women skin care: ಹುಡುಗಿಯರನ್ನು ಹೆಚ್ಚು ಕಾಡುವ ತ್ವಚೆಯ ಸಮಸ್ಯೆಗಳಿವು : ಈ ಸಮಸ್ಯೆಗಳಿಗೆ ಪರಿಹಾರ ಇಲ್ಲಿ ತಿಳಿಯಿರಿ
Women Skin Care: ಸಾಮಾನ್ಯವಾಗಿ ಹುಡುಗಿಯರು ಸುಂದರವಾದ, ಕಲೆಗಳಿಲ್ಲದ ಚರ್ಮವನ್ನು ಬಯಸುತ್ತಾರೆ. ಆದಾಗ್ಯೂ, ಮುಟ್ಟಿನ ಮತ್ತು ಹಾರ್ಮೋನ್ ಆಹಾರ ಪದ್ಧತಿಯಿಂದಾಗಿ, ಅನೇಕ ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಚರ್ಮದ ಸಮಸ್ಯೆಗಳಿಂದ ಕೆಲವರು ಹೊರ ಬರಲು ಕಷ್ಟಪಡುತ್ತಿರುತ್ತಾರೆ. ಹುಡುಗಿಯರು ಎದುರಿಸುವ ಸೌಂದರ್ಯ ಸಮಸ್ಯೆಗಳೇನು ಎಂಬುದನ್ನು ಇಲ್ಲಿ ನೋಡೋಣ.
ಸುಕ್ಕುಗಳು :
ವಯಸ್ಸಾದಂತೆಲ್ಲಾ ಚರ್ಮವು ತನ್ನ ಸ್ಥಿತಿಸ್ಥಾಪಕತ್ವ ಮತ್ತು ಕಾಲಜನ್ ಅನ್ನು ಕಳೆದುಕೊಳ್ಳುತ್ತದೆ. ಇದು ಚರ್ಮದ ಮೇಲೆ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ಉಂಟುಮಾಡುತ್ತದೆ. ಇದನ್ನು ತಡೆಗಟ್ಟಲು, ಪೌಷ್ಟಿಕಾಂಶಯುಕ್ತ ಆಹಾರ ತೆಗೆದುಕೊಳ್ಳಿ ಮತ್ತು ಒತ್ತಡವನ್ನು ಕಡಿಮೆ ಮಾಡಿ.
ಒಣ ಚರ್ಮ :
ಅನೇಕ ಹುಡುಗಿಯರು ಒಣ ಚರ್ಮದ ಸಮಸ್ಯೆಯನ್ನು ಎದುರಿಸುತ್ತಾರೆ. ಒಣ ಚರ್ಮವು ಮುಖವನ್ನು ಒರಟಾಗಿ ಕಾಣುವಂತೆ ಮಾಡುತ್ತದೆ. ಇದನ್ನು ತಪ್ಪಿಸಲು ಸದಾ ಹೈಡ್ರೆಟ್ ಆಗಿರುವುದು ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ಹೆಚ್ಚಿನ ನೀರಿನಂಶವಿರುವ ಆಹಾರವನ್ನು ಸೇವಿಸಿದರೆ, ಈ ಸಮಸ್ಯೆಯು ಪರಿಹಾರವಾಗುತ್ತದೆ.
ಸನ್ ಬರ್ನ್ :
ಹುಡುಗಿಯರು ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಸನ್ ಬರ್ನ್. ಇದರಿಂದಾಗಿ ಸೂರ್ಯನ ಯುವಿ ಕಿರಣಗಳು ತ್ವರಿತ ಪರಿಣಾಮವನ್ನು ಬೀರುತ್ತವೆ. ಸನ್ ಬರ್ನ್ ನಿಂದಾಗಿ ಚರ್ಮ ಕಪ್ಪಾಗುತ್ತದೆ. ಸನ್ ಬರ್ನ್ ತಡೆಯಲು ಸನ್ ಸ್ಟೀನ್ ಬಳಸಬೇಕು