Home Crime Student Ragging: ಹಿರಿಯ ವಿದ್ಯಾರ್ಥಿಗಳಿಂದ ಖಾಸಗಿ ಅಂಗವನ್ನೂ ಬಿಡದೆ ಪೈಶಾಚಿಕ ಕೃತ್ಯ! ವಿಡಿಯೋ ವೈರಲ್

Student Ragging: ಹಿರಿಯ ವಿದ್ಯಾರ್ಥಿಗಳಿಂದ ಖಾಸಗಿ ಅಂಗವನ್ನೂ ಬಿಡದೆ ಪೈಶಾಚಿಕ ಕೃತ್ಯ! ವಿಡಿಯೋ ವೈರಲ್

Student Ragging

Hindu neighbor gifts plot of land

Hindu neighbour gifts land to Muslim journalist

Student Ragging: ಹದಿಹರೆಯದ ವಿದ್ಯಾರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳಿಗೆ ಸೇರಲು ಇಟಾವಾದಿಂದ ಕಾನ್ಪುರಕ್ಕೆ ಬಂದಿದ್ದು ಆ ಸಂದರ್ಭ ಹಿರಿಯ ವಿದ್ಯಾರ್ಥಿಗಳಿಂದ (Student) ಹಣ ಸಾಲ ಪಡೆದು ಹಣ ಹಿಂತಿರುಗಿಸದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಮನಬಂದಂತೆ ವರ್ತಿಸಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಿರಿಯ ವಿದ್ಯಾರ್ಥಿಗಳು ಸೇರಿ ಚಿತ್ರಹಿಂಸೆ ನೀಡಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: AstraZeneca COVID-19 Vaccine: ಕೊರೋನಾ ಲಸಿಕೆಯನ್ನು ವಿಶ್ವಾದ್ಯಂತ ಮಾರಾಟ ಮಾಡಲಾಗುವುದಿಲ್ಲ- ಅಸ್ಟ್ರಾಜೆನೆಕಾ ಕಂಪನಿ

ಪೊಲೀಸ್ ಮಾಹಿತಿ ಪ್ರಕಾರ, ಹದಿಹರೆಯದ ವಿದ್ಯಾರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳಿಗೆ ಸೇರಲು ಇಟಾವಾದಿಂದ ಕಾನ್ಪುರಕ್ಕೆ ಬಂದಿದ್ದು, ಕೋಚಿಂಗ್ ಸೆಂಟರ್ ನಲ್ಲಿದ್ದ ಕೆಲ ಹಿರಿಯ ವಿದ್ಯಾರ್ಥಿಗಳು ಆನ್ ಲೈನ್ ಬೆಟ್ಟಿಂಗ್ ಆಟ ಆಡಲು 20 ಸಾವಿರ ರೂ.ನೀಡಿದ್ದಾರೆ. ವಿದ್ಯಾರ್ಥಿ ಹಣ ಕಳೆದುಕೊಂಡ ನಂತರ ಹಿರಿಯ ವಿದ್ಯಾರ್ಥಿಗಳು ದುಪ್ಪಟ್ಟು ಹಣ ಅಂದರೆ 2 ಲಕ್ಷ ರೂ. ಕೊಡುವಂತೆ ಪೀಡಿಸಿದ್ದು, ವಿದ್ಯಾರ್ಥಿ ಹಣ ಹಿಂತಿರುಗಿಸಲು ಹಿಂಜರಿದಾಗ ಕೊಠಡಿಯೊಳಗೆ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ: Kerala West Nile Fever: ಕೇರಳದಲ್ಲಿ ಹೆಚ್ಚಿದ ವೆಸ್ಟ್‌ ನೈಲ್ ಜ್ವರ; ಇದು ಎಷ್ಟು ಅಪಾಯಕಾರಿ? ಬನ್ನಿ ತಿಳಿಯೋಣ

ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿದ್ದು, ವಿದ್ಯಾರ್ಥಿಯ ಖಾಸಗಿ ಅಂಗಕ್ಕೆ ಇಟ್ಟಿಗೆಯಿಂದ ಹೊಡೆಯುವುದು ಕಂಡುಬಂದಿದೆ.

ಹಲವು ದಿನಗಳ ಕಾಲ ಹಲ್ಲೆ (Student Ragging) ಮುಂದುವರಿದಿದ್ದು, ನಂತರ ವಿದ್ಯಾರ್ಥಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಇಟಾವಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಮೇ 4 ರಂದು ಕೃತ್ಯದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕಾನ್ಪುರ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿವ ತ್ರಿಪಾಠಿ, ತನಯ್ ಚೌರಾಸಿಯಾ, ಅಭಿಷೇಕ್ ಕುಮಾರ್ ವರ್ಮ, ಯೋಗೇಶ್ ವಿಶ್ವಕರ್ಮ, ಸಂಜೀವ್ ಕುಮಾರ್ ಯಾದವ್ ಮತ್ತು ಹರಗೋವಿಂದ್ ತಿವಾರಿ ಎಂದು ಗುರುತಿಸಲಾಗಿದೆ.