Pendrive Case: ಅಶ್ಲೀಲ ವಿಡಿಯೋ ಡ್ರೈವರ್ ಕಾರ್ತಿಕ್ ಗೆ ದೊರಕಿದ್ದು ಹೇಗೆ?

Share the Article

Pen Drive Case: 15 ವರ್ಷದಿಂದ ರೇವಣ್ಣ ಅವರ ಕುಟುಂಬದ ಕಾರು ಚಾಲಕನಾಗಿದ್ದ ಕಾರ್ತಿಕ್, ಸಂಸದ ಪ್ರಜ್ವಲ್ ಜತೆಗೆ ಆತ್ಮೀಯನಾಗಿದ್ದ ಎನ್ನಲಾಗಿದೆ. ಲೈಂಗಿಕ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿರುವುದನ್ನು ಅರಿತ ಕಾರ್ತಿಕ್, ಪ್ರಜ್ವಲ್ ಮೊಬೈಲ್ ಪಾಸ್‌ವರ್ಡ್ ತಿಳಿದುಕೊಂಡು ಏರ್‌ಡ್ರಾಪ್ ಮೂಲಕ ತನ್ನ ಮೊಬೈಲ್‌ಗೆ ವಿಡಿಯೊಗಳನ್ನು ವರ್ಗಾಯಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: COVAXIN: ಕೋವ್ಯಾಕ್ಸಿನ್ ಸುರಕ್ಷಿತ – ಭಾರತ್ ಬಯೋಟೆಕ್ ಕಂಪನಿ

ತನ್ನ ಜಮೀನನ್ನು ಕೊಡುವುದಿಲ್ಲ ಎಂದರೂ ತನ್ನ ಹಾಗೂ ಪತ್ನಿ ಮೇಲೆ ದೌರ್ಜನ್ಯ ಎಸಗಿ ಬರೆಸಿಕೊಂಡರು ಎಂಬ ಕಾರಣಕ್ಕೆ ಒಂದು ವರ್ಷದಿಂದ ಪ್ರಜ್ವಲ್ ಹಾಗೂ ರೇವಣ್ಣ ಕುಟುಂಬದಿಂದ ದೂರವಾಗಿದ್ದ. ತನಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಮುಖಂಡ ದೇವರಾಜೇಗೌಡರ ಬಳಿ ಹೋದಾಗ ಅಶ್ಲೀಲ ದೃಶ್ಯದ ಪೆನ್‌ ಡ್ರೈವ್ ವಿಷಯ ಪ್ರಸ್ತಾಪಿಸಿದ. ನ್ಯಾಯ ಕೊಡಿಸುವುದಾಗಿ ಹಾಗೂ ಪೆನ್‌ಡ್ರೈ ವ್ ಬಿಡುಗಡೆ ಮಾಡುವುದಿಲ್ಲ ಎಂದು ಪ್ರಜ್ವಲ್ ನಂಬಿಸಿದ ದೇವರಾಜೇಗೌಡ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಕಾರ್ತಿಕ್ ಆರೋಪ.

ಇದನ್ನೂ ಓದಿ: Prajwal Revanna: ರಾಜತಾಂತ್ರಿಕ ಪಾಸ್ ಪೋರ್ಟ್ ಮೂಲಕ ಜರ್ಮನಿಗೆ ಪ್ರಯಾಣ: ಪಾಸ್ ಪೋರ್ಟ್ ಗೆ ತಪಾಸಣೆ ಸೂಚಿಸಿರಲಿಲ್ಲ- ವಿದೇಶಾಂಗ ಸಚಿವಾಲಯ ವಕ್ತಾರ

ಈ ಆರೋಪ ನಿರಾಕರಿಸುವ ದೇವರಾಜೇಗೌಡ ಪೆನ್ ಡ್ರೈವ್ ಬಗ್ಗೆ ಸಿಬಿಐ ತನಿಖೆ ಆಗಲಿ ಎಂದಿದ್ದಾರೆ. ಒಟ್ಟಾರೆ ಅಶ್ಲೀಲ ದೃಶ್ಯದ ಪೆನ್‌ ಡೈವ್ ಬಹಿರಂಗ ಕಾರ್ತಿಕ್ ಮತ್ತು ದೇವರಾಜೇಗೌಡನ ಸುತ್ತ ಗಿರಕಿ ಹೊಡೆಯುತ್ತಿದೆ.

Leave A Reply