Vijayapura: ವೇದಿಕೆ ಏರಿದ ಸಿದ್ದರಾಮಯ್ಯ, ತಕ್ಷಣ ಕೆಳಗಿಳಿದು ಹೋದ ರಾಹುಲ್ ಗಾಂಧಿ !! ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂಗೆ ಮುಜುಗರ

Share the Article

Vijayapura: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಮಾವೇಶದ ವೇದಿಕೆ ಮೇಲೆ ಬರುತ್ತಿದ್ದಂತೆ ಕಾಂಗ್ರೆಸ್ನೇತಾರ ರಾಹುಲ್ ಗಾಂಧಿ ಅವರು ತಕ್ಷಣ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್ (Congress) ಕಾರ್ಯಕ್ರಮದಲ್ಲಿ ರಾಜ್ಯದ ಸಿಎಂಗೆ ಮುಜುಗರ (embarrassing) ಆಗುವಂತಹ ಪ್ರಸಂಗವೊಂದು ನಡೆಯಿತು.

ಹೌದು, ವಿಜಯಪುರದಲ್ಲಿ (Vijayapura) ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆಗಮಿಸಿದ್ದರು. ಈ ವೇಳೆ ಮೊದಲು ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ವೇದಿಕೆ ಎಡಭಾಗದಿಂದ ಸಿಎಂ ಸಿದ್ದರಾಮಯ್ಯ ಆಗಮಿಸಿದ್ರು. ಇದೇ ವೇಳೆ ವೇದಿಕೆ ಬಲಗಡೆಯಿಂದ ರಾಹುಲ್ ಗಾಂಧಿ ಇಳಿದು ಹೋದ ಪ್ರಸಂಗ ನಡೆಯಿತು. ಇದರಿಂದ ಕಾಂಗ್ರೆಸ್ ನಾಯಕರೇ ಮುಜುಗರ ಎದುರಿಸುವಂತಾಯ್ತು.

ರಾಹುಲ್ ಗಾಂಧಿಯವರನ್ನು ವಾಪಸ್ ಕರೆತಂದ ಸಿಎಂ

ರಾಹುಲ್ ಗಾಂಧಿ ವೇದಿಕೆಯಿಂದ ಇಳಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಬರ್ತಿದ್ದಾರೆ ಅಂತ ಸಚಿವ ಶಿವಾನಂದ ಪಾಟೀಲ್ ಹಾಗೂ ಸಿಬ್ಬಂದಿ ರಾಹುಲ್ ಗಾಂಧಿಯವ್ರಿಗೆ ಹೇಳಿದ್ರು. ಆದರೂ ಅದನ್ನ ಗಮನಿಸದೇ ವೇದಿಕೆಯಿಂದ ರಾಹುಲ್ ಗಾಂಧಿ ಇಳಿದು ಹೋದ್ರು. ಬಳಿಕ ರಾಹುಲ್ ಹಿಂದೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಓಡೋಡಿ ಹೋಗಿ ಮಾತನಾಡಿಸಿದ್ರು. ಬಳಿಕ ರಾಹುಲ್‌ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ವೇದಿಕೆಗೆ ವಾಪಸ್ ಕರೆತಂದರು.

Leave A Reply