Dharawada: ಮದ್ಯಕ್ಕಾಗಿ ಶೋಧಿಸಿದಾಗ ಸಿಕ್ತು ಕಂತೆ ಕಂತೆ ಹಣ; ಪತ್ತೆಯಾಯ್ತು 16 ಕೋಟಿ ಹಣ
Dharawada: ಚುನಾವಣೆ ಸಂದರ್ಭ ವಿತರಿಸಲು ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿ ನಡೆದ ದಾಳಿ ವೇಳೆ ಕೋಟಿಗಟ್ಟಲೇ ಹಣ ಪತ್ತೆಯಾಗಿದೆ.
ಇದನ್ನೂ ಓದಿ: CET: ರಾಜ್ಯಾದ್ಯಂತ ನಾಳೆ, ನಾಡಿದ್ದು ಸಿಇಟಿ
ನಗರದ ದಾಸನಕೊಪ್ಪ ವೃತ್ತದ ಬಳಿಯ ನಾರಾಯಣಪುರ 2ನೇ ಮುಖ್ಯ ರಸ್ತೆಯ ಅಪಾರ್ಟ್ಮೆಂಟ್ವೊಂದರಲ್ಲಿ ಮಂಗಳವಾರ ಮದ್ಯ ದಾಸ್ತಾನು ಮಾಡಲಾಗಿದೆ ಎಂಬ ಅನಾಮಧೇಯ ಕರೆ ಬೆನ್ನತ್ತಿ ಬಂದ ಅಬಕಾರಿ ಅಧಿಕಾರಿಗಳ ತಂಡವು ಮದ್ಯಕ್ಕಾಗಿ ಹುಡುಕಾಡಿದೆ. ಈ ವೇಳೆ ಮದ್ಯದ ಬದಲು ಕಂತೆ- ಕಂತೆ ಹಣ ಪತ್ತೆಯಾಗಿದೆ.
ಇದನ್ನೂ ಓದಿ: Karwara: ಶಾಸಕ ವಸಂತ್ ಅಸ್ನೋಟಿಕರ್ ಶೂಟೌಟ್ ಪ್ರಕರಣ: ಆರೋಪಿ ರಾಜನ್ ಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್
ಈ ಬಗ್ಗೆ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಚುನಾವಣಾಧಿಕಾರಿ, ಹಣದ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಹಣದ ಮೊತ್ತವು 10 ಲಕ್ಷ ರೂ.ಗಿಂತ ಹೆಚ್ಚಾಗಿದ್ದ ಕಾರಣ ಈ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.
ಐಟಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಹಣ ಹಸ್ತಾಂತರ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸವರಾಜ ದತ್ತಾ ಎಂಬುವವರು ಹಣದೊಂದಿಗೆ ಸಿಕ್ಕಿ ಬಿದ್ದಿದ್ದು, 18 ಕೋಟಿ ರೂ. ಹಣ ಇರುವ ಬಗ್ಗೆ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹಣದ ಮೊತ್ತ ಇನ್ನೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. 2 ಯಂತ್ರಗಳ ನೆರವಿನಿಂದ ತಡರಾತ್ರಿವರೆಗೂ ಎಣಿಕೆ ಮುಂದುವರಿದಿತ್ತು.