Preta Maduve: ‘ಪ್ರೇತ ಮದುವೆ’ಗೆ ವರ ಬೇಕೆಂದು ಜಾಹಿರಾತು ಪ್ರಕಟ – ಬಂತು 50ಕ್ಕೂ ಹೆಚ್ಚು ಪ್ರತಿಕ್ರಿಯೆ!!

Preta Maduve: ಮದುವೆಯಾಗದೇ ಸತ್ತವರಿಗೆ ಹೆಣ್ಣು ಅಥವಾ ಗಂಡು ನೋಡಿ ಶಾಸ್ತ್ರಬದ್ಧವಾಗಿದೆ ಮದುವೆ ಮಾಡುವುದರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರೇತಗಳಿಗೆ ಮದುವೆ(Preta Maduve) ಮಾಡಿಸುವುದು ಸಾಮನ್ಯವಾಗಿದೆ. ಆದರೀಗ ನಾವು ಹೇಳಹೊರಟಿರುವ ವಿಚಾರ ಮಾತ್ರ ಹೊಸತಾಗಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ರೋಚಕ ಟ್ವಿಸ್ಟ್- JDS ಶಾಸಕನಿಂದಲೇ ನಡೆಯಿತಾ ಕುತಂತ್ರ?!
ಹೌದು, ನಾವು ಹೇಳ ಹೊರಟಿರುವ ಹೊಸ ವಿಷ್ಯಾ ಎಂದರೆ ಪ್ರೇತದ ಮದುವೆಗಾಗಿ ವರ ಹುಡುಕಲು ಜಾಹೀರಾತು ನೀಡಿರುವುದು. ಸಾಮಾನ್ಯವಾಗಿ ವರ ಬೇಕಾಗಿದ್ದಾನೆ, ವಧು ಬೇಕಾಗಿದ್ದಾಳೆ ಎಂಬ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ ನೋಡಿರುತ್ತೀರಿ. ಆದರೆ ಪ್ರೇತಗಳ ಮದುವೆಗೆ ವರ ಬೇಕಾಗಿದ್ದಾನೆ ಎಂಬ ಜಾಹೀರಾತು(Advertisement) ಎಂತವರಿಗೂ ಒಮ್ಮೆ ಅಚ್ಚರಿ ಮೂಡಿಸುತ್ತದೆ. ಅಂತೆಯೇ ಇದೀಗ ಹೊರಡಿಸಿರುವ ಜಾಹಿರಾತು ಕೂಡ ಹಾಗೆ. ಇದು ಓದುಗುರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಅಚ್ಚರಿ ಏನಂದ್ರೆ ಈ ಜಾಹೀರಾತಿಗೆ ಸುಮಾರು 50ಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದೆ!!
ಜಾಹೀರಾತಿನಲ್ಲಿ ಏನಿದೆ.?
ಮೇ ತಿಂಗಳ 11ನೇ ತಾರೀಖಿನಂದು ಪತ್ರಿಕೆಯೊಂದರಲ್ಲಿ ‘(ಜಾತಿ ಹೆಸರು ನೀಡಿ) ಸುಮಾರು 30 ವರ್ಷದ ಹಿಂದೆ ತೀರಿ ಹೋದ ಯುವತಿಯೊಬ್ಬಳಿಗೆ ಮದುವೆ ಮಾಡಿ ಸಲು ‘ಪ್ರೇತ ವರ’ ಸದ್ಯ ಬೇಕಾಗಿದೆ !’ ಈ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷಗಳ ಗಂಡು ಹಿಂದೆ ತೀರಿಹೋದ ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೇ ದಯವಿಟ್ಟು ಸಂಪರ್ಕಿಸಿ’ ಎಂದು ತಿಳಿಸಲಾಗಿದೆ.
ಏನಿದು ಪ್ರೇತ ವರ ವೃತ್ತಾಂತ?
ಪುತ್ತೂರಿನ ನಿವಾಸಿಯೊಬ್ಬರ ಮನೆ ಮತ್ತು ಕುಟುಂಬದಲ್ಲಿ ಇತ್ತೀಚೆಗೆ ಆತಂಕಕಾರಿ ಘಟನೆಗಳು ನಡೆಯುತ್ತಿದ್ದವು. ಪ್ರಶ್ನೆ ಚಿಂತನೆ ಮೂಲಕ ಅವಲೋಕಿಸಿದಾಗ ಇದು ಪ್ರೇತ ಬಾಧೆ ಎಂದು ತಿಳಿಯಿತು. ಅವರ ಮನೆಯಲ್ಲಿ ಸುಮಾರು 30 ವರ್ಷದ ಹಿಂದೆ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಅದೀಗ ವಿವಾಹ ವಯಸ್ಸಿಗೆ ಬಂದಿರುವುದರಿಂದ ನೆನಪಿಸಲು ಇಂಥ ಘಟನೆಗಳು ನಡೆಯುತ್ತಿವೆ ಎಂದು ತಿಳಿಯಿತು. ಹೀಗಾಗಿ 30 ವರ್ಷದ ಹಿಂದೆ ತೀರಿ ಹೋದಾಕೆಗೆ ‘ಮದುವೆ’ ಮಾಡಿಸುವಂತೆ ತಿಳಿಸಲಾಯಿತು.
