Home Crime Prajwal Revanna Case: ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ರೋಚಕ ಟ್ವಿಸ್ಟ್- JDS ಶಾಸಕನಿಂದಲೇ ನಡೆಯಿತಾ ಕುತಂತ್ರ?!

Prajwal Revanna Case: ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ರೋಚಕ ಟ್ವಿಸ್ಟ್- JDS ಶಾಸಕನಿಂದಲೇ ನಡೆಯಿತಾ ಕುತಂತ್ರ?!

Prajwal Revanna Case

Hindu neighbor gifts plot of land

Hindu neighbour gifts land to Muslim journalist

Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ(Prajwal Revanna Case) ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲೆ ಜೆಡಿಎಸ್ ಶಾಸಕ ಎ ಮಂಜು(MLA A Manju) ಅವರ ಹೆಸರು ತಳುಕು ಹಾಕಿಕೊಂಡಿದೆ. ಅವರಿಂದಲೇ ಈ ಎಲ್ಲಾ ಕುತಂತ್ರಗಳು ನಡೆಯಿತಾ? ಎಂಬ ಚರ್ಚೆ ಕೂಡ ಶುರುವಾಗಿದೆ.

ಹೌದು, ಪ್ರಜ್ವಲ್ ರೇವಣ್ಣರದ್ದು(Prajwal Revanna) ಎನ್ನಲಾದದ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಇದೀಗ ಅರಕಲಗೂಡು ಶಾಸಕ ಎ. ಮಂಜು ಅವರ ಹೆಸರು ಕೇಳಿಬರುತ್ತಿದ್ದು, ಪೆನ್ ಡ್ರೈವ್ ಹಂಚಿಕೆಯ ಆರೋಪ ಹೊತ್ತಿರುವ ನವೀನ್‌ ಗೌಡ ಈ ಸಂಬಂಧ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು ಭಾರೀ ಸಂಚಲನ ಸೃಷ್ಟಿಸಿದೆ.

ನವೀನ್ ಗೌಡ(Naveen Gouda) ಹಾಕಿದ ಆ ಒಂದು ಪೋಸ್ಟ್ ನಿಂದ ಇದೀಗ ಅರಕಲಗೂಡು ಶಾಸಕ ಎ. ಮಂಜು ಅವರೇ ಪೆನ್ ಡ್ರೈವ್ ಹಂಚಿಕೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಅಷ್ಟೇ ಅಲ್ಲದೆಅಲ್ಲದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ ಎಂದು ಆರೋಪ ಮಾಡಿದ್ದಾರೆ.

ನವೀನ್ ಗೌಡ ಹಾಕಿದ ಪೋಸ್ಟ್ ಏನು?

‘ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ.

ಇಷ್ಟೇ ಅಲ್ಲದೆ ಆ ಪೋಸ್ಟ್ ಜೊತೆಗೆ ಹೆಚ್‌.ಡಿ ದೇವೇಗೌಡ, ಹೆಚ್‌ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರೊಂದಿಗೆ ಎ. ಮಂಜು ಅವರು ಇರುವ ಫೋಟೋವೊಂದನ್ನು ಕೂಡ ಶೇರ್ ಮಾಡಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಎ ಮಂಜು ಹೇಳಿದ್ದೇನು?

ನವೀನ್ ಗೌಡ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎ ಮಂಜು ಅವರು ‘ನವೀನ್ ಗೌಡ ಯಾರು ಅಂತಾನೇ ನನಗೆ ಗೊತ್ತಿಲ್ಲ. ನನಗೆ ಪೆನ್ಡ್ರೈವ್ ಕೊಟ್ಟ ಅಂದ್ಮೇಲೆ ಎಲ್ಲರಿಗೂ ಅವನೇ ಹಂಚಿರುತ್ತಾನೆ. ನನಗೆ ಆತ ಯಾವುದೇ ಪೆನ್‌ಡ್ರೈವ್ ಕೊಟ್ಟಿಲ್ಲ. ಆತನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ. ಆ ಬಗ್ಗೆ ತನಿಖೆ ಆಗಬೇಕು. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಸೋಮವಾರ ಅರಕಲಗೂಡು ಠಾಣೆಗೆ ದೂರನ್ನೂ ಕೊಡುತ್ತೇನೆ. ನನ್ನ ಮತ್ತು ಎಚ್.ಡಿ. ದೇವೇಗೌಡರ ಸಂಬಂಧ ಹಾಳು ಮಾಡಲು ಈ ರೀತಿ ಮಾಡಲಾಗುತ್ತಿದೆ. ಹೀಗಾಗಿ SIT ಅಧಿಕಾರಿಗಳು ಮೊದಲು ನವೀನ್ಗೌಡನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.