RCB-SRH IPL-2024: ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಇದೀಗ ಎಸ್ ಆರ್ ಎಚ್ ವಿರುದ್ಧದ ಪಂದ್ಯದಲ್ಲಿ 35 ರನ್ಗಳಿಂದ ಗೆದ್ದು ಬೀಗಿದೆ
RCB-SRH IPL-2024: ಇದೀಗ ಆರ್‌ಸಿಬಿ ಗುರುವಾರ ನಡೆದ ಎಸ್ ಆರ್ ಎಚ್ ವಿರುದ್ಧದ ಪಂದ್ಯದಲ್ಲಿ 35 ರನ್ಗಳಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಸತತ ಆರು ಸೋಲಿನ ನಂತರ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧ ಆರ್‌ಸಿಬಿ 35 ರನ್‌ಗಳ ಜಯ ಸಾಧಿಸಿದೆ.
ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಅರ್ಧಶತಕಗಳ ಆಧಾರದ ಮೇಲೆ, RCB ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 207 ರನ್‌ಗಳ ಗುರಿಯನ್ನು ನೀಡಿತು. ಉತ್ತರವಾಗಿ ಎಸ್‌ಆರ್‌ಎಚ್ 8 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿ ಸೋಲನ್ನೊಪ್ಪಿಕೊಂಡಿದ್ದು.
ಇದನ್ನೂ ಓದಿ: Madhavi Latha: ಓವೈಸಿ ವಿರುದ್ಧ ಕಣಕ್ಕಿಳಿದಿರೋ ತೆಲಂಗಾಣದ ಶ್ರೀಮಂತ ಮಹಿಳೆ -ಯಾರು ಈ ಮಾಧವಿ ಲತಾ, ಒಟ್ಟು ಆಸ್ತಿ ಎಷ್ಟು?
ಪ್ರಸಕ್ತ ಋತುವಿನಲ್ಲಿ ಹೈದರಾಬಾದ್ ವಿರುದ್ಧ 25 ರನ್ ಗಳ ಸೋಲಿನ ಖಾತೆಯನ್ನು ಬೆಂಗಳೂರು ಕೂಡ ಇತ್ಯರ್ಥಪಡಿಸಿತು. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಆರ್‌ಸಿಬಿಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಏಕೆಂದರೆ ಒಂಬತ್ತು ಪಂದ್ಯಗಳಲ್ಲಿ ಕೇವಲಎರಡು ಗೆಲುವು ಮಾತ್ರ ದಾಖಲಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಕೊನೆಯ ಹತ್ತನೇ ಸ್ಥಾನದಲ್ಲಿದೆ. ಅದೇ ಹೊತ್ತಿಗೆ ಎಂಟು ಪಂದ್ಯಗಳಲ್ಲಿ ಹೈದರಾಬಾದ್ ಮೂರನೇ ಸೋಲು ಕಂಡಿದೆ. SRH ಮೂರನೇ ಸ್ಥಾನದಲ್ಲಿದೆ.
ಮೊದಲು ಟಾಸ್ ಗೆದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 206 ರನ್ ಗಳಿಸಿತ್ತು. ಶುಭಾರಂಭ ಮಾಡಿದ ಆರ್ಸಿಬಿ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (12 ಎಸೆತಗಳಲ್ಲಿ 25) ಮೊದಲ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ನೀಡಿದರು. ನಾಲ್ಕನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದುಬಿತ್ತು. ವಿಲ್ ಜಾಕ್ವೆಸ್ (6) ಅಗ್ಗವಾಗಿ ಔಟಾದರು. ಇದರ ನಂತರ ಕೊಹ್ಲಿ ಮತ್ತು ಪಾಟಿದಾರ್ ಮೂರನೇ ವಿಕೆಟ್‌ಗೆ 65 ರನ್ ಸೇರಿಸಿದರು. ಪಾಟಿದಾರ್ 13ನೇ ಓವರ್ ನಲ್ಲಿ 130 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿ ಬಿರುಸಿನ ಆಟವಾಡಿದರು. 15ನೇ ಓವರ್‌ನಲ್ಲಿ ಕೊಹ್ಲಿ ಔಟಾದರು. ಅವರ ಬ್ಯಾಟ್ 43 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 51 ರನ್ ಗಳಿಸಿತು. ಮಹಿಪಾಲ್ ಲೊಮೋರ್ 7 ರನ್ ಮತ್ತು ಸ್ವಪ್ಟಿಲ್ ಸಿಂಗ್ 12 ರನ್ ಕೊಡುಗೆ ನೀಡಿದರು. ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 37 ರನ್ ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್ ಪರ ಜಯದೇವ್ ಉನದ್ಮತ್ ಮೂರು ಹಾಗೂ ಟಿ ನಟರಾಜನ್ ಎರಡು ವಿಕೆಟ್ ಪಡೆದರು. ಮಯಾಂಕ್ ಮಾರ್ಕಂಡೆ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ದೊಡ್ಡ ಗುರಿ ಬೆನ್ನತ್ತಲು ಬಂದ ಹೈದರಾಬಾದ್ ತಂಡ ಕಳಪೆ ಆರಂಭ ನೀಡಿತು. ಅಮೋಘ ಫಾರ್ಮ್ ನಲ್ಲಿದ್ದ ಟ್ರಾವಿಸ್ ಹೆಡ್ (1) ಮೊದಲ ಓವರ್ ನಲ್ಲೇ ವಿಕೆಟ್ ಕಳೆದುಕೊಂಡರು. ಅಭಿಷೇಕ್ ಶರ್ಮಾ (13 ಎಸೆತಗಳಲ್ಲಿ 31, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್) ತ್ವರಿತವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಅವರು ನಾಲ್ಕನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಮರಳಿದರು. ಏಡೆನ್ ಮಾಕ್ರ್ರಾಮ್ (7), ಹೆನ್ರಿಚ್ ಕ್ಲಾಸೆನ್ (7), ನಿತೀಶ್ ರೆಡ್ಡಿ (13) ಮತ್ತು ಅಬ್ದುಲ್ ಸಮದ್ (10) ಅಬ್ಬರಿಸಲು ಸಾಧ್ಯವಾಗಲಿಲ್ಲ. SRH ತಂಡದ ಅರ್ಧದಷ್ಟು ಮಂದಿ 69 ರನ್‌ಗಳಿಗೆ ಔಟಾದರು. ನಾಯಕ ಪ್ಯಾಟ್ ಕಮ್ಮಿನ್ಸ್ (15 ಎಸೆತಗಳಲ್ಲಿ 31, ಒಂದು ಬೌಂಡರಿ, ಮೂರು ಸಿಕ್ಸರ್ ಗಳಿಸಿ) ಉತ್ತಮ ಟಚ್‌ನಲ್ಲಿ ಕಂಡುಬಂದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಶಹಬಾದ್ ಅಹ್ಮದ್ (37 ಎಸೆತಗಳಲ್ಲಿ 40) ಮತ್ತು ಜಯದೇವ್ ಉನದ್ಮತ್ (10 ಎಸೆತಗಳಲ್ಲಿ 8) ಅಜೇಯರಾಗಿ ಉಳಿದರು. ಆರ್‌ಸಿಬಿ ಪರ ಸ್ವಪ್ಟಿಲ್ ಸಿಂಗ್, ಕ್ಯಾಮೆರಾನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ವಿಲ್ ಜಾಕ್ವೆಸ್ ಮತ್ತು ಯಶ್ ದಯಾಲ್ ತಲಾ ಒಂದು ವಿಕೆಟ್ ಪಡೆದರು.