Uttar pradesh: ‘ರೀ ನಿಮ್ಮಣ್ಣ ನನ್ನ ರೇಪ್ ಮಾಡಿದ’ ಎಂದು ಅತ್ತ ಹೆಂಡತಿ – ನೀನಿನ್ನು ನನ್ನ ಅತ್ತಿಗೆ ಎಂದ ಗಂಡ !!

Share the Article

Uttar pradesh: ರೀ ನಿಮ್ಮ ಅಣ್ಣ ನನ್ನನ್ನು ರೇಪ್ ಮಾಡಿದ ಎಂದು ಹೆಂಡತಿ ಗಂಡನ ಬಳಿ ಹೋಗಿ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರೆ ಪಾಪಿ ಗಂಡ ನೀನಿನ್ನು ನನ್ನ ಹೆಂಡತಿಯಲ್ಲ, ಅತ್ತಿಗೆ ಎಂದು ಹೇಳಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ.

ಹೌದು, ಉತ್ತರ ಪ್ರದೇಶದ(Uttarapradesh) ಮುಜಾಫರ್‌ನಗರ ಜಿಲ್ಲೆಯಲ್ಲಿ ಈ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ತನ್ನ ಗಂಡನ ಬಳಿ ಬಾವ ಅಂದರೆ ನಿಮ್ಮ ಅಣ್ಣ ನನ್ನನ್ನು ರೇಪ್(Rape) ಮಾಡಿದ ಅಂದಾಗ ನೀನು ಇನ್ನು ಮುಂದೆ ನನ್ನ ಹೆಂಡತಿಯಲ್ಲ. ನೀನು ಈಗ ನನ್ನ ಅತ್ತಿಗೆ,’ ಎಂದವನು ಘೋಷಿಸಿದ್ದಾನೆ.

ಇಷ್ಟೇ ಅಲ್ಲದೆ ಮರುದಿನ, ಆಕೆಯ ಪತಿ ಮತ್ತು ಭಾವ ಅವಳ ಕೋಣೆಗೆ ಪ್ರವೇಶಿಸಿದರು. ಆಕೆಯ ಪತಿ ಅವಳದೇ ದುಪ್ಪಟ್ಟಾದಿಂದ ಕತ್ತು ಹಿಸುಕಲು ಯತ್ನಿಸಿದಾಗ ಆತನ ಸಹೋದರ ತನ್ನ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಏನಿದು ಘಟನೆ?
ಏಪ್ರಿಲ್ 2ರಂದು ತನ್ನ ಪತಿ ಮನೆಯಲ್ಲಿ ಇಲ್ಲದಿದ್ದಾಗ ಆತನ ಸಹೋದರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಆಕೆಯ ವಿಡಿಯೋ ಕೂಡಾ ಚಿತ್ರಿಸಿದ್ದಾನೆ. ಆ ವಿಷಯವನ್ನು ಗಂಡ ಮನೆಗೆ ಹಿಂದಿರುಗಿದ ಕೂಡಲೇ ಆಕೆ ಹೇಳಿಕೊಂಡಿದ್ದಾಳೆ. ಇದಕ್ಕೆ ಪತಿ ಗಾಯದ ಮೇಲೆ ಬರೆ ಎಳೆದಂತೆ ಆಘಾತಕಾರಿ ಪ್ರತಿಕ್ರಿಯೆ ನೀಡಿದ್ದಾನೆ.

ಸದ್ಯ ಸಂತ್ರಸ್ತೆ ಇಬ್ಬರ ಮೇಲೂ ದೂರು ನೀಡಿದ್ದಾಳೆ. ಆರೋಪಿ ಪತಿ ಮತ್ತು ಭಾವನ ವಿರುದ್ಧ ಖತೌಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 376 (ಅತ್ಯಾಚಾರ), 307 (ಕೊಲೆಗೆ ಯತ್ನ), ಮತ್ತು 328 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Prajwal Revanna: ‘ಪೆನ್‌ಡ್ರೈವ್’ ಬಲೆಗೆ ಸಿಲುಕಿದ ಪ್ರಜ್ವಲ್ ರೇವಣ್ಣ – ಮತ್ತೊಂದು ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ !!

Leave A Reply