Prajwal Revanna: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಪೊಲೀಸರಿಂದ ಸ್ಥಳ ಮಹಜರು; ಸಂತ್ರಸ್ತೆ ಹೇಳಿದ್ದೇನು?
Prajwal Revanna: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತನಿಖೆಯು ವೇಗ ಪಡೆದುಕೊಂಡಿದೆ. ಹೊಳೆನರಸೀಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಸಂತ್ರಸ್ತೆಯೊಬ್ಬರು ಇಂದು ಬಸವನಗುಡಿಯಲ್ಲಿರುವ ಶಾಸಕ ಹೆಚ್.ಡಿ.ರೇವಣ್ಣ ಅವರ ಮನೆಗೆ ಕರೆತಂದರು.
ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಪೊಲೀಸ್ ವಾಹನದಲ್ಲಿ ಸ್ಥಳದ ಮಹಜರಿಗೆ ಕರೆತಂದಿದ್ದಾರೆ. ಮಹಿಳಾ ಸಿಬ್ಬಂದಿಗಳು ಇದ್ದು, ಸಂತ್ರಸ್ತೆಯನ್ನು ಕೊನೆಯಲ್ಲಿ ಜೀಪ್‌ನಿಂದ ಕೆಳಗಿಳಿಸಿ ಮನೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: Milk Curdling in Summer: ಬೇಸಿಗೆಯಲ್ಲಿ ಹಾಲು ಒಡೆದು ಹೋಗುವ ಸಮಸ್ಯೆಯೇ? ಹಾಗಾದರೆ ಈ ತಂತ್ರಗಳನ್ನು ಅನುಸರಿಸಿ
ಸಂತ್ರಸ್ತೆಯ ಪ್ರಕಾರ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗಿ ಸ್ಥಳ ಮಹಜರಿಗೆ ಅಧಿಕಾರಿಗಳು ಕರೆತಂದಿದ್ದಾರೆ.
ಸಂತ್ರಸ್ತೆಯ ಆರೋಪವೇನು?
ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ, ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸ್ಟೋರ್ ರೂಂ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದು. ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಈ ರೀತ ಹಲವು ಬಾರಿ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ತನ್ನ ಮಗಳ ಫೋನ್‌ಗೆ ಪ್ರಜ್ವಲ್ ರೇವಣ್ಣ ವೀಡಿಯೋ ಕಾಲ್ ಮಾಡಿ ಅಸಭ್ಯ ಸಂಭಾಷಣೆ ಮಾಡಿ ಪ್ರಚೋದನೆ ಮಾಡಿಸಲು ಪ್ರಯತ್ನಿಸಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ಈ ದೂರಿನನ್ವಯ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಸೆಕ್ಷನ್ ಅಡಿಯಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಎರಡು ದಿನಗಳ ಹಿಂದೆ ಹೊಳೆನರಸೀಪುರ ನಿವಾಸದಲ್ಲಿ ಸ್ಥಳಮಹಜರನ್ನು ಎಸ್‌ಐಟಿ ತಂಡ ನಡೆಸಿತ್ತು. ಇದೀಗ ಬಸನವಗುಡಿ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆತಂದು ಮಹಜರು ಮಾಡಲಾಗಿದೆ.