Lok Sabha Elections: ಮೈಸೂರಿನ ಪ್ರವಾಸಿ ತಾಣಗಳು ಎ.26 ಕ್ಕೆ ಬಂದ್ ‌

Lok Sabha Elections: ಎ.26 ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್‌ ಮಾಡಲು ಅಧಿಕಾರಿಗಳು ಮುಂದೆ ಬಂದಿದ್ದಾರೆ. ಮತದಾನವು ಶುಕ್ರವಾರ ಇರುವುದರಿಂದ ಅಂದು ರಜೆ ಇದೆ. ಶನಿವಾರ, ಭಾನುವಾರ ರಜೆಯಾಗಿದ್ದರಿಂದ ಮತದಾರರು ಪ್ರವಾಸದ ಯೋಜನೆ ಹಾಕಿಕೊಂಡು ತೆರಳಿದರೆ ಮತದಾನದ ಪ್ರಮಾಣ ಕಡಿಮೆಯಾದೀತು ಎಂಬ ಆಲೋಚನೆಯೊಂದಿಗೆ ಅಧಿಕಾರಿಗಳು ಈ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.

 

ಇದನ್ನೂ ಓದಿ:  Bengaluru Karaga: ಬೆಂಗಳೂರಿಗರೇ ಗಮನಿಸಿ, ಇಂದು, ನಾಳೆ ಸಂಚಾರ ಮಾರ್ಗದಲ್ಲಿ ಬದಲಾವಣೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣ ಮುಚ್ಚಲಾಗುವುದು. ಎ.26 ರಂದು ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  Neha Hiremath: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ; ವಿಶೇಷ ನ್ಯಾಯಾಲಯ ಸ್ಥಾಪನೆ

Leave A Reply

Your email address will not be published.