ಎಂದಿನಂತೆ ಕೆಲಸಕ್ಕೆ ತೆರಳುವಾಗ ಬಸ್ ಮತ್ತು ಬೈಕ್‌ ನಡುವೆ ಈ ದುರ್ಘಟನೆ ನಡೆದು ಸವಾರ ಮೋಕ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಹೆಚ್ಚಿನ ಮಾಹಿತಿ ಪೊಲೀಸ್ ವಿಚಾರಣೆ ನಂತರ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: H D Revanna: ರೇವಣ್ಣ ರಿಲೀಸ್- ತಬ್ಬಿಕೊಂಡು ಸ್ವಾಗತಿಸಿದ ಕುಮಾರಸ್ವಾಮಿ, ಗಂಡ ಬಂದರೂ ಮನೆಗೆ ಬಾರದ ಭವಾನಿ !!

Leave A Reply