Home Entertainment Actress Jyoti Rai: ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಟಿ ಜ್ಯೋತಿ ರೈ ಆರ್ಥಿಕ ಸಹಾಯ

Actress Jyoti Rai: ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಟಿ ಜ್ಯೋತಿ ರೈ ಆರ್ಥಿಕ ಸಹಾಯ

Actress Jyoti Rai

Hindu neighbor gifts plot of land

Hindu neighbour gifts land to Muslim journalist

Actress Jyoti Rai: ಜ್ಯೋತಿ ರೈ ಅವರು ಇತ್ತೀಚೆಗೆ ಅಶ್ಲೀಲ ವೀಡಿಯೊಂದರ ಕುರಿತು ಬಹಳ ನೊಂದುಕೊಂಡಿದ್ದರು.  ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋದಿಂದ ತೀವ್ರ ಮನನೊಂದಿರುವ ನಟಿ ಇದೀಗ ಈ ಬೇಸರದ ನಡುವೆ ಕಲಾವಿದರೊಬ್ಬರಿಗೆ ಸಹಾಯ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kodagu: SSLC ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ; ಆರೋಪಿ ಬಂಧನ

ಇತ್ತೀಚೆಗಷ್ಟೇ ತೆಲುಗಿನ ಜನಪ್ರಿಯ ಜನಪದ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ಅವರು ತಮ್ಮ ಜೀವನ ನಿರ್ವಹಣೆಗೆಂದು ಗಾರೆ ಕೆಲಸ ಮಾಡುತಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿತ್ತು. ಇದೀಗ ಅವರ ಪರಿಸ್ಥಿತಿ ನೋಡಿ ನಟಿ ಜ್ಯೋತಿ ರೈ ಅವರು ಮೊಗಿಲಯ್ಯ ಅವರ ನೆರವಿಗೆ ಬಂದಿದ್ದಾರೆ.

ಪದ್ಮಶ್ರೀ ಮೊಗಿಲಯ್ಯ ಅವರನ್ನು ಭೇಟಿಯಾದ ಜ್ಯೋತಿ ರೈ ಅವರು ಅವರಿಗೆ 50000 ಆರ್ಥಿಕ ಸಹಾಯ ನೀಡುರುವುದಾಗಿ ಬರೆದುಕೊಂಡಿದ್ದಾರೆ. ಸುದ್ದಿಗೋಷ್ಠಿಯಿಂದಾಗಿ ನನಗೆ ಮೊಗಿಲಯ್ಯ ಅವರ ಕಷ್ಟ ತಿಳಿಯಿತು. ಅವರ ಕಷ್ಟ ಕೇಳಿದಾಗ ನನ್ನೊಳಗೆ ಬೆಳಗಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರಣೆ ಮಾಡಿತು ಎಂದು ಬರೆದಿದ್ದು, ಮುಂದುವರಿದು ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ಮಾಡೋಣ ಎಂದು ಬರೆದಿದ್ದಾರೆ.

ಇದನ್ನೂ ಓದಿ: Jyothi Rai: ಕಿರುತೆರೆ ನಟಿ ಜ್ಯೋತಿ ರೈ ಖಾಸಗಿ ವಿಡಿಯೋ ಲೀಕ್ : ವಿಡಿಯೋ ನೋಡಿ ಬೆಚ್ಚಿ ಬಿದ್ದ ನಟಿ : ಸೈಬರ್ ಪೋಲಿಸರಿಗೆ ದೂರು