Kerala: ಕೇರಳದಲ್ಲಿ ನಸುಕಿನ ಜಾವ ಐಸ್‌ಕ್ರೀಂ ಬಾಂಬ್‌ ಸ್ಫೋಟ

Kerala: ಕೇರಳದ ಕಣ್ಣೂರಿನಲ್ಲಿ ಸೋಮವಾರ ಬೆಳಗ್ಗೆ ಪೊಲೀಸ್ ವಾಹನದ ಮುಂದೆ ಬಾಂಬ್ ಎಸೆದ ಘಟನೆ ನಡೆದಿದೆ. ಅದೃಷ್ಟವಶಾತ್, ಘಟನೆಯ ಪರಿಣಾಮವಾಗಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.

ಇದನ್ನೂ ಓದಿ: Crime: 1 ಕೊಟಿ ರೂಪಾಯಿಯೊಂದಿಗೆ ಮಗಳು, ಪ್ರಿಯಕರನ ಜೊತೆ ಎಸ್ಕೇಪ್

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರ ನಿತ್ಯದ ಕಾರ್ಯಾಚರಣೆ ವೇಳೆ ಸ್ಫೋಟ ಸಂಭವಿಸಿದೆ.

ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ನಸುಕಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ರಸ್ತೆಗೆ ಎಸೆದ ಎರಡು ಐಸ್ ಕ್ರೀಮ್ ಬಾಂಬ್‌ಗಳು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ಫೋಟಗೊಂಡ ಕುರಿತು ವರದಿಯಾಗಿದೆ. ಐಸ್ ಕ್ರೀಮ್ ಬಾಂಬ್ ಎಂಬುದು ಚೆಂಡಿನ ಆಕಾರದ ಐಸ್ ಕ್ರೀಮ್ ಕಂಟೇನರ್ ಬಳಸಿ ತಯಾರಿಸಿದ ಸ್ಫೋಟಕವಾಗಿದೆ. ದಾಳಿಕೋರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Belthangady: ವಿದ್ಯುತ್ ಕಂಬಕ್ಕೆ ಮಿನಿ ಬಸ್ ಡಿಕ್ಕಿ: 17 ಮಂದಿಗೆ ಗಾಯ

ಇಲ್ಲಿನ ದೇವಸ್ಥಾನವೊಂದರಲ್ಲಿ ಭಕ್ತರು ಅರ್ಪಿಸುವ ಕಾಣಿಕೆ ವಿಚಾರದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ನಡುವೆ ಸಂಘರ್ಷ ನಡೆದಿತ್ತು. ಈ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ.

ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಫೋಟದ ಸ್ಥಳವು ಪೊಲೀಸ್ ಶಿಬಿರದಿಂದ ಕೆಲವು ಮೀಟರ್ ದೂರದಲ್ಲಿದೆ.

Leave A Reply

Your email address will not be published.