Chikkamagaluru: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!

Chikkamagaluru: ಚಿಕ್ಕಮಗಳೂರು ತಾಲೂಕಿನ ಉಜೈನಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಾಲ್ಲೂಕಿನ ಹಿಂದೂ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

 

ಇದನ್ನೂ ಓದಿ:  IIMB: ಐಐಎಂಬಿಯಲ್ಲಿ ಉದ್ಯೋಗಕ್ಕೆ ಆಹ್ವಾನ, ತಿಂಗಳಿಗೆ 44,000 ಸಂಬಳ!

ನಿನ್ನೆ ದಿನ(ಏ 26) ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಿತು. ಇದರಲ್ಲಿ ಉಡುಪಿ- ಚಿಕ್ಕಮಗಳೂರು(Udupi-Chikkamagaluru) ಕ್ಷೇತ್ರವೂ ಒಂದಾಗಿತ್ತು. ಅಂತೆಯೇ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಶಾಂತಿಯುತವಾಗಿ ಮತದಾನದ ನಡೆಯುತ್ತಿದ್ದಾಗಲೇ ಈ ರೀತಿ ಹಿಂದೂ ಕಾರ್ಯಕರ್ತರಾದ ಪ್ರವೀಣ್ ಕಾಂಡ್ಯ(Praveen kandya) ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:  Government Job: ಪರೀಕ್ಷೆ ಇಲ್ಲದೆ ಸರ್ಕಾರಿ ಉದ್ಯೋಗ ಪಡೆಯಬಹುದು, ಲೈಫ್ ಸೆಟಲ್ ಬಿಡಿ!

ಪ್ರವೀಣ ಖಾಂಡ್ಯ ಮತದಾನ ಮಾಡಲು ಮತಗಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಬಂದು ಗುಂಪು ದಾಳಿ ನಡೆಸಿದ್ದಾರೆನ್ನಲಾಗಿದೆ. ಹಠಾತ್ ನಡೆದ ಹಲ್ಲೆಯಿಂದಾಗಿ ಪ್ರವೀಣ್ ಖಾಂಡ್ಯನಿಗೆ ತಲೆ, ಕೈಗಳಿಗೆ ಗಂಭೀರ ಗಾಯವಾಗಿದ್ದು, ಬಾಳೆಹೊನ್ನೂರು(Balehonnuru) ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಬಳಿಕ ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ.

Leave A Reply

Your email address will not be published.