Eye Shape: ಕಣ್ಣಿನ ಆಕಾರ ನೋಡಿ ವ್ಯಕ್ತಿತ್ವ ರಹಸ್ಯವನ್ನು ತಿಳಿಯುವುದು ತುಂಬಾ ಸುಲಭ!
Eye Shape: ಕಣ್ಣುಗಳ ಆಕಾರದ ಮೂಲಕ ನಾವು ವ್ಯಕ್ತಿಯ ಗುಣ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಹೌದು, ಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ದೇಹದ ಮೇಲೆ ಇರುವ ಅಂಗಗಳ ರಚನೆ ಮತ್ತು ಆಕಾರವನ್ನು ನೋಡುವ ಮೂಲಕ ಭವಿಷ್ಯವನ್ನ ತಿಳಿದುಕೊಳ್ಳಲು ಸಾಧ್ಯ.
ಸಾಮುದ್ರಿಕ ಶಾಸ್ತ್ರದಲ್ಲಿ ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಕಣ್ಣುಗಳ ಬಣ್ಣ ಮತ್ತು ವಿನ್ಯಾಸದಿಂದ ತಿಳಿಯಬಹುದು. ಸಾಮಾನ್ಯವಾಗಿ ಕಣ್ಣು ಮನಸ್ಸಿನ ಪ್ರತಿಬಿಂಬ ಎಂದು ಕರೆಯಲಾಗುತ್ತದೆ, ಕಣ್ಣುಗಳು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳ ಕಲ್ಪನೆಯನ್ನು ನೀಡುತ್ತದೆ. ಇದಲ್ಲದೆ, ಕಣ್ಣುಗಳ ಆಕಾರವು ವ್ಯಕ್ತಿತ್ವದ ಲಕ್ಷಣಗಳ ಬಗ್ಗೆ ಸುಳಿವು ನೀಡುತ್ತದೆ.
ದೊಡ್ಡ ಮತ್ತು ಅಗಲವಾದ ಕಣ್ಣುಗಳನ್ನು ಹೊಂದಿರುವ ಜನರು ಇತರ ಜನರಿಗೆ ಸಹಾಯ ಮಾಡುವ ವಿಶಾಲವಾದ ಮನಸ್ಸನ್ನು ಹೊಂದಿರುತ್ತಾರೆ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಸ್ವೀಕರಿಸಲು ಸಿದ್ಧರಿರುತ್ತಾರೆ.
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಕಣ್ಣುಗಳು ದೊಡ್ಡದಾಗಿ, ಉಬ್ಬಿಕೊಂಡು ಮತ್ತು ಹೊರಕ್ಕೆ ಚಾಚಿಕೊಂಡಿದ್ದರೆ ಅವರನ್ನು ಶುದ್ಧ ಹೃದಯವಂತರು. ಈ ಜನರು ತುಂಬಾ ಬುದ್ಧಿವಂತರು ಮತ್ತು ಅವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ.
ಚಿಕ್ಕ ಕಣ್ಣುಗಳು ಹೊಂದಿರುವ ಜನರು ಇತರರನ್ನು ಸುಲಭವಾಗಿ ನಂಬುವುದಿಲ್ಲ. ಯಾವಾಗಲೂ ತಮ್ಮ ನಿಜವಾದ ಭಾವನೆಗಳನ್ನು ಪ್ರದರ್ಶಿಸುತ್ತಾರೆ. ಅವರು ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸುವ ಮತ್ತು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಪರಿಣತಿ ಮತ್ತು ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತಾರೆ.
ಬಾದಾಮಿ ಆಕಾರದ ಕಣ್ಣುಗಳು ಅಂದರೆ, ಮಧ್ಯದಲ್ಲಿ ಸ್ವಲ್ಪ ಅಗಲವಾಗಿರುವ ಕಣ್ಣುಗಳು ಬಾದಾಮಿಯಂತೆ ಎರಡೂ ತುದಿಗಳಲ್ಲಿ ಸಮವಾಗಿ ಸೇರುವುದು ಸೌಂದರ್ಯದ ಸಂಕೇತವಾಗಿದೆ. ಅಂತಹ ವ್ಯಕ್ತಿಗಳು ಎಲ್ಲಾ ಚಟುವಟಿಕೆಗಳಲ್ಲಿ ಎಚ್ಚರಿಕೆಯಿಂದ ಭಾಗವಹಿಸುತ್ತಾರೆ. ಅವರು ತಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಆದರೆ ಮನಸ್ಸಿನಿಂದ ಒಳ್ಳೆಯವರು.
ದುಂಡಗಿನ ಕಣ್ಣುಗಳನ್ನು ಹೊಂದಿರುವ ಜನರು ಬಹಳ ಸೃಜನಾತ್ಮಕ ವ್ಯಕ್ತಿಗಳು ಎನ್ನಲಾಗುತ್ತದೆ. ಸುಲಭವಾಗಿ ಇತರರ ಗಮನವನ್ನು ಸೆಳೆಯುತ್ತಾರೆ ಮತ್ತು ಇವರನ್ನ ಎಲ್ಲರೂ ಪ್ರೀತಿಸುತ್ತಾರೆ.
ಕಣ್ಣುಗಳ ನಡುವೆ ದೊಡ್ಡ ಜಾಗ ಇದ್ದರೆ, ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಅನೇಕ ವಿಚಾರಗಳಳನ್ನ ಹೇಳುತ್ತದೆ. ಕಣ್ಣಿನ ಉದ್ದದ ಜಾಗವನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಎಲ್ಲರ ಕಣ್ಣುಗಳನ್ನು ಈ ರೀತಿಯಲ್ಲಿ ಇರುವುದಿಲ್ಲ. ಅವರು ಯಾವುದೇ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ ಮತ್ತು ವಿಶಾಲ ಮನೋಭಾವವನ್ನು ಹೊಂದಿರುತ್ತಾರೆ.