Astro Tips: ಮನೆಯ ಬಳಿ ಈ ಮರ ಇದ್ರೆ ಸಾಕು ಬದುಕೇ ಬಂಗಾರವಾಗುತ್ತೆ!
Neem Benefits: ವಾಸ್ತು ಪ್ರಕಾರ ಕೆಲ ಮರಗಳು ನಮ್ಮ ಜೀವನದಲ್ಲಿ ಅದೃಷ್ಟವನ್ನ ತರುತ್ತದೆ. ಅಂತೆಯೇ ಪ್ರಕೃತಿಯನ್ನ ಪೂಜೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯು ಇದೆ. ಮನೆ ಸುತ್ತಮುತ್ತ ಮರಗಳು ಮತ್ತು ಗಿಡಗಳನ್ನು ನೆಟ್ಟರೆ, ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ವಾಸ್ತು ದೋಷಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗೆಯೇ ಔಷಧೀಯ ಗುಣಗಳಿಂದ ಕೂಡಿರುವ ಬೇವಿನ ಮರ ಕೂಡ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಮನೆಯ ಸುತ್ತಲೂ ಅಥವಾ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಬೇವಿನ ಮರವನ್ನು ನೆಡುವುದರಿಂದ ಉತ್ತಮ ಗ್ರಹಗಳ ಶಕ್ತಿಯನ್ನ ಹೆಚ್ಚಿಸುತ್ತದೆ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದ್ರೆ ಬೇವಿನ ಮರಗಳನ್ನ ಯಾವ ದಿಕ್ಕಿನಲ್ಲಿ ನೆಡಬೇಕು ಮತ್ತು ಅದರಿಂದ ಯಾವ ರೀತಿ ಪ್ರಯೋಜನಗಳು (Neem Benefits) ಸಿಗುತ್ತದೆ ಎಂಬುದು ನೋಡೋಣ.
ಇದನ್ನೂ ಓದಿ: Home Tips: ಮನೆ ಕಟ್ಟುವಾಗ ಈ ಟಿಪ್ಸ್ ಬಳಸಿ, 4 ರಿಂದ 5 ಲಕ್ಷ ಉಳಿಸಿ !!
ವಾಸ್ತುಶಾಸ್ತ್ರವು ಮರಗಳು ಮತ್ತು ಸಸ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಅವುಗಳಲ್ಲಿ ಬೇವಿನ ಮರವು ತುಂಬಾ ಹೆಚ್ಚಿನ ಮಹತ್ವವನ್ನ ಹೊಂದಿದೆ. ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಇದನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೇವಿನ ಮರವು ಶನಿ ಮತ್ತು ಕೇತುಗಳಿಗೆ ಸಂಬಂಧಿಸಿದ್ದು, ಈ ಎರಡು ಗ್ರಹಗಳ ದುಷ್ಪರಿಣಾಮಗಳು ಇದ್ದಾಗ ಅಲ್ಲಿ ಬೇವಿನ ಮರವನ್ನು ನೆಟ್ಟು ಪೂಜಿಸುವುದರಿಂದ ಗ್ರಹದೋಷಗಳಿಂದ ಪರಿಹಾರ ದೊರೆಯುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: CM Siddaramaiah: ನನಗಿನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಲು ಇಷ್ಟವಿಲ್ಲ- ಸಿಎಂ ಸಿದ್ದರಾಮಯ್ಯ!!
ಬೇವಿನ ಮರದಿಂದ ಹವನ ಮಾಡಿದರೆ ಶನಿದೇವನ ಕೋಪ ಕಡಿಮೆಯಾಗುತ್ತದೆ. ಇನ್ನು ಬೇವಿನ ಸೊಪ್ಪನ್ನು ಬೆರೆಸಿ ಸ್ನಾನ ಮಾಡುವುದರಿಂದ ಕೇತುವಿನ ದೋಷಗಳು ನಿವಾರಣೆಯಾಗುತ್ತವೆ. ಇನ್ನು ಭಾನುವಾರ ಸೂರ್ಯೋದಯದ ಸಮಯದಲ್ಲಿ ಬೇವಿನ ಮೇಲೆ ನೀರು ಹಾಕುವುದರಿಂದ ಗ್ರಹಗಳ ದುಷ್ಪರಿಣಾಮಗಳು ನಿವಾರಣೆಯಾಗುತ್ತವೆ.
ಮುಖ್ಯವಾಗಿ ಬೇವಿನ ಮರವು ದೈವಿಕ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಶನಿ ಮತ್ತು ಕೇತುಗಳ ಜೊತೆಗೆ, ಬೇವಿನ ಮರವು ದಕ್ಷಿಣವನ್ನು ನಿಯಂತ್ರಿಸುವ ಮಂಗಳದೊಂದಿಗೆ ಸಂಪರ್ಕವನ್ನು ಹೊಂದಿದೆ. ಬೇವಿನ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಪಿತೃ ದೋಷವೂ ದೂರವಾಗುತ್ತದೆ. ಶನಿ ದೋಷದಿಂದ ಮುಕ್ತಿ ಪಡೆಯಲು ಮತ್ತು ಶನಿದೇವನ ಆಶೀರ್ವಾದ ಪಡೆಯಲು ಬೇವಿನ ಮರದ ಮಾಲೆಯನ್ನು ಧರಿಸಬೇಕು. ಹೀಗೆ ಮಾಡುವುದರಿಂದ ಶನಿದೋಷದಿಂದ ಮುಕ್ತಿ ದೊರೆಯುತ್ತದೆ ಮತ್ತು ಶನಿಯ ಅಶುಭ ಪರಿಣಾಮ ಕಡಿಮೆ ಆಗುತ್ತದೆ ಎನ್ನಲಾಗುತ್ತದೆ.
ಈ ಬೇವಿನ ಮರವನ್ನ ಪೂಜೆ ಮಾಡುವುದರಿಂದ ನಿಮಗೆ ಆರ್ಥಿಕ ಲಾಭಗಳು ಸಹ ಸಿಗುತ್ತದೆ ಎನ್ನಲಾಗುತ್ತದೆ. ನಿಮಗೆ ಸಾಲದ ಸಮಸ್ಯೆ ಇದ್ದರೆ ತಪ್ಪದೇ ಬೇವಿನ ಮರವನ್ನ ಪೂಜೆ ಮಾಡಿ. ಇನ್ನು ಈ ಬೇವಿನ ಮರದ ವಿಚಾರದಲ್ಲಿ ನಾವು ಅನೇಕ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ ಇದನ್ನ ಸೂರ್ಯಸ್ತದ ನಂತರ ಮುಟ್ಟವುದು ಮತ್ತು ಕೀಳುವುದರಿಂದ ಅಶುಭ ಫಲಗಳನ್ನ ನೀಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ ಹಾಗೂ ಅಮವಾಸ್ಯೆಯಂದು ನೀವು ಬೇವಿನ ಮರ ಹಾಗೂ ಅದರ ಎಲೆಗಳನ್ನ ಮುಟ್ಟುವುದು ಹಾಗೂ ಕೀಳುವುದು ಮಾಡಬಾರದು.