Home News ಹೆಚ್ ಡಿ ರೇವಣ್ಣ ಕೈಯಲ್ಲಿ ಮತ್ತೆ ಲಿಂಬೆಹಣ್ಣು ಪ್ರತ್ಯಕ್ಷ, ನ್ಯಾಯಾಧೀಶರ ಮುಂದೆಯೂ ಲಿಂಬೂ ಅದುಮುವುದನ್ನು ನಿಲ್ಲಿಸದ...

ಹೆಚ್ ಡಿ ರೇವಣ್ಣ ಕೈಯಲ್ಲಿ ಮತ್ತೆ ಲಿಂಬೆಹಣ್ಣು ಪ್ರತ್ಯಕ್ಷ, ನ್ಯಾಯಾಧೀಶರ ಮುಂದೆಯೂ ಲಿಂಬೂ ಅದುಮುವುದನ್ನು ನಿಲ್ಲಿಸದ ಪ್ರಜ್ವಲ್ ಡ್ಯಾಡ್ !

H D Revanna

Hindu neighbor gifts plot of land

Hindu neighbour gifts land to Muslim journalist

H D Revanna: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಕೇಸಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆ ಸಂದರ್ಭ ಹಾಗೂ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಂದರ್ಭದಲ್ಲಿ ಕೂಡಾ ಎಚ್‌.ಡಿ.ರೇವಣ್ಣ ಕೈಯಲ್ಲಿ ಮೂರು ನಿಂಬೆಹಣ್ಣು ಪ್ರತ್ಯಕ್ಷವಾಗಿದೆ. ಈ ಹಿಂದೆ ಕೂಡಾ ಹಲವು ಬಾರಿ ನಿಂಬೆ ಹಣ್ಣು ಕೈಯಲ್ಲಿ ಹಿಡಿದುಕೊಂಡು ರೇವಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಮತ್ತು ಇತರರಿಗೂ ನಿಂಬೆಹಣ್ಣು ಬಳಸುವಂತೆ ಸೂಚಿಸಿದ್ದರು.

ಈಗ ವಿಚಾರಣೆಗೆoದ್ದು ಪೊಲೀಸ್ ವಾಹನದಿಂದ ಇಳಿದಿದ್ದ ರೇವಣ್ಣ, ನಿಂಬೆ ಹಣ್ಣುಗಳ ಸಮೇತ ನ್ಯಾಯಾಧೀಶರ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ವಿಶೇಷ ಕೊಠಡಿಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ರೇವಣ್ಣ ನಿಂಬೆ ಹಣ್ಣು ಅದುಮುವುದನ್ನು ಬಿಟ್ಟಿರಲಿಲ್ಲ.

ಈಗ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ರೇವಣ್ಣ ಕಣ್ಣೀರು ಹಾಕಿದ್ದಾರೆ. ‘ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ನಮ್ಮ ರಾಜಕೀಯ ಬೆಳವಣಿಗೆ ಸಹಿಸದವರು ಈ ರೀತಿ ಮಾಡಿದ್ದಾರೆ. ನನಗೆ ನ್ಯಾಯ ಕೊಡಿ’ ಎಂದು ಮನವಿ ಮಾಡಿದ್ದಾರೆ.

ನ್ಯಾಯಾಧೀಶರ ಮನೆಯಲ್ಲಿ ರೇವಣ್ಣ ಪರ ವಕೀಲ ಮತ್ತು ಎಸ್ಐಟಿ ಅಧಿಕಾರಿಗಳ ನಡುವಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿಯವರು, ರೇವಣ್ಣರನ್ನು ಮೇ.08 ರವರೆಗೆ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿರುವಾಗ ಮಹಾನ್ ಜ್ಯೋತಿಷ್ಯ ನಂಬಿಕಸ್ತರಾದ ರೇವಣ್ಣರವರು ಜ್ಯೋತಿಷಿಗಳ ಸಲಹೆಯಂತೆ ಕೈಯಲ್ಲಿ ಲಿಂಬೆ ಹಣ್ಣು ಹಿಡಿದಿದ್ದಾರೆ.

ಇದನ್ನೂ ಓದಿ: Medical Students: ಮದುವೆಗೆಂದು ಹೋದವರು, ಸಮುದ್ರದಲ್ಲಿ ಈಜಾಡಲು ಹೋಗಿ 5 ಮೆಡಿಕಲ್‌ ವಿದ್ಯಾರ್ಥಿಗಳು ದಾರುಣ ಸಾವು