Prajwal Revanna: ಅಪಹೃತ ಮಹಿಳೆಯಿಂದ ಇಂದು ಅಥವಾ ನಾಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು; ಹೆಚ್ಚಿತು ಪ್ರಜ್ವಲ್‌ ಸಂಕಷ್ಟ

Share the Article

Prajwal Revanna: ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದ ಸಂತ್ರಸ್ತೆ, ಎಸ್‌ಐಟಿ ಅಧಿಕಾರಿಗಳಿಗೆ ತನ್ನ ಮೇಲೆ ಸಂಸದ ಪ್ರಜ್ವಲ್‌ ಎಸಗಿರುವ ಲೈಂಗಿಕ ದೌರ್ಜನ್ಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Actress Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ನಟಿ ಸಮಂತಾ?

ನ್ಯಾಯಾಧೀಶರ ಎದುರು ಆಕೆಯ ಹೇಳಿಕೆಯನ್ನು ಸೆಕ್ಷನ್‌ 164 ಅಡಿಯಲ್ಲಿ ಕೇಸು ದಾಖಲು ಮಾಡಲು ಎಸ್‌ಐಟಿ ಮುಂದಾಗಿದೆ. ಲೈಂಗಿಕ ದೌರ್ಜನ್ಯದ ಕುರಿತು ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಸಂತ್ರಸ್ತೆ ಒಪ್ಪಿಕೊಂಡಿದ್ದು, ಸೋಮವಾರ ಅಥವಾ ಮಂಗಳವಾರ ಸಂತ್ರಸ್ತೆ ಹೇಳಿಕೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Karnataka Weather: ಇಂದು ಒಣ ಹವೆ, ಮೇ.7 ರ ನಂತರ ಕೆಲವು ಜಿಲ್ಲೆಯಲ್ಲಿ ಹಗುರ ಮಳೆ

ಶನಿವಾರ ಮೈಸೂರಿನಲ್ಲಿ ರಕ್ಷಣೆ ಮಾಡಿದ ಮಹಿಳೆಯನ್ನು ಸಿಐಡಿ ಅಧಿಕಾರಿಗಳು ಕಚೇರಿಗೆ ಕರೆತಂದಿದ್ದು, ರವಿವಾರ ಹೇಳಿಕೆ ನೀಡಲು ಭಯಭೀತಳಾದ ಹಿನ್ನೆಲೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಆಪ್ತಸಮಾಲೋಚಕರ ಮೂಲಕ ಧೈರ್ಯ ತುಂಬಲಾಗಿದೆ. ಆದರೂ ಭಯಗೊಂಡಿದ್ದ ಸಂತ್ರಸ್ತೆ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ. ನಂತರ ಆಕೆಯ ಪುತ್ರನನ್ನು ಕರೆತಂದು ಸ್ವಲ್ಪ ಹೊತ್ತು ಚರ್ಚೆ ಮಾಡಲು ಅವಕಾಶ ನೀಡಲಾಯಿತು. ಅನಂತರ ಆಕೆ ಪ್ರಜ್ವಲ್‌ ತನ್ನ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯದ ಕುರಿತು ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ. ರೇವಣ್ಣ ಅಪಹರಣ ಮಾಡಿದ್ದು ಹೇಗೆ? ಎಲ್ಲೆಲ್ಲೆ ಸತೀಶ್‌ ಬಾಬಣ್ಣ ಸುತ್ತಾಡಿಸಿದ್ದಾರೆ ಎಂಬ ಕುರಿತು ಮಾಹಿತಿ ತಿಳಿಸಿರುವ ಕುರಿತು ವರದಿಯಾಗಿದೆ.

Leave A Reply