Mandya News: ಬೀದಿ ಬದಿಯ ಐಸ್‌ಕ್ರೀಂ ತಿಂದು ಅವಳಿ ಮಕ್ಕಳು ಸಾವು, ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ತೀವ್ರ ಅಸ್ವಸ್ಥ
Mandya News: ಬೀದಿ ಬದಿಯ ಆಹಾರ ಸೇವಿಸಿ ಅಸ್ವಸ್ಥಗೊಳ್ಳುವ ಹಾಗೂ ಮೃತ ಪಡುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಮಂಡ್ಯ ಹಾಗೂ ದಾವಣಗೆರೆಯಲ್ಲಿ ಇದೀಗ ಈ ರೀತಿಯ ಪ್ರಕರಣವೊಂದು ವರದಿಯಾಗಿದೆ. ಐಸ್‌ಕ್ರೀಂ ತಿಂದು ಒಂದೂವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿರುವ ಘಟನೆಯೊಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: Jai Shri Ram: ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಪ್ರಕರಣ; ಮೂವರು ಅರೆಸ್ಟ್, ಒಬ್ಬ ಎಸ್ಕೇಪ್
ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳೇ ಐಸ್‌ಕ್ರೀಂ ತಿಂದು ಮೃತ ಹೊಂದಿದವರು. ನಿನ್ನೆ ಸಂಜೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ಖರೀದಿಸಿ ತಾಯಿ ಮಕ್ಕಳು ತಿಂದಿದ್ದರು. ಕೂಡಲೇ ಅವರು ಅಸ್ವಸ್ಥಗೊಂಡಿದ್ದು, ಮಕ್ಕಳು ಮನೆಯಲ್ಲಿ ಮೃತ ಹೊಂದಿದ್ದರೆ, ತಾಯಿ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವಳಿ ಮಕ್ಕಳ ಮೃತದೇಹವನ್ನು ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕು; 3 ದಿನ ಭರ್ಜರಿ ಮಳೆ
ಇದೀಗ ಪೊಲೀಸರು ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಈ ಘಟನೆ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಎಕ್ಸಿಬಿಷನ್ ವೀಕ್ಷಿಸಲೆಂದು ಹೋದ ಬಾಲಕನೋರ್ವ ಸ್ಮೋಕ್ ಬಿಸ್ಕೆಟ್ ತಿಂದು ಅಸ್ವಸ್ಥನಾಗಿರುವ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ. ಬಾಲಕ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.
ಎಕ್ಸಿಬಿಷನ್‌ನ ಸ್ಟಾಲ್ ಒಂದರಲ್ಲಿ ಸ್ಮೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಇದನ್ನು ಆತ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಸ್ಮೋಕ್ ಬಿಸ್ಕೆಟ್ ಸ್ಟಾಲ್ ಒಂದರಲ್ಲಿ ಬಿಸ್ಕೆಟನ್ನು ಮಗು ಒಂದೇ ಸಲ ಬಾಯಿಗೆ ಹಾಕಿದೆ. ನಂತರ ನುಂಗಲೂ ಆಗದೇ ಉಗಿಯಲೂ ಆಗದೇ ಉಸಿರು ಕಟ್ಟಿದೆ. ನಂತರ ತೀವ್ರ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ನಂತರ ಪೋಷಕರು ಎಕ್ಸಿಬಿಷನ್‌ನಲ್ಲಿ ಹಾಕಿದ್ದ ಸ್ಟಾಲನ್ನು ಕಿತ್ತು ಹಾಕಿರುವ ಘಟನೆ ನಡೆದಿದೆ. ಸ್ಮೋಕ್ ಬಿಸ್ಕೆಟ್ ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ಹರಿಬಿಟ್ಟಿದ್ದಾರೆ. ಈ ಘಟನೆ ಸಂಬಂಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.