NewBorn Death: ನವಜಾತ ಶಿಶುವನ್ನು ಇಡೀ ದಿನ ಬಿಸಿಲಿನಲ್ಲಿ ಮಲಗಿಸಿ ಕೊಂದ ತಂದೆ

Share the Article

NewBorn Death: ಪೋಷಕರು ಹೆಚ್ಚಾಗಿ ತಮ್ಮ ಮಗುವನ್ನು ಚಳಿಗಾಲದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಬೆಳಗ್ಗೆಯ ಎಳೆ ಬಿಸಿಲು ಮಗುವಿಗೆ ತಾಗಿದರೆ ಆರೋಗ್ಯಕ್ಕೆ ಉತ್ತಮ ಎಂದು ನಂಬುವವರು ಹೆಚ್ಚು. ಆದರೆ ಇಡೀ ದಿನ ಮಗುವನ್ನು ಬಿಸಿಲಿಗೊಡ್ತೀರಾ? ಕೇಳಿದರೆ ಎಲ್ಲಾ ಪೋಷಕರು ನೋ ಎಂದು ಹೇಳುತ್ತಾರೆ. ಅಲ್ವಾ? ಆದರೆ ಇಲ್ಲೊಬ್ಬ ವ್ಯಕ್ತಿ ಸೂರ್ಯನ ಕಿರಣಗಳು ತಾಕಿದರೆ ಅತಿಮಾನುಷ ಸಾಮರ್ಥ್ಯ ಆತನಿಗೆ ಬರುತ್ತದೆ ಎಂದು ನಂಬಿ ಹಾಲು ಕೂಡಾ ಕೊಡದೆ ಇಡೀ ದಿನ ಬಿಸಿಲಿಗೊಡ್ಡಿದ್ದರಿಂದ ಮಗು ಸಾವಿಗೀಡಾಗಿತ್ತು.

ಇದನ್ನೂ ಓದಿ: Railway Recruitment 2024: ನಿರುದ್ಯೋಗಿಗಳಿಗೆ ಒಳ್ಳೆ ಸುದ್ದಿ ನೀಡಿದ ರೈಲ್ವೆ ಇಲಾಖೆ : 4,660 RPF ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ

ಇದೀಗ ಹಸುಗೂಸಿನ ಸಾವಿಗೆ ಕಾರಣವಾದ ವ್ಯಕ್ತಿಗೆ ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದಿರುವುದು ರಷ್ಯಾದಲ್ಲಿ ನಡೆದಿದೆ.

ಮಗು ಅಪೌಷ್ಠಿಕತೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ. ಉದ್ದೇಶಪೂರ್ವಕವಾಗಿಯೇ ಗಂಭೀರವಾದ ದೈಹಿಕ ಹಾನಿಯನ್ನು ಮಾಡಿರುವುದಾಗಿ ನ್ಯಾಯಾಲಯ ಹೇಳಿದ್ದು, ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Rama Navami: ರಾಮ ನವಮಿಯ ದಿನದಂದು ಅಯೋಧ್ಯೆಯಲ್ಲಿ ಪವಾಡ! ಇದನ್ನು ನಾವೂ ಕೂಡ ನೋಡಬಹುದು

ಶಿಕ್ಷೆಗೆ ಮುನ್ನ ತನ್ನ ಅಂತಿಮ ನ್ಯಾಯಾಲಯದ ವಿಚಾರಣೆಗೆ ಹಾಜರಾದಾಗ ಈತ ತನ್ನ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವುದಾಗಿ ವರದಿ ಆಗಿದೆ.

Leave A Reply