Mangaluru: ಮಾರಣಾಂತಿಕ ಕಾಯಿಲೆಯ ಮಗುವಿಗೆ ಸಹಾಯ ಕೇಳಿದ ಅಪ್ಪ ಅಮ್ಮ; ‘ಇನ್ನು ಹಣ ಹಾಕಬೇಡಿ ಪ್ಲೀಸ್’ ಅನ್ನುವಷ್ಟರ ಮಟ್ಟಿಗೆ ಹರಿದು ಬಂದ ಹಣ !

Mangaluru: ಹುಟ್ಟಿದ ಐದೇ ತಿಂಗಳಲ್ಲಿ ಮಾರಕ ಕಾಯಿಲೆ ಎರಗಿದ ಐದು ತಿಂಗಳ ಹಸುಗೂಸು ಪ್ರಿಯೋನ್ ಸ್ಯಾಮ್ ಮೊಂತೇರೋ ಶಸ್ತ್ರ ಚಿಕಿತ್ಸೆಗೆ 50 ಲಕ್ಷ ಬೃಹತ್ ಮೊತ್ತದ ಅವಶ್ಯಕತೆಯಿತ್ತು. ಹೆತ್ತವರು 2 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಮಾಡಿ ಎಂದು ಸಂದೇಶ ಹಾಕಿದ್ದರು. ಇದೀಗ ಆ ಮನವಿಗೆ ಅಭೂತಪೂರ್ವವಾದ ಸ್ಪಂದನೆ ಸಿಕ್ಕಿದೆ. “ಅಯ್ಯೋ, ದುಡ್ಡು ಹಾಕೋದು ನಿಲ್ಲಿಸಿ” ಎಂದು ಗೋಗರೆಯುವಷ್ಟರ ಮಟ್ಟಿಗೆ ಹಣ ಸುರಿದು ಬರುತ್ತಿದೆ.

 

ಸುರಿದು ಬಂತು ಲಕ್ಷ ಲಕ್ಷ:

ಹೌದು, ಯಾರೂ ಊಹಿಸದ ರೀತಿಯಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ 60.62 ಲಕ್ಷ ರೂ ಹರಿದು ಬಂದಿದೆ. ಯಾವ ರೀತಿ ಹಣ ಬರುತ್ತಿತ್ತು ಅಂದರೆ, ಹೆತ್ತವರು ಮತ್ತೊಂದು ಸಂದೇಶವನ್ನು ನೀಡಿ ಹಣ ಹಾಕೋದು ಸಾಕು ಮಾಡಿ, ಎಲ್ಲಾ ದಾನಿಗಳಿಗೆ ಕೃತಜ್ಞತೆ. ಈಗಾಗಲೇ ಮಗುವಿನ ಚಿಕಿತ್ಸೆಗೆ ಬೇಕಾದ ಅಗತ್ಯ ಹಣ ಸಂಗ್ರಹಣೆಯಾಗಿರುವುದರಿಂದ ಇನ್ನು ಈ ಖಾತೆಗೆ ಹಣ ನೀಡುವುದು ಬೇಡ ಎಂದು ಮಗುವಿನ ಹೆತ್ತವರು ದಾನಿಗಳಲ್ಲಿ ವಿನಂತಿ ಮಾಡಿದ್ದಾರೆ. ಕೊಣಾಜೆ ನಿವಾಸಿ ಸಂತೋಷ್ ಮೊಂತೇರೋ ಮತ್ತು ಪ್ರಿಯಾ ಹೇಳಿದ ಬೇಡಿಕೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: H D Revanna : ಎಚ್ ಡಿ ರೇವಣ್ಣ ಕೊನೆಗೂ SIT ವಶಕ್ಕೆ !!

ತಮ್ಮ ಮಗು ಪ್ರಿಯೋನ್ ಸ್ಯಾಮ್‍ಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಹೆತ್ತವರು ತನ್ನ ಬಳಿಗೆ ಬಂದು ಸಹಾಯ ಮಾಡುವಂತೆ ತಿಳಿಸಿದ್ದರು. ಅಂದು ಮಗುವಿನ ತಾಯಿ ಪ್ರಿಯಾ, ಮಗುವಿನ ಆರೋಗ್ಯ ಸ್ಥಿತಿಯ ಕುರಿತು ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟಿದ್ದರು. ನಾವು ಅದನ್ನು ನಮ್ಮ ಫೇಸ್‍ಬುಕ್ ಪೇಜ್ ಸೇರಿದಂತೆ ಹಲವು ವಾಟ್ಸಪ್ ಗ್ರೂಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆವು. ಅದಾದ 48 ಗಂಟೆಗಳಲ್ಲಿ ದೇಶ ವಿದೇಶಗಳಿಂದ ಭರಪೂರ ಸ್ಪಂದನೆ ಸಿಕ್ಕಿದೆ. ಒಂದು ರೂಪಾಯಿನಿಂದ ಒಂದು ಲಕ್ಷ ರೂ, ವರೆಗೆ ದಾನಿಗಳಿಂದ ಹಣದ ಮಳೆ ಸುರಿದಿದೆ. ಹೀಗೆ ಮಗುವಿನ ಅಪ್ಪ.ಅಮ್ಮನ ಬ್ಯಾಂಕ್ ಖಾತೆಗೆ ಹಣ ಹರಿದು ಬಂದಿದ್ದು ಬರೋಬ್ಬರಿ 60.62 ಲಕ್ಷ ರೂ. ಈ ಹಣ ಪರಿಪ್ರಮಾಣ ಹಣ ಸಂಗ್ರಹಕ್ಕೆ ಕ್ಯಾಥೋಲಿಕ್ ಸಂಘಟನೆಗಳು ಸೇರಿದಂತೆ ಎಲ್ಲಾ ಜಾತಿ ಧರ್ಮಗಳ ಸಂಘ ಸಂಸ್ಥೆಗಳು, ದಾನಿಗಳು ಸಹಾಯಹಸ್ತ ನೀಡಿದ್ದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಚಿಕಿತ್ಸೆಯ ಮೊತ್ತ ಸಂಗ್ರಹವಾಗಿರುವುದು ವಿಶೇಷ ಎಂದು ಫಯಾಝ್ ತಿಳಿಸಿದರು.

ಈಗಾಗಲೇ ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಪ್ರಥಮ ಹಂತದ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗು ಆರೋಗ್ಯವಾಗಿದೆ ಎಂಬ ಮಾಹಿತಿಯಿದೆ. ಈ ಮಗುವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಹಣ ಜಮಾವಣೆಗೊಂಡ ಕಾರಣ ದಾನಿಗಳು ಇನ್ನು ಹಣ ನೀಡುವುದು ಬೇಡ ಎಂದು ಮಗುವಿನ ಹೆತ್ತವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ದೊಡ್ಡತನ ಮೆರೆದಿದ್ದಾರೆ. ಜತೆಗೆ ಹಣ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Leave A Reply

Your email address will not be published.