Gujarath: ನಿಮ್ಮ ಹೆಂಡತಿ-ಮಗಳನ್ನು ರಾಹುಲ್ ಗಾಂಧಿ ಜೊತೆ ಮಲಗಿಸಿ, ನಪುಂಸಕ ಹೌದೋ, ಅಲ್ವೋ ಗೊತ್ತಾಗತ್ತೆ !! ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

Share the Article

Gujarath: ಬಿಜೆಪಿ ನಾಯಕ ಭೂಪತ್‌ ಭಯಾನಿ(Bhoopat Bhayani) ಅವರು ರಾಹುಲ್‌ ಗಾಂಧಿ(Rahul Gandhi) ಯನ್ನು ನಪುಂಸಕ ಎಂದು ಕರೆದದ್ದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಗುಜರಾತ್‌ ಕಾಂಗ್ರೆಸ್‌ ನಾಯಕ ಪ್ರಯಾಪ್‌ ದುದತ್‌(Congress Leader Prayap Duduth) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ದೇಶಾದ್ಯಂತ ಭಾರೀ ಆಕ್ರೋಶ ಕೇಳಿಬರುತ್ತಿದೆ.

ಇದನ್ನೂ ಓದಿ:  BJP MP Dies : ಹೃದಯಾಘಾತಕ್ಕೆ ಬಿಜೆಪಿ ಸಂಸದ ಸಾವು !!

ರಾಹುಲ್ ಗಾಂಧಿಯನ್ನು ನಪುಂಸಕ ಎಂದ ಬಿಜೆಪಿ ನಾಯಕ ಭೂಪತ್ ಭಯಾನಿ ಅವರನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುವ ಭರದಲ್ಲಿ ‘ರಾಹುಲ್‌ ಗಾಂಧಿ ನಪುಂಸಕ ಹೌದೋ? ಅಲ್ಲವೋ ಎಂದು ತಿಳಿಯಲು ತಮ್ಮ ಹೆಂಡತಿ-ಮಗಳನ್ನು ರಾಹುಲ್ ಜೊತೆ ಮಲಗಲು ಬಿಡಿ ಸಾಕು. ಇದರಿಂದ ಅವರು ಏನು ಅನ್ನೋದು ಗೊತ್ತಾಗುತ್ತದೆ ಎಂದು ಬೇಕಾಬಿಟ್ಟಿ ಹೇಳಿಕೆ ನೀಡಿ ಗುಜರಾತ್‌ ಕಾಂಗ್ರೆಸ್‌ ನಾಯಕ ಪ್ರಯಾಪ್‌ ದುದತ್‌ ಬಾರೀ ವಿವಾದ ಸೃಷ್ಟಿಸಿದ್ದಾರೆ. ಈ ಕುರಿತ ವಿಡಿಯೋ ಕೂಡ ಎಕ್ಸ್‌ನಲ್ಲಿ ವೈರಲ್‌

 

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ‘ರಾಹುಲ್‌ ಗಾಂಧಿ ಅವರ ಪುರುಷತ್ವ ಪರೀಕ್ಷೆ ಮಾಡ್ಬೇಕು ಅಂದಿದ್ದರೆ, ನಿಮ್ಮ ಸಹೋದರಿ ಅಥವಾ ಮಗಳನ್ನು ರಾಹುಲ್‌ ಗಾಂಧಿ ಜತೆ ಮಲಗಲು ಬಿಡಿ ಎಂದು ಕಾಂಗ್ರೆಸ್‌ ನಾಯಕ ಪ್ರತಾಪ್‌ ದುದತ್‌ ಹೇಳಿದ್ದಾರೆ. ಇದು ಎಷ್ಟು ನೀಚ ಹೇಳಿಕೆ. ಇದು ಪ್ರತಾಪ್‌ ದುದತ್‌ ಅವರ ಮಾತಲ್ಲ. ಕಾಂಗ್ರೆಸ್‌ ನಾಯಕರ ಡಿಎನ್‌ಎಯಲ್ಲೇ ಇಂಥ ಮಾತುಗಳು ಇವೆ’ ಎಂದು ಗುಜರಾತ್‌ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಝುಬಿನ್‌ ಅಶಾರಾ ಹೇಳಿದ್ದಾರೆ. ಜೊತೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರತಾಪ್‌ ದುದತ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಆಗ್ರಹಿಸಿವೆ.

ಭೂಪತ್‌ ಭಯಾನಿ ಹೇಳಿದ್ದೆನು?

ಸೋಮವಾರ ಜುನಾಗಢದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡುವಾಗ ಭೂಪತ್ ಭಯಾನಿ ಅವರು ರಾಹುಲ್‌ ಗಾಂಧಿಯವರ ನಾಯಕತ್ವದ ಗುಣಗಳ ಬಗ್ಗೆ ಪ್ರಶ್ನೆ ಮಾಡುತ್ತಾ, ಅವರ ಪುರುಷತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ದೇಶವನ್ನು ಯಾವುದೇ ಕಾರಣಕ್ಕೂ ನಪುಂಸಕನಾದ ರಾಹುಲ್‌ ಗಾಂಧಿ ಅವರ ಕೈಗೆ ನೀಡಬಾರದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಅವರ ಮಾತಿಗೆ ವ್ಯಾಪಕ ಟೀಕೆಗಳು ಬಂದಿದ್ದು. ಇಷ್ಟಾಗಿಯೂ ಭಯಾನಿ ತಾವು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದರು. ಚುನಾವಣಾ ಆಯೋಗದ ಚೌಕಟ್ಟಿನ ಒಳಗೆ ಈ ಕಾಮೆಂಟ್‌ ಮಾಡಿದ್ದೇನೆ ಎಂದಿದ್ದರು. ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಶಾಸಕ ಭೂಪತ್‌ ಭಯಾನಿ ಆಮ್‌ ಆದ್ಮಿ ಯಿಂದ ಬಿಜೆಪಿ ಸೇರಿದ್ದರು.

Leave A Reply

Your email address will not be published.