Vaishnavi Gowda: ಚಿತ್ರೀಕರಣದ ವೇಳೆ ನಟಿ ವೈಷ್ಣವಿ ಗೌಡರಿಂದ ಮಹಾ ಎಡವಟ್ಟು; ಬಿತ್ತು ಭಾರೀ ಟ್ರಾಫಿಕ್‌ ಫೈನ್‌

Vaishnavi Gowda: ಸ್ಕೂಟರಿನಲ್ಲಿ ಪ್ರಯಾಣ ಮಾಡುವಾಗ ಹೆಲ್ಮೆಟ್‌ ಧರಿಸದ ಕಾರಣ ʼಸೀತಾರಾಮʼ ಸೀರಿಯಲ್‌ ನಟಿ ವೈಷ್ಣವಿ ಗೌಡ (Vaishnavi Gowda) ಅವರಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ. ಅರೆ ಇದೇನಿದು, ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಹಾಕದೇ ಇರುವುದಕ್ಕೆ ನಟಿಗೆ ದಂಡ ಹಾಕಿದ್ದು ಯಾಕೆ? ಬನ್ನಿ ತಿಳಿಯೋಣ.

ಇದನ್ನೂ ಓದಿ: Karnataka BJP: ರಾಜ್ಯ ಬಿಜೆಪಿಗೆ ಹೆಚ್ಚಿದ ಆತಂಕ – ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಾಲಿ ಇಷ್ಟೇ ಸೀಟಾ?!

ಸೀರಿಯಲ್‌ ಚಿತ್ರೀಕರಣದ ವೇಳೆ ನಟಿ ಹೆಲ್ಮೆಟ್‌ ಧರಿಸದೇ ನಿಯಮ ಉಲ್ಲಂಘಿಸಿದ್ದು, ಈ ದೃಶ್ಯವನ್ನು ಫೋಟೋದಲ್ಲಿ ಸೆರೆ ಹಿಡಿದಿದ್ದ ಸಾಮಾಜಿಕ ಹೋರಾಟಗಾರ ಜಯಪ್ರಕಾಶ್‌ ಹೆಕ್ಕೂರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಹಾಗೂ ಈ ಫೋಟೋವನ್ನು ಸಹ ದೂರಿನಲ್ಲಿ ಲಗತ್ತಿಸಿದ್ದರು ಕೂಡಾ.

ಇದನ್ನೂ ಓದಿ: 7th Pay Commission: ನಿವೃತ್ತ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಯ ಟೆನ್ಷನ್!

ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರು ರಾಜಾಜಿನಗರ ಪೊಲೀಸರಿಗೆ (Bengaluru Traffic Police) ವರ್ಗಾವಣೆ ಮಾಡಿದ್ದು, ದೂರು ನೀಡಿದ ಸಾಮಾಜಿಕ ಹೋರಾಟಗಾರ ನೀಡಿದ ದೂರಿನ ಮೇರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ವೈಷ್ಣವಿ ಗೌಡ ಅವರಿಗೆ ರಾಜಾಜಿನಗರ ಸಂಚಾರ ಪೊಲೀಸರು ರೂ.500 ದಂಡ ವಿಧಿಸಿದ್ದಾರೆ.

ಸೀರಿಯಲ್‌, ಸಿನಿಮಾ, ವೆಬ್‌ ಸಿರೀಸ್‌ನಲ್ಲಿ ನಟಿಸುವ ಕಲಾವಿದರು ತಮ್ಮ ಮುಖ ಕಾಣಲಿ ಎಂಬ ಉದ್ದೇಶದಿಂದ ಹೆಲ್ಮೆಟ್‌ ಧರಿಸದೇ ನಟನೆ ಮಾಡುತ್ತಾರೆ. ಕಾರಿನಲ್ಲಿ ಪ್ರಯಾಣ ಮಡುವಾಗ ಸೀಟ್‌ ಬೆಲ್ಟ್‌ ಧರಿಸುವುದಿಲ್ಲ. ಕೆಲವರಂತೂ ಮೇಕಪ್‌ ಹಾಳಾಗುತ್ತದೆ ಎಂದು ಹೆಲ್ಮೆಟ್‌ ಹಾಕುವುದಿಲ್ಲ. ಇದು ನಿಜಕ್ಕೂ ವೀಕ್ಷಕರಿಗೆ ತಪ್ಪು ಸಂದೇಶವನ್ನು ರವಾನೆ ಮಾಡಿದ ರೀತಿ ಆಗುತ್ತದೆ.

ಹಾಗಾಗಿ ಸಂಚಾರ ಪೊಲೀಸರು ಕಲಾವಿದರಿಗೂ ಈ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಬೇಕು. ಇವರ ವಿರುದ್ಧ ಕೂಡಾ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂಬುವುದು ಈಗಂತೂ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.

Leave A Reply

Your email address will not be published.