Husband Test: ಸಾಮಾಜಿಕ ಮಾಧ್ಯಮದಲ್ಲಿ ‘ಪತಿ ಪರೀಕ್ಷೆ’ ವೈರಲ್, ಏನಿದು ಹಸ್ಬೆಂಡ್‌ ಟೆಸ್ಟ್‌ ?

Husband Test: ಸೋಷಿಯಲ್‌ ಮೀಡಿಯಾದಲ್ಲಿ ದಿನಕ್ಕೊಂದು ರೀತಿಯ ಹೊಸ ಟ್ರೆಂಡ್‌ ಆರಂಭವಾಗುತ್ತ ಇರುತ್ತದೆ. ಈಗ ಆಯಾ ಲಿಸ್ಟಿಗೆ ಹೊಸ ಸೇರ್ಪಡೆ ‘ಹಸ್ಬೆಂಡ್‌ ಟೆಸ್ಟ್’ (Husband Test). ಹೆಣ್ಮಕ್ಕಳು ತಮ್ಮ ಬಾಯ್‌ಫ್ರೆಂಡ್‌ ನ್ನು ಪರೀಕ್ಷೆ ಮಾಡಲು ಈ ಹೊಸ ಚಾಲೆಂಜ್‌ ಶುರು ಮಾಡಿದ್ದಾರೆ. ತಮ್ಮ ರಿಲೇಶನ್‌ಶಿಪ್‌ ಎಷ್ಟು ಗಟ್ಟಿಯಿದೆ ಎಂದು ಪತ್ತೆ ಮಾಡುವ ಟೆಸ್ಟ್ ಇದು. ಜತೆಗೆ ತಮ್ಮ ಬಾಯ್‌ಫ್ರೆಂಡ್‌ ತಮ್ಮೊಂದಿಗಿನ ಸಂಬಂಧದಲ್ಲಿ ಎಷ್ಟು ಗಾಢವಾಗಿ ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಹುಡುಗಿಯರು ಮತ್ತು ಮಹಿಳೆಯರು ಹೂಡಿದ ಹೊಸ ತಂತ್ರ – ಅದುವೇ ಹಸ್ಬೆಂಡ್ ಟೆಸ್ಟ್ !ಕೆ

ಲಸವಿಲ್ಲದ ಹುಡುಗಿಯರು ಸದಾ ಒಂದಲ್ಲೊಂದು ‘ ಕೆಲಸ’ ಹುಡುಕುವ ಹುಡುಗರ ಬಗ್ಗೆ ತಿಳಿದುಕೊಳ್ಳಲು ತಂತ್ರ ಒಂದನ್ನು ರೆಡಿಮಾಡಿದ್ದಾರೆ. ತಮ್ಮಿಬ್ಬರ ಸಂಬಂಧಗಳ ಬಗ್ಗೆ ತಮ್ಮ ಬಾಯ್‌ಫ್ರೆಂಡ್‌ಗಿರುವ ಬದ್ಧತೆಯನ್ನು ಪರೀಕ್ಷಿಸುವ ಹೊಸ ಸವಾಲು ಇದಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ರೂಪ ಪಡೆದುಕೊಳ್ಳುತ್ತಿದೆ. ಈಗಾಗಾಲೇ ಹಲವು ನೀರೆಯರು ‘ಹಸ್ಬೆಂಡ್ ಟೆಸ್ಟ್’ ಮಾಡಿ ತಮ್ಮ ಬಾಯ್‌ಫ್ರೆಂಡ್‌ ಕುರಿತು ತಿಳಿದುಕೊಂಡಿದ್ದಾರೆ. ತಮ್ಮ ಜೊತೆಗಾರನ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಕುತೂಹಲದಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾರೆ.

ವಿಶೇಷವಾಗಿ ಭಾರತದಲ್ಲಿ ಬ್ಯಾನ್‌ ಆಗಿರುವ ಟಿಕ್‌ಟಾಕ್‌ನಲ್ಲಿ ಇಂಥಾ ಪೋಸ್ಟ್ ಟ್ರೆಂಡ್‌ ಆಗುತ್ತಿದೆ. ಹಾಗಿದ್ದರೆ ಈ ಹೊಸ ಟ್ರೆಂಡ್ ಏನು? ಇದಕ್ಕೆ ‘ಹಸ್ಬೆಂಡ್ ಟೆಸ್ಟ್’ ಎಂಬ ಹೆಸರೇಕೆ? ಇದನ್ನೆಲ್ಲಾ ತಿಳಿದುಕೊಳ್ಳುವ ಕುತೂಹಲ ನಿಮಗಿದೆ ಎಂದೇ ಈ ಪೋಸ್ಟ್.

ಸತಿ ಪರೀಕ್ಷೆಯಲ್ಲ, ಇದು ಪತಿ ಪರೀಕ್ಷೆ ( Husband Test):
ಈ ಟ್ರೆಂಡ್‌ನ ಉದ್ದೇಶ ಸಿಂಪಲ್: ಮಹಿಳೆ ತಮ್ಮ ಬಾಯ್‌ ಫ್ರೆಂಡ್‌ ಜೊತೆಗೆ ಸಂಭಾಷಣೆ ನಡೆಸುವ ಸಮಯದಲ್ಲಿ ಆತನನ್ನು ‘ಗಂಡ’ ಅಥವಾ ಹಸ್ಬೆಂಡ್‌ ಎಂದು ಕರೆಯುತ್ತಾಳೆ. ಅದಕ್ಕೆ ಆಕೆಯ ಭಾವಿ ಸಂಗಾತಿ ಅಥವಾ ಬಾಯ್‌ಫ್ರೆಂಡ್‌ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದೇ ಅವರ ಉದ್ಧೇಶ. ನಂತರ ಈ ಕ್ಷಣದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು.

ಒಂದು ವೇಳೆ ಬಾಯ್‌ಫ್ರೆಂಡ್‌ ನ್ನು ‘ಗಂಡ’ ಎಂದು ಕರೆದ ನಂತರವೂ ಆತ ನಗುತ್ತಾ ಪೂರಕವಾಗಿ ಪ್ರತಿಕ್ರಿಯಿಸಿದರೆ, ಆ ಹುಡುಗ ಹಸ್ಬೆಂಡ್ ಟೆಸ್ಟಿನಲ್ಲಿ ಪಾಸಾದಂತೆ. ಆಗ ಆಯಾ ಸಂಬಂಧದ ಮೇಲೆ ಆತನಿಗಿರುವ ಬದ್ಧತೆ ಹುಡುಗಿಗೆ ಮನದಟ್ಟಾಗುತ್ತದೆ. ಒಂದು ವೇಳೆ ಆತನು ತನ್ನ ಗರ್ಲ್ ಫ್ರೆಂಡ್ ನ ಮಾತನ್ನು ತಿದ್ದಿ, ‘ ನಾ ನಿನ್ನ ಗಂಡ ಅಲ್ಲ ಮಾರಾಯ್ತಿ ‘ ಎನ್ನುವ ಮೂಲಕ ನಕಾರಾತ್ಮಕ ಸಿಗ್ನಲ್ ಕೊಟ್ಟರೆ ಆಗ ಆತ ದೀರ್ಘಾವಧಿಯ ಸಂಬಂಧದಲ್ಲಿ ಉಳಿಯಲ್ಲ ಎಂದು ಹುಡುಗಿಗೆ ಖಾತರಿ ಆಗುತ್ತದೆ.

‘ಪತಿ ಪರೀಕ್ಷೆ’ ಟ್ರೆಂಡ್ ಶುರುಮಾಡಿದ ಪತಿವ್ರತೆ ಯಾರು ?
ಇದೆಲ್ಲಾ ಶುರುವಾದದ್ದು ಕೆಂಜಿ ಗ್ರೀನ್ ಎಂಬ ಮಹಿಳೆಯಿಂದ. ಆಕೆ ತನ್ನ ಗೆಳೆಯನ ಕುರಿತು ತಿಳಿದುಕೊಳ್ಳಲು ಆತನಿಗೆ ವಿಡಿಯೋ ಕಾಲ್ ಮಾಡುತ್ತಾಳೆ. ನಂತರ ಆತನ ಪ್ರತಿಕ್ರಿಯೆಯನ್ನು ರೆಕಾರ್ಡ್ ಮಾಡಿಕೊಂಡು ಆ ವಿಡಿಯೋವನ್ನು ಪೋಸ್ಟ್ ಮಾಡುವುದರೊಂದಿಗೆ ‘ಹಸ್ಬೆಂಡ್ ಟೆಸ್ಟ್’ ಟ್ರೆಂಡ್ ಮೊದಲಲ್ಲಿ ಶುರು ಆಯಿತು. ಆ ವಿಡಿಯೋವನ್ನು ನೋಡಿದ ನಂತರ ಸಮೂಹ ಸನ್ನಿಯ ಥರ ಇತರ ಮಹಿಳೆಯರಿಗೆ ಅದೇ ಹುಚ್ಚು ಹಿಡಿಯಿತು!! ಆಕೆ ತನ್ನ ಬಾಯ್‌ಫ್ರೆಂಡ್‌ ಗೆ ವಿಡಿಯೋ ಕರೆ ಮಾಡಿ ‘ಹಾಯ್ ಗಂಡ’ (ಹಸ್ಬೆಂಡ್‌) ಎಂದಾಗ, ಆತ “ನಾನು ನಿನ್ನ ಗಂಡನಲ್ಲ” ಎಂದು ಪ್ರತಿಕ್ರಿಯಿಸುತ್ತಾನೆ.

ಜತೆಗೆ ಆ ವಿಡಿಯೋ ಕಾಲ್‌’ನ್ನು ಆಫ್ ಮಾಡುತ್ತಾನೆ. ಹಸ್ಬೆಂಡ್ ಲೇಟೆಸ್ಟ್ ಮಾಡಿದ ಕೆಂಜಿ ಗ್ರೀನ್ ತನ್ನ ಬಾಯ್‌ಫ್ರೆಂಡ್‌ಗೆ ಆ ರಿಲೇಶನ್‌ಶಿಪ್‌ ಮೇಲೆ ಬದ್ಧತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ಆಕೆ ತುಂಬಾ ಬೇಸರ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಅನೇಕ ಜನರು ಟಿಕ್‌ಟಾಕ್‌ನಲ್ಲಿ ಇದೇ ರೀತಿಯ ವಿಡಿಯೊಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ‘ಹಸ್ಬೆಂಡ್ ಟೆಸ್ಟ್’ ಟ್ರೆಂಡ್‌ ಸೆಟ್ ಸೆಟ್ ಮಾಡುತ್ತಿದ್ದಾರೆ. ಬಾಯ್ ಫ್ರೆಂಡ್ಗಳೇ ಜಾಗ್ರತೆ, ಯಾವುದೇ ಕ್ಷಣದಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಹಸ್ಬೆಂಡ್ ಟೆಸ್ಟ್ ಶುರು ಮಾಡಿಯಾಳು, ಹುಷಾರ್ !

Leave A Reply

Your email address will not be published.