Home Fashion Beauty Tips: ಎರಡೇ ಎರಡು ಹನಿ ಕ್ರೀಮ್‌ ಮುಖಕ್ಕೆ ಹಚ್ಚಿ ನೋಡಿ, ನಿಮ್ಮ ...

Beauty Tips: ಎರಡೇ ಎರಡು ಹನಿ ಕ್ರೀಮ್‌ ಮುಖಕ್ಕೆ ಹಚ್ಚಿ ನೋಡಿ, ನಿಮ್ಮ ತ್ವಚೆಯ ಕಾಂತಿ ಹೊಳೆಯುತ್ತೆ!

Beauty Tips

Hindu neighbor gifts plot of land

Hindu neighbour gifts land to Muslim journalist

Beauty Tips: ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ನಾನಾ ರೀತಿಯ ಪ್ರಯತ್ನ ಮಾಡಿ ನೀವು ಸೋತು ಹೋದಲ್ಲಿ ಈ ಒಂದು ವಿಧಾನ ಬಳಸಿ ನೋಡಿ. ಹೌದು, ಮುಖದ ಮೊಡವೆ ಮುಂತಾದ ದದ್ದು ಗಳ ನಿವಾರಣೆಗೆ ನೀವು ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ಫಳ ಫಳ ಹೊಳೆಯುತ್ತೆ.

ಇದನ್ನೂ ಓದಿ: Fish Eating: ಯಾವುದೇ ಕಾರಣಕ್ಕೂ ಈ ಮೀನು ತಿನ್ನಬೇಡಿ, ಕ್ಯಾನ್ಸರ್ ಬರುವ ಚಾನ್ಸಸ್ ಹೆಚ್ಚು!

ಮುಖ್ಯವಾಗಿ ನಾವು ಇಲ್ಲಿ ತಿಳಿಸುವ ಟಿಪ್ಸ್ (Beauty Tips) ನಿಮಗೆ ಯಾವುದೇ ಅಡ್ಡಪರಿಣಾಮಗಳು ಉಂಟಾಗಲು ಸಾಧ್ಯವಿಲ್ಲ. ಯಾಕಂದ್ರೆ ಚರ್ಮದ ಸಮಸ್ಯೆಗಳಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಮಾಡಿಸಿದ್ರೆ ಸಮಸ್ಯೆ ಉಲ್ಬಣವಾಗುವುದಿಲ್ಲ. ನಮ್ಮ ಮುಖ ಅಂದವಾಗಿ, ಕಾಂತಿಯುತವಾಗಿ ಇರಬೇಕು ಎಂದಲ್ಲಿ ಮನೆಯಲ್ಲೇ ಕ್ರೀಮ್‌ ತಯಾರಿಸಿ ಹಚ್ಚುವ ಮೂಲಕ ಅಂದ ಜೊತೆಗೆ ಚರ್ಮದ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು. ಇನ್ನು ಚರ್ಮದ ಕಾಂತಿ ಹೆಚ್ಚಬೇಕು ಅಂದ್ರೆ ಸಾಕಷ್ಟು ನೀರು ಕುಡಿಯಬೇಕು. ಚರ್ಮ ಹೈಡ್ರೇಟ್‌ ಆಗಿರುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಅದರೊಂದಿಗೆ ಮನೆಯಲ್ಲೇ ಈ ನೈಟ್‌ಕ್ರೀಮ್‌ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮೊಡವೆ, ಕಲೆ ಎಲ್ಲಾ ನಿವಾರಣೆಯಾಗಿ ತ್ವಚೆಯ ಅಂದ ಹೆಚ್ಚುತ್ತದೆ.

ಇದನ್ನೂ ಓದಿ: Cleaning Tips: ಟಿವಿ ಸ್ಕ್ರೀನ್​ ಕ್ಲೀನ್ ಮಾಡಲು ಇನ್ಮುಂದೆ ಚಿಂತೆ ಬಿಡಿ!ಸುಲಭವಾದ ಟಿಪ್ಸ್ ಇಲ್ಲಿದೆ!

ನೈಟ್‌ಕ್ರೀಮ್‌ ತಯಾರಿಸುವ ವಿಧಾನ

ಇಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ನೀವು ಬಾದಾಮಿ ಎಣ್ಣೆ – 1 ಚಮಚ, ತೆಂಗಿನೆಣ್ಣೆ(coconut Oil)- 2 ಚಮಚ, ಎಳ್ಳೆಣ್ಣೆ – 1 ಚಮಚ, ಅಲೋವೆರಾ ಜೆಲ್ – 2 ಚಮಚ, ಗ್ಲಿಸರಿನ್ – ಒಂದು ಚಮಚ ರೆಡಿ ಇಟ್ಟುಕೊಳ್ಳಿ. ನಂತರ ಇಲ್ಲಿ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ ನಲ್ಲಿ ಹಾಕಿ ಕ್ರೀಮ್‌ ರೂಪಕ್ಕೆ ಬರುವ ವರೆಗೆ ಮಿಶ್ರಣ ಮಾಡಿ ನಂತರ ಇದನ್ನು ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ಉಪಯೋಗಿಸಿ. ಒಂದುವೇಳೆ ನೀವು ತಾಜಾ ಅಲೋವೆರಾ ಜೆಲ್ ಅನ್ನು ಬಳಸಿದರೆ, ಅದನ್ನು ಫ್ರಿಜ್‌ನಲ್ಲಿಡಿ.

ಈ ನೈಟ್‌ಕ್ರೀಮ್‌ ಅನ್ನು ನೀವು 10 ದಿನಗಳವರೆಗೆ ಬಳಸಬಹುದು. ರಾತ್ರಿ ಮುಖವನ್ನು ಸ್ವಚ್ಛವಾಗಿ ತೊಳೆದ ನಂತರ ಮೆತ್ತಗೆ ಬಟ್ಟೆಯಲ್ಲಿ ಒರೆಸಿ ಎರಡು ಹನಿಗಳನ್ನು ಮಾತ್ರ ಮುಖಕ್ಕೆ ಹಚ್ಚಿ. ಜೊತೆಗೆ ನಿಮ್ಮ ಕೈ ಮತ್ತು ಪಾದಗಳಿಗೆ ಹಚ್ಚಬಹುದು. ನಂತರ ರಾತ್ರಿಯಿಡೀ ಹಾಗೇ ಬಿಟ್ಟು, ಬೆಳಗ್ಗೆ ಮುಖವನ್ನು ಸ್ವಚ್ಛ ಗೊಳಿಸಿ ನೋಡಿ ಮುಖ ಕಾಂತಿಯುತವಾಗಿ ಕಾಣುತ್ತದೆ. ಪ್ರತಿದಿನ ಇದನ್ನು ಬಳಸಲು ಆರಂಭಿಸಿದ ಮೇಲೆ ಮುಖದ ಮೇಲೆ ಮೊಡವೆ, ಕಲೆಗಳೆಲ್ಲಾ ನಿವಾರಣೆಯಾಗುತ್ತದೆ.