Home ದಕ್ಷಿಣ ಕನ್ನಡ Bantwala: ಅಪ್ಪ, ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Bantwala: ಅಪ್ಪ, ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Bantwala
Image Credit: HT

Hindu neighbor gifts plot of land

Hindu neighbour gifts land to Muslim journalist

Bantwala: ಮಹಿಳೆಯೋರ್ವರು ಅಪ್ಪ ಹಾಗೂ ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫರಂಗಿಪೇಟೆಯಲ್ಲಿ ಈ ಘಟನೆ ನಿನ್ನೆ ನಡೆದಿರುವ ಕುರಿತು ವರದಿಯಾಗಿದೆ.

ಕುಮ್ಡೇಲು ನಿವಾಸಿ ಉಮೇಶ್‌ ಬೆಳ್ಚಪಾಡರ ಪತ್ನಿ ಯಶೋಧಾ (38) ಎಂಬುವವರೇ ಮೃತ ಮಹಿಳೆ. ಮಹಿಳೆಯ ಪುತ್ರಿ ಸಂಪ್ರೀತಾ ನೀಡಿದ ದೂರಿನಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಗಂಡ 10 ವರ್ಷದ ಹಿಂದೆಯೇ ಇವರನ್ನು ಬಿಟ್ಟು ಹೋಗಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಸಿಇಟಿ’ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ !! ಪೋಷಕರೇ, ವಿದ್ಯಾರ್ಥಿಗಳೇ ಮಿಸ್ ಮಾಡದೆ ಗಮನಿಸಿ

ಮೂರ್ಛೆ ರೋಗದಿಂದ ಬಳಲುತ್ತಿದ್ದ ಯಶೋಧಾ ಅವರು, ಮಂಗಳವಾರ ಎಂದಿನಂತೆ ಎದ್ದು ಕೆಎಸ್‌ಆರ್‌ಟಿಸಿ ಬಿಜೈ ಬಸ್‌ಸ್ಟ್ಯಾಂಡ್‌ಗೆ ಕೆಲಸಕ್ಕೆಂದು ಹೋಗಿದ್ದಾರೆ. ಅನಂತರ 9 ಗಂಟೆಗೆ ಮನೆಗೆ ಕರೆ ಮಾಡಿ ನಾನು ಫರಂಗಿಪೇಟೆಯಲ್ಲಿರುವುದಾಗಿಯೂ, ನನಗೆ ಬದುಕಲು ಇಷ್ಟವಿಲ್ಲ, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಫೋನ್‌ ಕಟ್‌ ಮಾಡಿದ್ದಾರೆ.

ಇದನ್ನೂ ಓದಿ: Abhradeep Saha Death: ಖ್ಯಾತ ಯೂಟ್ಯೂಬರ್‌ 27 ವರ್ಷದ ಆಂಗ್ರಿ ರ್ಯಾಂಟ್‌ಮ್ಯಾನ್‌ ಸಾವು

ಕೂಡಲೇ ಪುತ್ರಿ. ಹಾಗೂ ತಂದೆ ಬಾಲಕೃಷ್ಣ ರಿಕ್ಷಾದಲ್ಲಿ ಫರಂಗಿಪೇಟೆಗೆ ಬಂದಾಗ ಯಶೋಧಾ ಅವರು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದ್ದು, ಓಡಿ ಹೋಗಿ ನದಿ ಕಿನಾರೆ ಬಳಿ ಹಿಡಿದಾಗ, ಪುತ್ರಿ ಹಾಗೂ ತಂದೆಯ ಕೈಯನ್ನು ದೂಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.