Pune: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು, 11 ವರ್ಷದ ಬಾಲಕ ಸಾವು
Pune: ಕ್ರಿಕೆಟ್ ಆಡುವ ಸಂದರ್ಭದಲ್ಲಿ ಖಾಸಗಿ ಅಂಗಕ್ಕೆ ಚೆಂಡು ತಾಗಿದ ಪರಿಣಾಮ 11 ವರ್ಷದ ಬಾಲಕನೋರ್ವ ಕುಸಿದು ಬಿದ್ದು ಮೃತಹೊಂದಿದ ಘಟನೆಯೊಂದು ಪುಣೆಯಲ್ಲಿ ನಡೆದಿದೆ.
ಶೌರ್ಯ (11 ವರ್ಷ) ಎಂಬುವವನೇ ಮೃತ ಬಾಲಕ.
ಇದನ್ನೂ ಓದಿ: Cleaning of Earthen Pots: ಮಣ್ಣಿನ ಮಡಿಕೆಯ ನೀರು ಕುಡಿಯುತ್ತಿದ್ದರೆ, ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ
ಶೌರ್ಯ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದು, ಬೌಲಿಂಗ್ ಮಾಡುತ್ತಿದ್ದ ಶೌರ್ಯ ಅವರ ಎಸೆತಕ್ಕೆ ಬ್ಯಾಟ್ಸ್‌ಮನ್ ಬಲವಾಗಿ ಬ್ಯಾಟ್ ಬೀಸಿದ್ದು, ಈ ಸಂದರ್ಭದಲ್ಲಿ ಚೆಂಡು ನೇರವಾಗಿ ಶೌರ್ಯ ಖಾಸಗಿ ಅಂಗಕ್ಕೆ ತಾಗಿದೆ. ಚೆಂಡು ತಾಗಿದ ಕೂಡಲೆ ಶೌರ್ಯ ಕೂಡಲೇ ನೋವಿನಲ್ಲಿ ಚೀರಿದ್ದು, ಎರಡು ಹೆಜ್ಜೆ ಇಡುತ್ತಲ್ಲೇ ಕುಸಿದು ಬಿದ್ದಿದ್ದಾನೆ.
ಇದನ್ನೂ ಓದಿ: Bantwala: ನೇತ್ರಾವತಿ ನದಿಯಲ್ಲು ಮುಳುಗಿ ಇಬ್ಬರು ಬಾಲಕಿಯರು ಸಾವು
ಕೂಡಲೇ ಆತನನ್ನು ಸ್ನೇಹಿತರು ಉಪಚರಿಸಿದ್ದು, ಆದರೆ ಶೌರ್ಯ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ವೈದ್ಯರು ಪರಿಶೀಲಿಸಿದಾಗ ಬಾಲಕ ಮೃತಹೊಂದಿರುವುದಾಗಿ ಹೇಳಿದ್ದಾರೆ.
ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.