Belthangady: ವಿದ್ಯುತ್ ಕಂಬಕ್ಕೆ ಮಿನಿ ಬಸ್ ಡಿಕ್ಕಿ: 17 ಮಂದಿಗೆ ಗಾಯ

Belthangady: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆಯ ಕಾವು ಚಡಾವು ಎಂಬಲ್ಲಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: Mumbai Dust Storm: ಮುಂಬಯಿನಲ್ಲಿ ಮಳೆ, ಗಾಳಿಗೆ ಉರುಳಿದ ಬೃಹತ್ ಹೋರ್ಡಿಂಗ್, 8 ಸಾವು

ಬೆಂಗಳೂರಿನಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ ಈ ಮಿನಿ ಬಸ್ ರಸ್ತೆಯನ್ನು ಬಿಟ್ಟುಗುಡ್ಡ ಹತ್ತಿ ಖಾಸಗಿ ವಿದ್ಯುತ್ ಲೈನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೆಂಗಳೂರು ಮೂಲದ ವೆಂಕಟಸ್ವಾಮಪ್ಪ(45) ಎಂಬುವವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Crime: 1 ಕೊಟಿ ರೂಪಾಯಿಯೊಂದಿಗೆ ಮಗಳು, ಪ್ರಿಯಕರನ ಜೊತೆ ಎಸ್ಕೇಪ್

ಗಾಯಾಳುಗಳಾದ ಕೀರ್ತನಾ(15), ತನಿಷ್ಕಾ (7), ಯಶವಂತ(21), ರೂಪಾ(37), ಹಂಸಾ(39), ತನುಶ್ರೀ (21), ವಿಕಾಸ್ (13), ಅಖಿಲಾ(23), ರತ್ನಮ್ಮ(47), ಬಾಲಕೃಷ್ಣ(33), ಎಲ್ಲಮ್ಮ(62), ರೂಪಾ(33), ಪ್ರೀತಮ್ (11) ಯಲ್ಲಮ್ಮ, ಪಾವನಾ, ಮಂಜುಳಾ, ಬಿಂದುಶ್ರೀ, ಮಿಥುನ್ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಅಪಘಾತವಾದ ತಕ್ಷಣ ಸ್ಥಳೀಯರಾದ ಸಚಿನ್ ಭಿಡೆ ಹಾಗೂ ಜಗದೀಶ ನಾಯ್ಕ ಸ್ಥಳಕ್ಕೆ ಧಾವಿಸಿದ್ದು ಇತರ ವಾಹನ ಚಾಲಕರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಬಸ್ ಗುಡ್ಡ ಹತ್ತಿದ ಸ್ಥಳದಲ್ಲಿ ವಿದ್ಯುತ್ ಕಂಬವಿದ್ದ ಕಾರಣ ಅದಕ್ಕೆ ಡಿಕ್ಕಿಯಾಗಿ ನಿಂತಿದೆ. ಒಂದು ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗದೆ ಇರುತ್ತಿದ್ದರೆ ಕೆಳಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿಗೆ ಮಿನಿ ಬಸ್ ಬೀಳುವ ಸಾಧ್ಯತೆ ಇತ್ತು. ನದಿಯ ಈ ಪ್ರದೇಶದಲ್ಲಿ ಆಳವಾದ ಹೊಂಡವೂ ಇದೆ. ಕಳೆದ ವರ್ಷ ಇದೇ ಸ್ಥಳದಿಂದ ಸುಮಾರು 50 ಮೀ. ಕೆಳಭಾಗದಲ್ಲಿ ರಿಕ್ಷಾವೊಂದು ನದಿಗೆ ಉರುಳಿ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ಇಲ್ಲಿ ಮಣ್ಣಿನ ದಿಬ್ಬ ನಿರ್ಮಿಸಲಾಗಿತ್ತು.

Leave A Reply

Your email address will not be published.