Prajwal Revanna: ರಾಜತಾಂತ್ರಿಕ ಪಾಸ್ ಪೋರ್ಟ್ ಮೂಲಕ ಜರ್ಮನಿಗೆ ಪ್ರಯಾಣ: ಪಾಸ್ ಪೋರ್ಟ್ ಗೆ ತಪಾಸಣೆ ಸೂಚಿಸಿರಲಿಲ್ಲ- ವಿದೇಶಾಂಗ ಸಚಿವಾಲಯ ವಕ್ತಾರ

Prajwal Revanna: ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ಜರ್ಮನಿಗೆ ಪ್ರಯಾಣಿಸಿದ್ದಾರೆ. ಆದರೆ, ಅವರ ಪ್ರಯಾಣದ ಬಗ್ಗೆ ಪರಿಶೀಲನೆ ಅಥವಾ ತಪಾಸಣೆಗೆ ಯಾವುದೇ ರೀತಿಯ ಮನವಿ ಅಥವಾ ನಿರ್ದೇಶನ ನೀಡಿರಲಿಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Driving Licence: ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ RTO ಎದುರು ಕ್ಯೂ ನಿಲ್ಲಬೇಕಿಲ್ಲ – ಬಂತು ಹೊಸ ನಿಯಮ !!

“ರಾಜತಾಂತ್ರಿಕ ಪಾಸ್‌ಪೋರ್ಟ್ ಗಳಿಗೆ ವೀಸಾ ಅಗತ್ಯವಿಲ್ಲ. ಇತರ ವಿದೇಶಕ್ಕೆ ವೀಸಾ ನೋಟ್ ನೀಡ ಲಾಗಿಲ್ಲ.” ಎಂದು ಅವರು ಸ್ಪಷ್ಟಪಡಿಸಿ ದ್ವಾರಿ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಬಗ್ಗೆ ಕೋರ್ಟ್ ಅಥವಾ ಸಂಬಂಧಿತ ಇಲಾಖೆಯಿಂದ ನಿರ್ದೇಶನ ಬಂದಿಲ್ಲ. ಹಾಗೆ ನಿರ್ದೇಶನ ಸಿಕ್ಕಲ್ಲಿ, ಪಾಸ್‌ಪೋರ್ಟ್ ಕಾಯಿದೆ ಅನ್ವಯ ಕ್ರಮ ಜರುಗಿಸುತ್ತೇವೆ,” ಎಂದಿದ್ದಾರೆ.

ಇದನ್ನೂ ಓದಿ: COVAXIN: ಕೋವ್ಯಾಕ್ಸಿನ್ ಸುರಕ್ಷಿತ – ಭಾರತ್ ಬಯೋಟೆಕ್ ಕಂಪನಿ

Leave A Reply

Your email address will not be published.