ಪ್ರೇತ ಮದುವೆ ಅಂದರೆ ಏನು?
ಜಾನಪದ ತಜ್ಞ ಪ್ರೊ. ಚಿನ್ನಪ್ಪ ಗೌಡರು(Professor Chonnappa Gouda)ಹೇಳುವಂತೆ- ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆಯ ಮೊದಲೇ ನಿಧನ ಹೊಂದಿದರೆ ಅವರಿಗೆ ಮೋಕ್ಷ ಇಲ್ಲ ಎಂಬ ನಂಬಿಕೆ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಮದುವೆ ಆಗದೆ ಸತ್ತವರ ಮೋಕ್ಷಕ್ಕಾಗಿ ಕುಲೆ (ಪ್ರೇತ) ಮದುವೆ ಅಂತ ಮಾಡಿಸಲಾಗುತ್ತದೆ. ಪ್ರಸಕ್ತ ಸಮಾಜದಲ್ಲಿ ಹುಡುಗ-ಹುಡುಗಿಗೆ ಯಾವ ಕ್ರಮದಲ್ಲಿ ಮದುವೆ ಮಾಡಲಾಗುತ್ತದೋ ಅದೇ ಮ ಕ್ರಮದಲ್ಲಿ ಕುಲೆ ಮದುವೆಯೂ ನಡೆಯುತ್ತದೆ. ಹುಡುಗಿ ನೋಡುವುದು, ಹುಡುಗನ ಮನೆಗೆ ಹೋಗುವುದು, ನಿಶ್ಚಿತಾರ್ಥ, ಜವಳಿ ತೆಗೆಯುವುದು, ಮದುವೆ ಸಹಿತ ಎಲ್ಲ ವಿಧಿವಿಧಾನಗಳನ್ನು ಗೌರವದಿಂದ ಮಾಡಲಾಗುತ್ತದೆ. ತುಳುನಾಡಿನಲ್ಲಿ ಇದು ನಂಬಿಕೆಯ ಮೇಲೆ ಆಗುತ್ತಿರುವ ಆಚರಣೆ. ಜೀವನದಲ್ಲಿ ಮದುವೆ ಮುಖ್ಯ ಎಂಬ ಮನೋಧರ್ಮವೂ ಇಲ್ಲಿದೆ. ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ವರ್ಗ ಸೇರಿ ನಡೆಸಲಾಗುತ್ತದೆ. ಹಾಗೆಂದು, ಎಲ್ಲ ಕುಟುಂಬಗಳಲ್ಲಿ ಇದು ಚಾಲ್ತಿಯಲ್ಲಿಲ್ಲ.
ಸಂಪ್ರದಾಯದಂತೆ ನಡೆಯುತ್ತದೆ ಮದುವೆ?
ಪ್ರೇತಗಳ ಮದುವೆ ಎಂದಾಕ್ಷಣ ಅದೇನೂ ಸುಮ್ಮನೆ ಆಗುವುದಿಲ್ಲ, ಸಂಪ್ರದಾಯದ ಪ್ರಕಾರವೇ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಬೇಕಾಗುತ್ತದೆ. ಪ್ರೇತಗಳ ಮದುವೆ ಮಾಡಿಸಲು ಆಷಾಢದ ಒಂದು ದಿನ ಮದುವೆ ಫಿಕ್ಸ್ ಮಾಡಲಾಗುತ್ತದೆ. ಮದುವೆ ದಿನ ಗೊತ್ತುಮಾಡಿದ ಬಳಿಕ ಬಂಧು-ಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಜೀವಂತ ಇರುವವರಿಗೆ ಮದುವೆ ಮಾಡಿಸಿದಂತೆ ಶಾಸ್ತ್ರೋಕ್ತವಾಗಿಯೇ ಮದುವೆ ನಡೆಯುತ್ತದೆ. ಆದರೆ ಈ ಮದುವೆಯಲ್ಲಿ ಹೋಮ ಹವನ ಮಾಡುವುದಿಲ್ಲ, ಮಂತ್ರ ಹೇಳಲು ಪೂಜಾರಿಗಳು ಇರುವುದಿಲ್ಲ. ಬದಲಾಗಿ ಎರಡು ಕುರ್ಚಿ, ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಶಾಸ್ತ್ರ ನೆರವೇರಿಸಲಾಗುತ್ತದೆ.
ಮದ್ವೆ ಮಾಡದಿದ್ದರೆ ಏನಾಗುತ್ತೆ!?
ತುಳುನಾಡಿನಲ್ಲಿ ಆಟಿ ಮಾಸದಲ್ಲಿ ನಡೆಯೋ ಈ ಪ್ರೇತಗಳ ಮದುವೆ ವಿಚಿತ್ರ ಅನಿಸಿದ್ರೂ, ಬಹಳಷ್ಟು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಕ್ಕಿಲ್ಲದೆ ಇದ್ರೆ ಕುಟುಂಬದ ಸದಸ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತೆ. ಮದುವೆಯಾಗಲು ಹೊರಟ ಯುವಕ ಯುವತಿಯರಿಗೂ ನಾನಾ ತೊಂದರೆ ಎದುರಾಗುತ್ತದೆ.