Home News Prajwal Revanna Case: ‘ ಟ್ರಾನ್ಸ್‌ಫರ್‌ಗಾಗಿ ಕರೆಸಿ ಮುಕ್ಕಿ ತಿಂದುಬಿಟ್ಟ’ – ಪ್ರಜ್ವಲ್ ವಿರುದ್ಧ ಮಹಿಳಾ...

Prajwal Revanna Case: ‘ ಟ್ರಾನ್ಸ್‌ಫರ್‌ಗಾಗಿ ಕರೆಸಿ ಮುಕ್ಕಿ ತಿಂದುಬಿಟ್ಟ’ – ಪ್ರಜ್ವಲ್ ವಿರುದ್ಧ ಮಹಿಳಾ ಅಧಿಕಾರಿ ದೂರು !!

Prajwal Revanna

Hindu neighbor gifts plot of land

Hindu neighbour gifts land to Muslim journalist

Prajwal Revanna Case: ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ವಿಚಾರದ್ದೇ(Prajwal Revanna Case) ಸುದ್ದಿ. ಯಾವ ಮಾಧ್ಯಮಗಳಲ್ಲಿ ನೋಡಿದರೂ ಅದೇ ವಿಚಾರ ಪ್ರಸಾರ. ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಹಿರಂಗ. ಜನರಿಗೆ ಶಾಕ್ ಮೇಲೆ ಶಾಕ್. ಇದೀಗ ವಿಡಿಯೋ ಒಂದರಲ್ಲಿದ್ದ ಮಹಿಳಾ ಅಧಿಕಾರಿ ತನ್ನ ಮೇಲಾದ ದೌರ್ಜನ್ಯಗಳಬಗ್ಗೆ ಬಹಿರಂಗಪಡಿಸಿದ್ದು, ದೂರು ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Importance of Northeast direction: ಈಶಾನ್ಯ ದಿಕ್ಕಲ್ಲೇ ಪೂಜೆ ಮಾಡಲಾಗುತ್ತದೆ ಯಾಕೆ ಗೊತ್ತಾ ?

ಹೌದು, ಪ್ರಜ್ವಲ್ ಪ್ರಕರಣದಲ್ಲಿ ವಿಡಿಯೋದಲ್ಲಿ (obscene video)ದ್ದ ಸಂತ್ರಸ್ತೆಯರು ಮುಂದೆ ಬರಲು ಮೊದಲು ಹಿಂದೇಟು ಹಾಕುತ್ತಿದ್ದಲು. ಆದರಿಮೀಗ ಕೊನೆಗೂ ಕೆಲವು ಮಹಿಳಾ ಸರ್ಕಾರಿ ಅಧಿಕಾರಿಗಳು ಮೌನ ಮುರಿದಿದ್ದು, ಎಸ್‌ಐಟಿಗೆ (SIT) ದೂರು ಕೊಡಲು ಮುಂದೆ ಬಂದಿದ್ದಾರೆ.

ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಹೇಳಿದ 15 ಸುಳ್ಳುಗಳ ಪಟ್ಟಿ ಬಿಡುಗಡೆ ಮಾಡಿದ ಸಿದ್ದರಾಮಯ್ಯ !!

ಸದ್ಯ ಇಬ್ಬರು ಸರ್ಕಾರಿ ಇಲಾಖೆಗಳ ಮಹಿಳಾ ಅಧಿಕಾರಿಗಳಿಂದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ‘ಟ್ರಾನ್ಸ್‌ಫರ್ ಲೆಟರ್ ಕೊಡುವುದಾಗಿ ಕರೆಸಿಕೊಂಡು ಪ್ರಜ್ವಲ್‌ ನಮಗೇ ಲೈಂಗಿಕ ಕಿರುಕುಳ ನೀಡಿದ್ದರು. ಟ್ರಾನ್ಸ್‌ಫರ್ ಕೊಡಿಸುವುದಾಗಿ ನಮ್ಮನ್ನು ಮುಕ್ಕಿ ತಿಂದುಬಿಟ್ಟರು. ಅದನ್ನು ವೀಡಿಯೊ ಮಾಡಿಟ್ಟುಕೊಂಡು ಪದೇ ಪದೆ ಕರೆಸಿ ಬಟ್ಟೆಬಿಚ್ಚುವಂತೆ ಒತ್ತಾಯ ಮಾಡಿದ್ದರು. ವೀಡಿಯೊ ಇಟ್ಟುಕೊಂಡು ವೀಡಿಯೊ ಕಾಲ್ ಮಾಡಿ ಬಟ್ಟೆ ಬಿಚ್ಚಿ ತೋರಿಸುವಂತೆ ಬೆದರಿಕೆ ಹಾಕುತ್ತಿದ್ದರು” ಎಂದು ಹೇಳಿಕೆ ನೀಡಿದ್ದಾರೆ. ಇಬ್ಬರು ಸರ್ಕಾರಿ ಅಧಿಕಾರಿಗಳ ಹೇಳಿಕೆಯ ಮೇಲೆ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.