Praveen Nettaru: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೆರೆ

Share the Article

Praveen Nettaru: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೆರೆಯಾಗಿರುವ ಕುರಿತು ವರದಿಯಾಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಶಾಂತಿನಗರದ ಉಮಾರ್‌ ಮಗ ಮುಸ್ತಾಫ ಪೈಚಾರ್‌ @ಮಹಮ್ಮದ್‌ ಮುಸ್ತಾಫ ಎಸ್‌ (43) ಎಂಬಾತನನ್ನು ಇಂದು ಬೆಳಗ್ಗೆ 7 ಗಂಟೆಗೆ ಬಂಧನ ಮಾಡಲಾಗಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: Hypothyroidism: ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದೀರಾ? : ಅವುಗಳನ್ನು ನಿರ್ಲಕ್ಷಿಸಬೇಡಿ ತಕ್ಷಣ ಥೈರಾಯ್ಡ್ ಪರೀಕ್ಷೆಗಳನ್ನು ಮಾಡಿಸಿ

ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್‌ಐಎ ಇನ್ಸ್‌ಪೆಕ್ಟರ್‌ ಷಣ್ಮುಂಗಮ್‌ ನೇತೃತ್ವದ ತಂಡ ಬಂಧನ ಮಾಡಿದೆ.

ಇದನ್ನೂ ಓದಿ: Neeraj Chopra: ಮೂರು ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ : ನ್ಯಾಷನಲ್ ಫೆಡರೇಷನ್ ಕಪ್’ನಲ್ಲಿ ಮಿಂಚಲಿರುವ ನೀರಜ್ ಚೋಪ್ರಾ

ಬೆಂಗಳೂರು ಎನ್‌ಐಎ ಕಚೇರಿಗೆ ಆರೋಪಿಯನ್ನು ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.

ಜುಲೈ 26, 2022 ರಂದು ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಆರೋಪಿ ಮುಸ್ತಫಾ ಪೈಚಾರಿಗೆ ಎನ್‌ಐಎ ಲುಕ್‌ಔಟ್‌ ನೋಟಿಸ್‌ ಈಗಾಗಲೇ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

Leave A Reply