Snake Bite: ಮನುಷ್ಯನ ರಕ್ತಕ್ಕೆ ಎರಡು ಹನಿ ಹಾವಿನ ವಿಷ ಹಾಕಿದರೆ ಏನಾಗುತ್ತದೆ ಗೊತ್ತಾ? : ಹಾವು ಕಡಿತಕ್ಕೆ ನೀಡುವ ಆ್ಯಂಟಿ ವೆನಮ್ ಹೇಗೆ ತಯಾರಾಗುತ್ತೆ ಗೊತ್ತಾ?

Snake Bite: ನೀವು ಎಂದಾದರೂ ಯೋಚಿಸಿದ್ದೀರಾ ಹಾವು ಕಚ್ಚಿದ(Snake Bite) ನಂತರ ಮನುಷ್ಯನ ರಕ್ತ ಏನಾಗುತ್ತದೆ ಎಂದು? ಇದು ಹಲವರಿಗೆ ಕಾಡುವ ಪ್ರಶ್ನೆ. ಆದರೆ ಇದಕ್ಕೆ ಅನೇಕರು ಒಂದೊಂದು ರೀತಿಯ ಉತ್ತರ ನೀಡುತ್ತಾರೆ. ಆದರೆ ಇದೀಗ ಆ ಪ್ರಶ್ನೆಗೆ ಕಷ್ಟ ಉತ್ತರ ದೊರೆತಿದೆ. ಅಮೆರಿಕಾದ ಒಂದಷ್ಟು ಜನ ವಿಜ್ಞಾನಿಗಳು ಕಿಂಗ್ ಕೋಬ್ರಾ ಹಾವಿನ ವಿಷವನ್ನು(Snake poison) ಸಂಗ್ರಹಿಸಿ, ಬಳಿಕ ಆ ವಿಷಯವನ್ನು ತೆಗೆದುಕೊಂಡು, ಸ್ವಲ್ಪ ಮಾನವ ರಕ್ತವನ್ನು(Human blood) ಮತ್ತೊಂದು ಸಣ್ಣ ಲೋಟದಲ್ಲಿ ತೆಗೆದುಕೊಂಡು ನಂತರ, ಹಾವಿನ ದ್ರವ್ಯದ(Snake poison) ಎರಡು ಮೂರು ಹನಿಗಳನ್ನು ಅದಕ್ಕೆ ಹಾಕಲಾಯಿತು. ಸ್ವಲ್ಪ ಸಮಯದಲ್ಲಿಯೇ ರಕ್ತ ಹೆಪ್ಪುಗಟ್ಟಲು ಪ್ರಾರಂಬಿಸಿತು.

ಇದನ್ನೂ ಓದಿ: Kerala: ಕೇರಳದಲ್ಲಿ ನಸುಕಿನ ಜಾವ ಐಸ್‌ಕ್ರೀಂ ಬಾಂಬ್‌ ಸ್ಫೋಟ

ಈ ಪ್ರಯೋಗದ ಬಳಿಕ ಹಾವಿನ ವಿಷದಿಂದ(Snake poison) ರಕ್ತ ಹೆಪ್ಪುಗಟ್ಟುವುದರಿಂದ ಸಾವು ಸಂಭವಿಸುತ್ತದೆ ಎಂದು ಹೇಳಲಾಗಿದೆ. ದೇಹದಲ್ಲಿ ರೂಪುಗೊಂಡ ರಕ್ತ ಹೆಪ್ಪುಗಟ್ಟುವಿಕೆಯಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಪೂರೈಕೆ(Blood flow) ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಹೃದಯ, ಶ್ವಾಸಕೋಶ ಮತ್ತು ಇತರ ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆ ನಿಂತರೆ ಸಾವು(Death) ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: Belthangady: ವಿದ್ಯುತ್ ಕಂಬಕ್ಕೆ ಮಿನಿ ಬಸ್ ಡಿಕ್ಕಿ: 17 ಮಂದಿಗೆ ಗಾಯ

ಹಾವು ಕಡಿತಕ್ಕೆ ಪ್ರತಿ ವಿಷವೇ(Anti snake venom) ಚಿಕಿತ್ಸೆ ಎನ್ನುತ್ತಾರೆ ವೈದ್ಯರು. ತುರ್ತು ಸಮಯದಲ್ಲಿ ಇದು ಹಾವುಗಳಿಂದ ಮನುಷ್ಯನನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅಚ್ಚರಿಯೆಂದರೆ ಹಾವಿನ ವಿಷದಿಂದ ಆ್ಯಂಟಿ ವೆನಮ್(Anti snake venom) ಕೂಡ ತಯಾರಿಸಲಾಗಿದೆ. ಇದಕ್ಕಾಗಿ, ಹಾವಿನ ವಿಷವನ್ನು(snake poison) ಮೊದಲು ಅದರ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುವಷ್ಟು ದುರ್ಬಲಗೊಳಿಸಲಾಗುತ್ತದೆ ಮತ್ತು ಕುರಿ ಅಥವಾ ಕುದುರೆಗಳಿಗೆ ಕುಚ್ಚಲಾಗುತ್ತದೆ.

ಪರಿಣಾಮವಾಗಿ, ಅವುಗಳ ದೇಹವು ಹಾವಿನ(Snake poison)ವಿಷವನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಅದರ ನಂತರ ಈ ಪ್ರತಿಕಾಯಗಳನ್ನು ಅವುಗಳ ರಕ್ತದಿಂದ ಬೇರ್ಪಡಿಸಲಾಗುತ್ತದೆ ಮತ್ತು ಪ್ರತಿವಿಷವನ್ನು ತಯಾರಿಸಲಾಗುತ್ತದೆ. ಆಂಟಿವೆನಮ್‌ನಲ್ಲಿರುವ(Anti snake venom) ಈ ಪ್ರತಿಕಾಯಗಳು ಮಾನವ ರಕ್ತದಲ್ಲಿನ ವಿಷವನ್ನು ತಟಸ್ಥಗೊಳಿಸುತ್ತವೆ. ಆ ಮೂಲಕ ಸಂಭವಿಸ ಬಹುದಾದ ಸಾವುಗಳನ್ನು ತಡೆಯ ಬಹುದಾಗಿದೆ.

Leave A Reply

Your email address will not be published.