Illigal Relationship: ಪರ ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ ಪತ್ನಿ; ಮುಂದೆ ಆಗಿದ್ದೇನು?

Share the Article

Illigal Relationship: ಇತ್ತೀಚೆಗೆ ಅಲ್ಲಲ್ಲಿ ಅನೈತಿಕ ಸಂಬಂಧದ ಸುದ್ದಿಗಳು ಬೆಳಕಿಗೆ ಬರುವುದು ವರದಿಯಾಗುತ್ತಲೇ ಇರುತ್ತದೆ. ಆದರೆ ವಿದ್ಯಾವಂತ ಜನರೇ ಈ ಸುಳಿಯಲ್ಲಿ ಬಿದ್ದರೇ ಏನಾಗುತ್ತೇ? ಇಲ್ಲಿ ನಡೆದಿರುವುದು ಕೂಡಾ ಅಂತಹುದೇ ಒಂದು ಘಟನೆ.

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಪತಿರಾಯನೊಬ್ಬ ತನ್ನ ಪತ್ನಿಯನ್ನು ಬೇರೆ ವ್ಯಕ್ತಿಗಳೊಂದಿಗೆ ಸರಸವಾಡುತ್ತಿರುವುದನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿರುವ ಘಟನೆಯೊಂದು ನಡೆದಿದೆ. ಶುಕ್ರವಾರ ರಾತ್ರಿ ಹೋಟೆಲ್ ಕೊಠಡಿಯಲ್ಲಿ ಅಪರಿಚಿತರೊಂದಿಗೆ ಸರಸವಾಡುತ್ತಿದ್ದ ತನ್ನ ವೈದ್ಯೆ ಪತ್ನಿಯನ್ನು ವೈದ್ಯ  ಪತಿ ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾನೆ. ಸದ್ಯ ಈ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಬೆಳಕಿಗೆ ಬಂದಿದೆ. ಪತಿಯ ಕೈಗೆ ಸಿಕ್ಕಿ ಬಿದ್ದ ನಂತರ ಪತ್ನಿ ತನ್ನ ಪತಿ ಜೊತೆ ತೀರ ವಾಗ್ವಾದ ಮಾಡಿದ್ದು, ತೀವ್ರ ಸ್ವರೂಪ ಪಡೆಯಿತು. ನಂತರ ಇಬ್ಬರೂ ಹಲ್ಲೆಗೆ ಮುಂದಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೈದ್ಯ ದಂಪತಿಗಳಿಬ್ಬರು ತಮ್ಮ ಕೌಟುಂಬಿಕ(Family issues) ಕಲಹಗಳಿಂದಾಗಿ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ವೈದ್ಯ ದಂಪತಿ ಜಗಳವಾಡುತ್ತಿದ್ದರು. ಪತ್ನಿಯ ಚಲನವಲನದಿಂದ ಅನುಮಾನಗೊಂಡ ಪತಿ ಆಕೆಯನ್ನು ಹಿಂಬಾಲಿಸಿದ. ಗುರುವಾರ ಆಕೆ ಹೋಟೆಲ್ ರೂಮಿನಲ್ಲಿ(Hotel Room)ಇದ್ದಾಳೆ ಎಂಬ ಮಾಹಿತಿ ಮೇರೆಗೆ ಪತಿ ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೆಲ್ ಕೋಣೆಗೆ ನುಗ್ಗಿದ್ದಾನೆ. ಪತ್ನಿ ಇಬ್ಬರು ಪುರುಷರೊಂದಿಗೆ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಸಿಕ್ಕಿಬಿದ್ದ ಹೆಂಡತಿ ಮತ್ತು ಇಬ್ಬರು ವ್ಯಕ್ತಿಗಳ ಮೇಲೆ ಪತಿ ಮತ್ತು ಸಂಬಂಧಿಕರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: Akshaya Trithiya: ಅಕ್ಷಯ ತೃತೀಯ ಸಂಭ್ರಮ – ರಾಜ್ಯದಲ್ಲಿ ಒಂದೇ ದಿನ 2,050 ಕೆಜಿ ಚಿನ್ನ, 1,900 ಕೆಜಿ ಬೆಳ್ಳಿ ಮಾರಾಟ !!

ಮಾಹಿತಿ ಪಡೆದ ಪೊಲೀಸರು(Police)ಮಹಿಳೆ ಮತ್ತು ಗಾಜಿಯಾಬಾದ್ ಮತ್ತು ಬುಲಂದ್‌ಶಹರ್‌ನ ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ ಪತಿ ಪತ್ನಿ ಹಾಗೂ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಇದುವರೆಗೂ ಪತಿ ವಿರುದ್ಧ ಮಹಿಳೆ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು(police)ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರೇಟಾ ಬದಲು ವ್ಯಾಗನ್-ಆರ್ ಕಾರು ಗಿಫ್ಟ್ ಕೊಟ್ಟ ಮಾವ; ಮದುವೆಯೇ ರದ್ದು ಮಾಡಿದ ವರ !!

Leave A Reply