Indian Railway: ರೈಲಿನೊಳಗೆ ಈ ಸಮಯದಲ್ಲಿ ಟಿಕೆಟ್ ಚೆಕ್ ಮಾಡುವಂತಿಲ್ಲ !!

Indian Railway: ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ದೇಶದ ಜೀವನಾಡಿಯಾದ ಈ ರೈಲುಗಳು ಪ್ರತಿದಿನ ಸುಮಾರು 2.5 ಕೋಟಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತವೆ. ಹೆಚ್ಚಾಗಿ ಜನರು ರೈಲು ಪ್ರಯಾಣವನ್ನು ಅನುಸರಿಸುವ ಕಾರಣ ಕೆಲವು ರೈಲ್ವೆ ನಿಯಮಗಳು ನಿಮ್ಮ ಗಮನಕ್ಕಿರಬೇಕು. ಅಂತೆಯೇ ಇದೀಗ ನಾವು ರೈಲ್ವೆ ಟಿಕೆಟ್ ಚೆಕ್ ಬಗ್ಗೆ ಹೇಳಲಿದ್ದೇವೆ.

ಭಾರತೀಯ ರೈಲ್ವೇಯಲ್ಲಿ(Indian Railway) ಪ್ರಯಾಣಿಸುವಾಗ ಟಿಟಿಇ ಅವರು ಟಿಕೆಟ್ ಚೆಕ್ ಮಾಡುತ್ತಾ ಬರುವುದು ಸಾಮಾನ್ಯ. ಆದರೆ ಇದಕ್ಕೂ ಒಂದು ನಿಯಮವಿದೆ. ಅಂದರೆ ಟಿಟಿಇ(TTE) ಅವರು ನಿಮ್ಮ ಟಿಕೆಟ್‌ಗಳನ್ನು ಎಲ್ಲಾ ಸಮಯದಲ್ಲಿ ಚೆಕ್ ಮಾಡಬಹುದು. ಆದರೆ ಈ ಸಮಯದಲ್ಲಿ ಮಾತ್ರ ಅವರು ಚೆಕ್ ಮಾಡುವಂತಿಲ್ಲ.
* ಯಾವ ಸಮಯದಲ್ಲಿ ಚೆಕ್ ಮಾಡುವಂತಿಲ್ಲ ?
ರೈಲ್ವೆ ನಿಯಮಗಳ ಪ್ರಕಾರ, ಟಿಟಿಇ ರಾತ್ರಿ 10 ರಿಂದ ಬೆಳಿಗ್ಗೆ 6 ರ ನಡುವೆ ಟಿಕೆಟ್ ಪರಿಶೀಲಿಸುವಂತಿಲ್ಲ. ಯಾಕೆಂದರೆ ಪ್ರಯಾಣಿಕರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮಲಗಲು ನಿಗದಿಪಡಿಸಿದ ಸಮಯವಾಗಿದೆ. ಈ ಸಮಯದಲ್ಲಿ ಅವರೆಲ್ಲರೂ ನಿದ್ದೆಯಲ್ಲಿರುತ್ತಾರೆ. ಅವರ ನಿದ್ದೆಯನ್ನು ಭಂಗ ಮಾಡಬಾರದು ಎನ್ನುವ ಕಾರಣಕ್ಕೆ ಇಲಾಖೆಯು ಈ ನಿಯಮಗಳನ್ನು ಹೊರಡಿಸಿದೆ.
ಅಂದಹಾಗೆ ಬೆಳಿಗ್ಗೆ 6 ಗಂಟೆಯ ನಂತರ, ನೀವು ಮಧ್ಯದ ಬರ್ತ್ ಅನ್ನು ತೆರೆಯಬೇಕು. ಇದರಿಂದ ಉಳಿದ ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. ರಾತ್ರಿಯಲ್ಲಿ ಪ್ರಯಾಣಿಸುವಾಗ ಜೋರಾಗಿ ಸಂಗೀತ ಕೇಳಲು ಅಥವಾ ಜೋರಾಗಿ ಮಾತನಾಡಿ ಬೇರೆಯವರ ನಿದ್ದೆಗೆ ಅಡ್ಡಿಪಡಿಸುವಂತಿಲ್ಲ. ಹೀಗೆ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು.
* ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಬಹುದು:
ರೈಲ್ವೆ ನಿಯಮದ ಪ್ರಕಾರ, ಟಿಕೆಟ್ ಖರೀದಿಸಲು ನಿಮಗೆ ಸಮಯವಿಲ್ಲದಿದ್ದರೆ, ನೀವು ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿಸುವ ಮೂಲಕ ಮಾತ್ರ ರೈಲು ಹತ್ತಬಹುದು. ಆದರೆ ಮುಂದಿನ ನಿಮ್ಮ ಬೋರ್ಡಿಂಗ್ ನಿಲ್ದಾಣದಿಂದ ತಲುಪುವಸ್ಥಾನಕ್ಕೆ ನೀವು ರೈಲು ಟಿಕೆಟ್ ಪಡೆದು ಹೋಗಬೇಕಾಗುತ್ತದೆ. ಇದನ್ನು TTE ಯಿಂದಲೂ ನೀವು ಪಡೆಯಬಹುದು.
ಇದನ್ನೂ ಓದಿ: Free Ration: ರೇಷನ್ ಕಾರ್ಡ್’ದಾರರಿಗೆ ಇನ್ಮುಂದೆ ಕಾಂಡೋಮ್ ಸೇರಿ ಈ 46 ವಸ್ತು ಉಚಿತ !