Bengaluru: ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ, ಲಕ್ಷಾಂತರ ಮೌಲ್ಯದ ಚಿನ್ನ ಹಣ ಕಳವು, ಬಂಧನ
Bengaluru: ಅಕ್ಕನ ಮನೆಯಿಂದಲೇ ನಗದು ಸೇರಿ 65 ಲಕ್ಷದ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಹುಡುಗಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಚ್ಚರಿ ಏನೆಂದರೆ ಸ್ವತಃ ಸ್ವಂತ ತಂಗಿಯೇ ಕಳ್ಳತನ ಮಾಡಿದ್ದು ತಂಗಿ- ಕಳ್ಳಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ಲಗ್ಗೆರೆಯ ಉಮಾ ಬಂಧಿತ ಆರೋಪಿಯಾಗಿದ್ದು, ಆಕೆಯಿಂದ ನಗದು ಸೇರಿ 51.90 ಲಕ್ಷ ಮೌಲ್ಯದ 46 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: H D Revanna: ಎಚ್ ಡಿ ರೇವಣ್ಣ ಇದೀಗ ‘ಕೈದಿ ನಂಬರ್ 4567’ !!
ಬೆಂಗಳೂರಿನ ನಾಗದೇವನಹಳ್ಳಿಯ ಆರ್.ಆರ್ ಲೇಔಟ್ನ ಸಿಮೆಂಟ್- ಕಬ್ಬಿಣದ ವ್ಯಾಪಾರವನ್ನು ಮಾಡಿಕೊಂಡಿದ್ದ ಕುನ್ನೆಗೌಡರು. ಕಳೆದ ಏ.22 ರಂದು ಬೆಳಿಗ್ಗೆ ಅವರ ಕುಟುಂಬ ಸಮೇತರಾಗಿ ಅವರ ಊರಿನಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವರ ಹಬ್ಬದ ಪ್ರಯುಕ್ತ ಊರಿಗೆ ಹೋಗಿರುತ್ತಾರೆ. ಅವರು ಊರಿಗೆ ಹೋಗುವ ಮುನ್ನ ಪತ್ನಿಯ ತಂಗಿ ಸುಮಾಗೆ ಮನೆಯ ಕೀಯನ್ನು ಕೊಟ್ಟು ರಾತ್ರಿ ಮಲಗಲು ತಿಳಿಸಿದ್ದರು. ಆಕೆ
ಅಂದಿನಿಂದ ಕುನ್ನೇಗೌಡರ ಮನೆಯಲ್ಲಿಯೇ ಮಲಗುತ್ತಿದ್ದು 24 ರಂದು ರಾತ್ರಿ ಸುಮಾರು 10.30 ಗಂಟೆ ಸುಮಾರಿಗೆ ಮಲಗಲು ಹೋದಾಗ ಬೀರುವಿನ ಬಾಗಿಲುಗಳನ್ನು ಯಾರೋ ತೆರೆದು ಕಳ್ಳತನ ಮಾಡಿರುತ್ತಾರೆ ಎಂದು ಕುನ್ನೇಗೌಡರಿಗೆ ತಿಳಿಸಿದ್ದಳು.
ಕೂಡಲೇ ಕುನ್ನೇಗೌಡ ತನ್ನ ಸಂಸಾರದೊಂದಿಗೆ ಅದೇ ದಿನ ರಾತ್ರೋರಾತ್ರಿ ಹೊರಟು ಬಂದಿದ್ದರು. ಆ ವೇಳೆ ಮನೆಯಲ್ಲಿನ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿನಿಂದ ಸುಮಾರು 182 ಗ್ರಾಂ ಚಿನ್ನದ ನಾಣ್ಯಗಳನ್ನು ಹಾಗೂ ಮಂಚದ ಕೆಳಗಿಟ್ಟಿದ್ದ 52 ಲಕ್ಷ ನಗದು ಕಳ್ಳತನವಾಗಿರುವುದು ಕಂಡುಬಂದಿತ್ತು. ತಕ್ಷಣವೇ ಕೆಂಗೇರಿ ಠಾಣೆಗೆ ಬಂದು ನಗದು, ಚಿನ್ನದ ನಾಣ್ಯಗಳು ಸೇರಿ 65 ಲಕ್ಷ ಮೌಲ್ಯದ ನಾಗ ನಾಣ್ಯಗಳು ಕಳುವಾಗಿರುತ್ತದೆಂದು ದೂರನ್ನು ಸಲ್ಲಿಸಿದ್ದರು.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಕುನ್ನೇಗೌಡ ಅವರ ನಾದಿನಿ (ಪತ್ನಿಯ ತಂಗಿ) ಮೇಲೆ ಅನುಮಾನವನ್ನು ಹೆಚ್ಚಿಸಿದೆ.
ಕೂಡಲೇ ಕುನ್ನೆಗೌಡರ ಪತ್ನಿಯ ತಂಗಿಯನ್ನು ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದಾಗ, ಅಕೆ ಏ 22 ರಂದು ಅಕ್ಕನ ಮನೆಗೆ ಬಂದು, ತನ್ನಲಿರುವ ನಕಲಿ ಕೀ ಬಳಸಿ ಮನೆಯನ್ನು ಪ್ರವೇಶಿಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇಟ್ಟಿದ್ದ 52 ಲಕ್ಷ ನಗದು ಹಣವನ್ನು ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾಳೆ.
ನಂತರ ಪೊಲೀಸರು ಅರೋಪಿತಳು ವಾಸವಿರುವ ಮನೆಯಿಂದ 5 ಲಕ್ಷ ನಗದು ಹಣ ಮತ್ತು 30 ಚಿನ್ನದ ನಾಣ್ಯಗಳನ್ನು ಮತ್ತು ಅಕೆ ಕೆಲಸ ಮಾಡುವ ಆಟೋ ಕನ್ಸೆಲ್ಟೆಂಟ್ ಮಾಲೀಕರಿಗೆ ಆಕೆ ನೀಡಿದ್ದ 16 ಚಿನ್ನದ ನಾಣ್ಯಗಳು, ನಗದು 46.90 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಗಿರೀಶ್ ಎಸ್ ಮಾರ್ಗದರ್ಶನದಲ್ಲಿ ಕೆಂಗೇರಿ ಪೊಲೀಸ್ ಇನ್ಸ್ ಪೆಕ್ಟರ್ ಕೊಟ್ರೇಶಿ ಬಿ.ಎಂ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದಾರೆ.