Prajwal Revanna: ಅಶ್ಲೀಲ ವೀಡಿಯೋ ಪ್ರಕರಣ: 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ

Prajwal Revanna: ಬಂಧನ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಇಂಟ‌ರ್ ಪೋಲ್ ಅಧಿಕಾರಿಗಳು 196 ರಾಷ್ಟ್ರಗಳಿಗೆ ಫೋಟೊ ಸಮೇತ ಮಾಹಿತಿ ರವಾನಿಸಿದ್ದಾರೆ.

ಇದನ್ನೂ ಓದಿ: Vehicle Rules : HSRP ಗಿಂತೂ ಬಹು ಮುಖ್ಯ ಈ ಒಂದು ದಾಖಲೆ – ಇಲ್ಲದಿದ್ರೆ ವಾಹನ ಸೀಜ್ !!

ಲೈಂಗಿಕ ದೌರ್ಜನ್ಯದ ವಿಡಿಯೊಗಳು ಬಹಿರಂಗವಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಅವರ ಪತ್ತೆಗೆ ಎಸ್‌ಐಟಿ ಅಧಿ ಕಾರಿಗಳು ಸಿಬಿಐ ಹಾಗೂ ಇಂಟರ್‌ಪೋಲ್‌ನ ನೆರವು ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಇಂಟರ್‌ಪೋಲ್, ಪ್ರಜ್ವಲ್‌ರ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್ ಚಲನವಲನದ ಹದ್ದಿನ ಕಣ್ಣಿಟ್ಟಿದೆ. ವಿಮಾನ ನಿಲ್ದಾಣ, ಬಂದರು, ಗಡಿ ಭಾಗಗಳೂ ಸೇರಿದಂತೆ ಎಲ್ಲಿಯಾದರೂ ಪ್ರಜ್ವಲ್ ಸುಳಿವು ಸಿಕ್ಕಿದರೆ ಆ ಬಗ್ಗೆ ಮಾಹಿತಿ ಕೊಡುವುದಾಗಿ ಇಂಟ‌ರ್ ಪೋಲ್ ಎಸ್‌ಐಟಿಗೆ ತಿಳಿಸಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Mangaluru: ವೈದ್ಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ ಅಪ್ರಾಪ್ತ: ಪ್ರಕರಣ ದಾಖಲು

ಜಾಗತಿಕ ಮಟ್ಟದ ಅತ್ಯುನ್ನತ ಭದ್ರತಾ ಸಂಸ್ಥೆಯಾದ ಇಂಟ‌ರ್ ಪೋಲ್, ಹಲವು ಬಣ್ಣಗಳ ನೋಟಿಸ್ ಹೊರಡಿಸುತ್ತದೆ. ಜಾಗತಿಕ ಮಹಾ ಉಗ್ರರು, ಕುಖ್ಯಾತ ಅಪರಾಧಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಹುಡುಕಿ ಬಂಧಿಸುವ ಕೆಲಸ ಮಾಡುವ ಇಂಟರ್ ಪೋಲ್, ಇದಕ್ಕಾಗಿ ತನ್ನದೇ ಆದ ವ್ಯವಸ್ಥೆ ಮಾಡಿಕೊಂಡಿದೆ. ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ವಿದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಬ್ಲೂಕಾರ್ನರ್ ನೋಟಿಸ್‌ಗೆ ಸೀಮಿತಗೊಳಿಸಿದೆ.

ಯಾವುದೇ ವ್ಯಕ್ತಿ ಯಾವ ದೇಶದ, ಯಾವ ಭಾಗದಲ್ಲಿದ್ದಾನೆ? ಆತ ನೆಲೆಸಿರುವ ಸ್ಥಳ ಸೇರಿದಂತೆ ಖಚಿತ ಮಹಿತಿಗಳನ್ನೂ ಇಂಟರ್‌ಪೋಲ್ ಕಲೆ ಹಾಕಬಹುದಾಗಿದೆ. ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳ ನೆರವಿನೊಂದಿಗೆ ಹುಡುಕಬಹುದಾಗಿದೆ.

Leave A Reply

Your email address will not be published.